Advertisement
ಮಾಟುಂಗ ಪೂರ್ವದ ಮೈಸೂರು ಅಸೋಸಿಯೇಶನ್ ಸಭಾಗೃಹದಲ್ಲಿ ಕನ್ನಡ ಜನಶಕ್ತಿ ಕೇಂದ್ರ ಬೆಂಗಳೂರು, ನರಹಳ್ಳಿ ಪ್ರತಿಷ್ಠಾನ ಬೆಂಗಳೂರು ಮತ್ತು ಮೈಸೂರು ಅಸೋಸಿಯೇಶನ್ ಮುಂಬಯಿ ಇವರ ಆಶ್ರಯದಲ್ಲಿ ಫೆ. 6ರಂದು ಪೂರ್ವಾಹ್ನ ನಡೆದ 2021 ನೇ ಸಾಲಿನ ಡಾ| ನರಹಳ್ಳಿ ಪ್ರತಿಷ್ಠಾನ ಕೊಡಮಾಡುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಡಾ| ಜಿ. ಎನ್. ಉಪಾಧ್ಯ ಅವರು ಮಾಡುತ್ತಿರುವ ಕನ್ನಡದ ಸೇವೆ ಮಹತ್ತರವಾದುದು. ನಾಡು- ನುಡಿ ಯನ್ನು ಮರಾಠಿ ಮಣ್ಣಿನಲ್ಲಿ ಉಳಿಸಿ-ಬೆಳೆಸಲು ಕನ್ನಡ ವಿಭಾಗ ಮಾಡುತ್ತಿರುವ ಸೇವೆ ಶ್ಲಾಘನೀಯ ವಾಗಿದೆ ಎಂದು ತಿಳಿಸಿ ಡಾ| ಜಿ. ಎನ್. ಉಪಾಧ್ಯ ಅವರನ್ನು ಅಭಿನಂದಿಸಿ ಶುಭ ಹಾರೈಸಿದರು.
Related Articles
Advertisement
ಸಮಾರಂಭದಲ್ಲಿ ಡಾ| ಉಪಾಧ್ಯ ಅವರ ಕುರಿತಾದ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಮೈಸೂರು ಅಸೋಸಿಯೇಶನ್‌ನ ಟ್ರಸ್ಟಿ, ಸಂಘಟಕ ಮಂಜುನಾಥಯ್ಯ ಶುಭ ಹಾರೈಸಿದರು. ಕಾರ್ಯ ಕ್ರಮಕ್ಕೆ ಸಹಕರಿಸಿದ ಮೈಸೂರು ಅಸೋಸಿಯೇಶನ್ ಮುಂಬಯಿ, ಐಲೇಸಾದ ರೂವಾರಿಗಳಲ್ಲೊಬ್ಬರಾದ ರಂಗಕಲಾವಿದ ಸುರೇಂದ್ರ ಕುಮಾರ್ ಮಾರ್ನಾಡ್, ಲತೇಶ್ ಪೂಜಾರಿ ಅವರನ್ನು ಗೌರವಿಸಲಾಯಿತು.
ಮೈಸೂರು ಅಸೋಸಿಯೇಶನ್‌ನ ಟ್ರಸ್ಟಿ, ರಂಗಕರ್ಮಿ ಡಾ| ಮಂಜುನಾಥ್, ಸಂಘಟಕ ಮಂಜು ನಾಥಯ್ಯ, ಅಸೋಸಿಯೇಶನ್‌ನ ಕಾರ್ಯ ದರ್ಶಿ ಡಾ| ಗಣಪತಿ ಶಂಕರಲಿಂಗ ಉಪಸ್ಥಿತರಿದ್ದರು. ಐಲೇಸಾ ದಿ ವಾಯ್ಸ… ಆಫ್ ಓಶಿಯನ್ ಇವರು ತಾಂತ್ರಿಕವಾಗಿ ಸಹಕರಿಸಿದರು. ಸಂಘಟಕ, ಲೇಖಕ ಪೇತ್ರಿ ವಿಶ್ವನಾಥ್ ಶೆಟ್ಟಿ, ಚಿತ್ರಕಲಾವಿದ ಜಯ್ ಸಾಲ್ಯಾನ್, ಕಲಾ ಭಾಗÌತ್ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಝೂಮ್ ಮುಖಾಂತರ ನಡೆದ ಕಾರ್ಯಕ್ರಮದಲ್ಲಿ ಡಾ| ಬಾಲಸುಬ್ರಹ್ಮಣ್ಯ ನರಹಳ್ಳಿ, ರಜನಿ ನರಹಳ್ಳಿ, ಡಾ| ಲೀಲಾ, ಮಿತ್ರಾ ವೆಂಕಟ್ರಾಜ್, ಕವಿ ಶಾಂತಾರಾಮ ಶೆಟ್ಟಿ, ಸಂಘಟಕರಾದ ಅಬುಧಾಬಿ ಸರ್ವೋತ್ತಮ ಶೆಟ್ಟಿ, ರವಿ ಶೆಟ್ಟಿ ಕತಾರ್ ಸಹಿತ ವಿದ್ವಾಂಸರು, ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಇಂಪಿನ ಗುಂಪಿನ ಪ್ರೇಮಾ ಉಪಾಧ್ಯ ಅವರ ಶಿಷ್ಯೆ ಪ್ರೀತಿ ಎಸ್. ರೆಡ್ಡಿ ಅವರ ಸ್ವಾಗತಗೀತೆಯೊಂದಿಗೆ ಆರಂಭಿಸಲಾಯಿತು. ನಳಿನಾ ಪ್ರಸಾದ್ ಗುರುಗಳನ್ನು ಕುರಿತ ಸ್ವರಚಿತ ಕವನ ವಾಚನ ಮಾಡಿದರು.
