Advertisement

ಬೀದಿ ನಾಟಕದಿಂದ ಅಭಿವೃದ್ಧಿ ಯೋಜನೆಗಳ ಜಾಗೃತಿ

10:56 AM Sep 11, 2019 | Team Udayavani |

ಹಾವೇರಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತಂತೆ ಬೀದಿ ನಾಟಕ ಹಾಗೂ ಜಾನಪದ ಸಂಗೀತಗಳ ಮೂಲಕ ಗ್ರಾಮೀಣ ಜನರಿಗೆ ಅರಿವು ಮೂಡಿಸುವ ಗ್ರಾಮ ಸಂಪರ್ಕ ಕಾರ್ಯಕ್ರಮ ಜಿಲ್ಲೆಯ ವಿವಿಧೆಡೆ ನಡೆಯಿತು.

Advertisement

ಬ್ಯಾಡಗಿ ತಾಲೂಕಿನ ಆಯ್ದ ಗ್ರಾಮಗಳಲ್ಲಿ ಮಲ್ಲಿಕಾರ್ಜುನ ಜಾನಪದ ಕಲಾತಂಡ ಬೀದಿನಾಟಕ ಹಾಗೂ ವೀರಭದ್ರೇಶ್ವರ ಸಂಗೀತ ಕಲಾತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಅತ್ತಿಕಟ್ಟಿ, ಸೂಡಂಬಿ, ಘಾಳಪೂಜಿ, ದುಮ್ಮಿನಹಾಳ, ಕುಮ್ಮೂರ, ನೆಲ್ಲಿಕೊಪ್ಪ, ಶಿಡೇನೂರ, ಶಿವಾಜಿನಗರ, ಕಾಗಿನೆಲೆ, ಇಂಗಳಗೊಂದಿ, ಕೆರವಡಿ, ಚಿನ್ನಕಟ್ಟಿ, ಮಾಸಣಗಿ, ಅಂಗಾರಗಟ್ಟಿ, ಗುಂಡೇನಹಳ್ಳಿ, ಕದಮನಹಳ್ಳಿ, ಬಿಸಲಹಳ್ಳಿ, ಬೆಳಕೇರಿ, ಕಲ್ಲೇದೇವರ, ಸೇವಾನಗರ ಗ್ರಾಮಗಳಲ್ಲಿ ಪ್ರದರ್ಶನ ನಡೆಯಿತು. ಪ್ರಧಾನಮಂತ್ರಿ ಕೃಷಿ ಸಮ್ಮಾನ್‌ ಯೋಜನೆ, ಕೃಷಿಹೊಂಡ ನಿರ್ಮಾಣ, ಮೀನುಗಾರರ ಸಾಲಮನ್ನಾ, ನೇಕಾರರ ಸಾಲಮನ್ನಾ ಸೇರಿದಂತೆ ವಿವಿಧ ಯೋಜನೆಗಳ ವಿವರ, ಆ ಯೋಜನೆಗಳ ಪ್ರಯೋಜನ, ಸಾರ್ವಜನಿಕರು ಈ ಯೋಜನೆಗಳ ಪಡೆಯುವ ನಿಟ್ಟಿನಲ್ಲಿ ಅನುಸರಿಸಬೇಕಾದ ಕ್ರಮ, ಸಂಪರ್ಕಿಸಬೇಕಾದ ಇಲಾಖೆ, ಯೋಜನೆಗಳ ಫಲಾನುಭವಿಗಳ ಯಶೋಗಾಥೆಗಳ ಕುರಿತಂತೆ ಅತ್ಯಂತ ಪರಿಣಾಮಕಾರಿ ಹಾಡು, ಸಂಗೀತ, ನೃತ್ಯ ಹಾಗೂ ಅಭಿನಯಗಳ ಮೂಲಕ ಮನಮುಟ್ಟುವಂತೆ ಅಭಿನಯಿಸಿದರು. ಕೆರವಡಿ ಗ್ರಾಮದ ಮಾಲತೇಶ ಹಾಗೂ ಮಾಸಣಗಿ ಗ್ರಾಮದ ರೈತ ಬಸವರಾಜ ಮಾತನಾಡಿ, ಸರ್ಕಾರ ರೈತರಿಗೆ ಹಾಗೂ ಗ್ರಾಮಸ್ಥರಿಗೆ ಹಲವು ಯೋಜನೆಗಳು ಜಾರಿ ಮಾಡಿದ್ದರೂ ಅವುಗಳನ್ನು ಪಡೆಯಲು ಯಾರನ್ನು ಸಂಪರ್ಕಿಸಬೇಕು, ಯಾವ ಯೋಜನೆಗಳಿವೆ ಎಂಬುದು ತಿಳಿದಿರಲಿಲ್ಲ. ಬೀದಿನಾಟಕ ಮತ್ತು ಸಂಗೀತದ ಮೂಲಕ ನಮಗೆ ತಿಳಿವಳಿಕೆ ಬಂದಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next