Advertisement

ಸ್ವಸ್ತಿಶ್ರೀ ಭಟ್ಟಾರಕ ಪುರಸ್ಕಾರ ಪ್ರದಾನ

09:10 PM Apr 20, 2019 | Sriram |

ಮೂಡುಬಿದಿರೆ:ಧಾರ್ಮಿಕ ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ.ಉತ್ಸವಗಳಿಂದ ಧಾರ್ಮಿಕ ಪ್ರಜ್ಞೆ ಜಾಗೃತವಾಗುತ್ತದೆ ಎಂದು ಅಳದಂಗಡಿ ಅರಮನೆಯ ಶಿವಪ್ರಸಾದ್‌ ಅಜಿಲ ಹೇಳಿದರು.

Advertisement

ಸಾವಿರ ಕಂಬದ ಬಸದಿ ಆವರಣದಲ್ಲಿ ಶುಕ್ರವಾರ ರಾತ್ರಿ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರ ಹಿರಿತನದಲ್ಲಿ ನಡೆದ ಹಿರಿಯ ರಥೋತ್ಸವ,ಶ್ರಮಣ ಸಂಸ್ಕೃತಿ ಸಮ್ಮೇಳನ,ಸ್ವಸ್ತಿಶ್ರೀ ಭಟ್ಟಾರಕ ಪುರಸ್ಕಾರ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತೀಯ ಜೈನ್‌ ಮಿಲನ್‌ ವಲಯ 8ರ ಅಧ್ಯಕ್ಷ ಪುಷ್ಪರಾಜ್‌ ಜೈನ್‌ “ಶ್ರಮಣ ಜ್ಯೋತಿ’ಬೆಳಗಿದರು.
ಪೂಂಜಾಲಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಗಣಪತಿ ಭಟ್‌ ಕುಳಮರ್ವ ಪ್ರಧಾನ ಉಪನ್ಯಾಸ ನೀಡಿದರು.

ಸ್ವಸ್ತಿಶ್ರೀ ಭಟ್ಟಾರಕ ಪುರಸ್ಕಾರ
ಈ ಸಂದರ್ಭ ಸಂಶೋಧಕ,ಸಾಹಿತಿ ಡಿ.ಎನ್‌. ಅಕ್ಕಿಗೋಗಿ,ವಿಧಾನಸೌಧದ ಅಖೀಲ ಕರ್ನಾಟಕ ಜೈನ ಅಲ್ಪಸಂಖ್ಯಾಕ ನೌಕರರ ಸಂಘದ ಅಜಿತ್‌ ಮುರಗೊಂಡ ಹಾಗೂ ಮೂಡುಬಿದಿರೆ ಜೈನ್‌ ಮಿಲನ್‌ ಅಧ್ಯಕ್ಷೆ ಶ್ವೇತಾ ಜೈನ್‌ ಇವ ರಿಗೆ ಸ್ವಸ್ತಿಶ್ರೀ ಭಟ್ಟಾರಕ ಪುರಸ್ಕಾರ ಪ್ರದಾನ ಮಾಡಲಾಯಿತು.ಅವಿಭಜಿತ ದ.ಕ.ಜಿಲ್ಲಾ ವ್ಯಾಪ್ತಿಯ ಕೆನರಾ ಬಸ್‌ ಮಾಲಕರ ಸಂಘದ ಅಧ್ಯಕ್ಷ ಕೆ. ರಾಜವರ್ಮ ಬಲ್ಲಾಳ್‌,ಉದ್ಯಮಿ ಶೈಲೇಂದ್ರ ಕುಮಾರ್‌ ಮುಖ್ಯ ಅತಿಥಿಗಳಾಗಿದ್ದರು.ಮಠದ ವ್ಯವಸ್ಥಾಪಕ ಸಂಜಯಂತ್‌ ಕುಮಾರ್‌ ಸ್ವಾಗತಿಸಿದರು.ಗಣೇಶ್‌ ಪ್ರಸಾದ್‌ ಜೀ ನೆಲ್ಲಿಕಾರು ಕಾರ್ಯಕ್ರಮ ನಿರೂಪಿಸಿದರು.ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ, ಹಿರಿಯ ರಥೋತ್ಸವ ಜರಗಿತು.

Advertisement

Udayavani is now on Telegram. Click here to join our channel and stay updated with the latest news.

Next