Advertisement

ಜಾಗೃತಿ ಮೂಡಿಸುತ್ತಿರುವ ಪೊಲೀಸರು

06:28 PM Mar 27, 2020 | Suhan S |

ಮುಂಬಯಿ, ಮಾ. 26: ಸಾಂಕ್ರಾಮಿಕ ರೋಗ ಕೋವಿಡ್ 19 ವೈರಸ್‌ ಹರಡುವಿಕೆಯ ಮಧ್ಯೆ ಮಹಾರಾಷ್ಟ್ರದ ಹೆಚ್ಚಿನ ಭಾಗಗಳಲ್ಲಿ ಜನ ಜೀವನವು ಬಹುತೇಕ ಸ್ಥಗಿತಗೊಂಡಿದೆ. ದೇಶದಲ್ಲಿ ಒಟ್ಟು ಸಕಾರಾತ್ಮಕ ಪ್ರಕರಣಗಳ ಪಟ್ಟಿಯಲ್ಲಿ ಮಹಾರಾಷ್ಟ್ರವು ಅಗ್ರಸ್ಥಾನದಲ್ಲಿದೆ. ಈ ಎಲ್ಲ ಗೊಂದಲಗಳ ಮಧ್ಯೆ, ಮಹಾರಾಷ್ಟ್ರ ಪೊಲೀಸರು ನಾಗರಿಕರನ್ನು ತಮ್ಮ ಬುದ್ದಿವಂತಿಕೆಯಿಂದ ಮನೆಯಿಂದ ಹೊರಬಾರದಂತೆ ನೋಡಿಕೊಳ್ಳಲು ಮುಂದಾಗಿದ್ದಾರೆ.

Advertisement

ಮುಂಬಯಿ, ಪುಣೆ ಮತ್ತು ನಾಗಪುರ ಪೊಲೀಸರು ನಾಗರಿಕರಿಗೆ ಕೊರೊನಾ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಕೋವಿಡ್ 19 ವೈರಸ್‌ ಕಾರಣದಿಂದಾಗಿ ದೇಶದಲ್ಲಿ ಲಾಕ್‌ ಡೌನ್‌ ಜಾರುಯಾದರೂ ರಾಜ್ಯ ಪೊಲೀಸ್‌ ಪಡೆಗಳು ಕೋವಿಡ್ 19 ವೈರಸ್‌ ವಿರುದ್ಧ ಹೋರಾಡಲು ತಮ್ಮದೇ ಆದ ಪ್ರಯತ್ನಗಳನ್ನು ಮಾಡುತ್ತಿವೆ. ನಾಗರಿಕರಿಗೆ ಕೋವಿಡ್ 19 ಬಗ್ಗೆ ಸಾಮಾನ್ಯ ಶಿಕ್ಷಣ ನೀಡುವುದರಿಂದ ಹಿಡಿದು ಸರಿಯಾಗಿ ಕೈ ತೊಳೆಯುವುದು, ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳಲು ಸಾರ್ವಜನಿಕ ಪ್ರಕಟನೆಗಳನ್ನು ಮಾಡುವುದು, ಕೋವಿಡ್ 19 ವೈರಸ್‌ ಹರಡುವಿಕೆಯ ಬಗ್ಗೆ ಜನರಿಗೆ ಮಾಹಿತಿ ಮತ್ತು ಕೋವಿಡ್ 19 ವೈರಸ್‌ ವಿರುದ್ಧ ಹೋರಾಡಲು ತನ್ನದೇ ಆದ ಶಕ್ತಿಯನ್ನು ಸಂವೇದಿಸುವುದರೊಂದಿಗೆ ಸಾಂಕ್ರಾಮಿಕ ರೋಗವನ್ನು ಹೇಗೆ ಎದುರಿಸಬೇಕು ಎಂಬುದರ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದ್ದಾರೆ.

ಕೋವಿಡ್ 19  ವೈರಸ್‌ ರೋಗಿಗಳ ಸಂಪರ್ಕ ತಡೆಯನ್ನು ತೊರೆದ ಕೆಲವು ಪ್ರಕರಣಗಳು ಇತ್ತೀಚೆಗೆ ಬೆಳಕಿಗೆ ಬಂದಿವೆ. ಇದನ್ನು ನಿಗ್ರಹಿಸುವ ಸಲುವಾಗಿ, ಮುಂಬಯಿ ಪೊಲೀಸರ ಸೋಷಿಯಲ್‌ ಮೀಡಿಯಾ ತಂಡವು ಈ ಕ್ವಾರೆಂಟೈನ್‌ ಪೋಸ್ಟ್‌ನೊಂದಿಗೆ ಬಂದಿದ್ದು, ಇದು ಜಾಗೃತಿ ಮೂಡಿಸುವುದಲ್ಲದೆ, ಕ್ವಾರೆಂಟೈನ್‌ನಿಂದ ಪಲಾಯನ ಮಾಡುವವರಿಗೆ ಎಚ್ಚರಿಕೆಯಾಗಿಯೂ ಕಾರ್ಯನಿರ್ವಹಿಸಿದೆ.

ಜನರು ಮನೆಯೊಳಗೆ ಇರಬೇಕೆಂದು ಒತ್ತಾಯಿಸುತ್ತಾ, ಮುಂಬಯಿ ಪೊಲೀಸರು ಈ ಮಾಹಿತಿಯುಕ್ತ ಟ್ವೀಟ್‌ನಲ್ಲಿ ವಿದೇಶದ ಕುಟುಂಬಗಳು ಎಲ್ಲಿಂದಲಾದರೂ ಹಿಂದಿರುಗಿದ್ದರೆ ತಮ್ಮನ್ನು ತಾವು ಸ್ವಯಂ ನಿರ್ಬಂಧಿಸುವಂತೆ ಹೇಳಿಕೊಂಡಿದ್ದಾರೆ. ಕೋವಿಡ್ 19  ವೈರಸ್‌ ಅನ್ನು ಸೋಲಿಸಲು ಅವರು ಕೈ ತೊಳೆಯಬೇಕು ಮತ್ತು ಸಾಮಾಜಿಕ ದೂರವನ್ನು ಕಾಯ್ದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಕೋವಿಡ್ 19  ವೈರಸ್‌ ವಿರುದ್ಧದ ಈ ಹೋರಾಟದಲ್ಲಿ ನಾವು ನಿಮ್ಮೊಂದಿಗಿದ್ದೇವೆ ಎಂದು ಭರವಸೆ ನೀಡಿದ್ದಾರೆ. ಮುಂಬಯಿ, ಪುಣೆ ಮತ್ತು ನಾಗಪುರ ಪೊಲೀಸರು ನಾಗರಿಕರಿಗೆ ಕೊರೊನಾ ವೈರಸ್‌ ವಿರುದ್ಧ ಹೋರಾಡಲು ಜನಸಂದಣಿಯ ಸ್ಥಳಗಳನ್ನು ಹೇಗೆ ತಪ್ಪಿಸಬೇಕು ಎಂಬುದರ ಕುರಿತು ನಾಗರಿಕರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next