ಮುಂಬಯಿ ವಿವಿ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ನಿರೂಪಿಸಿದರು. ಮೈಸೂರು ಅಸೋಸಿಯೇಶನ್ ಕಾರ್ಯದರ್ಶಿ ಡಾ| ಗಣಪತಿ ಶಂಕರಲಿಂಗ ವಂದಿಸಿದರು.
ಮುಂಬಯಿ ಕನ್ನಡಿಗರಿಗೆ ಸಂದ ಗೌರವ :
ಈ ಪ್ರಶಸ್ತಿ ಮುಂಬಯಿ ಕನ್ನಡಿಗರಿಗೆ ಸಂದ ಗೌರವ. ನಾನು ಮಲ್ಲಿಗೆ ಹಾರದಲ್ಲಿ ದಾರವಾಗಿ ಪೋಣಿಸುವ ಕೆಲಸ ಮಾತ್ರ ಮಾಡಿದ್ದೇನೆ. ನರಹಳ್ಳಿ ಪ್ರಶಸ್ತಿ ಇಂದು ಸೀಮೋಲ್ಲಂಘನ ಮಾಡಿದೆ. ರಾಷ್ಟ್ರ ಮಟ್ಟದಲ್ಲಿ ಕನ್ನಡವನ್ನು ಬೆಳೆಸುವುದರಲ್ಲಿ, ಬೆಳಗಿಸುವುದರಲ್ಲಿ ನಾವು ಸೋತಿದ್ದೇವೆ. ಕನ್ನಡಿಗರು ಕನ್ನಡಿಗರನ್ನು ಗುರುತಿಸುವುದರಲ್ಲಿ ಸೋತಿದ್ದಾರೆ. ಕನ್ನಡ ಸಾಹಿತಿಗಳಾದ ಹಾ. ಮಾ. ನಾಯಕ, ಶಿವರಾಮ ಕಾರಂತ, ಗಿರೀಶ್ ಕಾರ್ನಾಡ್, ಎಸ್. ಎಲ್. ಭೈರಪ್ಪ ಮೊದಲಾದ ಕನ್ನಡದ ದಿಗ್ಗಜ ಸಾಹಿತಿಗಳು ಮಾಡಿದ ಕನ್ನಡದ ಸೇವೆಯನ್ನು ಇಲ್ಲಿನ ಮರಾಠಿಗರು ಗುರುತಿಸಿ ಮಣೆ ಹಾಕಿರುವುದು ಕನ್ನಡಿಗರಿಗೆ ಹೆಮ್ಮೆ. ನಾವೆಲ್ಲ ರಾಷ್ಟ್ರ ಮಟ್ಟದಲ್ಲಿ ಕನ್ನಡದ ವಕ್ತಾರರಾಗಿ ಸಮರೋಪಾದಿಯಲ್ಲಿ ಕನ್ನಡದ ಕೆಲಸ ಮಾಡುವ ಅನಿವಾರ್ಯವಿದೆ. ಈ ಪ್ರಶಸ್ತಿಯನ್ನು ಸ್ವೀಕರಿಸಿರುವುದರಿಂದ ಜವಾಬ್ದಾರಿ ಹೆಚ್ಚಿದೆ. ನಿಮ್ಮೆಲ್ಲರ ಪ್ರೀತಿ, ಗೌರವಕ್ಕೆ ಆಭಾರಿಯಾಗಿದ್ದೇನೆ. ನಿಮ್ಮೆಲ್ಲರ ಪ್ರೀತಿ, ಗೌರವ, ಪ್ರೋತ್ಸಾಹದಿಂದ ಕನ್ನಡದ ಕೆಲಸಗಳು ನಡೆಯುತ್ತಿವೆ.– ಡಾ| ಜಿ. ಎನ್. ಉಪಾಧ್ಯ ಪ್ರತಿಷ್ಠಿತ ನರಹಳ್ಳಿ ಪ್ರಶಸ್ತಿ ಪುರಸ್ಕೃತರು