Advertisement

ಸಸ್ಪೆನ್ಸ್‌-ಕಾಮಿಡಿ ಟ್ರೇಲರ್‌ನಲ್ಲಿ ಅವತಾರ ಪುರುಷ ಕಮಾಲ್‌

12:58 PM May 04, 2022 | Team Udayavani |

ಕಾಮಿಡಿ ಕಿಂಗ್‌ ಶರಣ್‌ ಅಭಿನಯದ ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಚಿತ್ರ “ಅವತಾರ ಪುರುಷ’ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ.

Advertisement

ಇದರ ಅಂಗವಾಗಿ ಅವತಾರ ಪುರುಷ ಚಿತ್ರ ತಂಡ ತನ್ನ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿದ್ದು, ಸಿನಿ ಪ್ರೇಕ್ಷಕರಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ತಾಯಿ ಸೆಂಟಿಮೆಂಟ್‌ನೊಂದಿಗೆ ಪ್ರಾರಂಭವಾಗುವ ಚಿತ್ರದ ಟ್ರೇಲರ್‌ನಲ್ಲಿ ಕಾಮಿಡಿ ಹಾಗೂ ಸಸ್ಪೆನ್ಸ್‌ ಥ್ರಿಲ್ಲರ್‌ ಜೊತೆ ಮಾಟ ಮಂತ್ರದ ಹಾರರ್‌ ಟಚ್‌ ಸಹ ಇದೆ. ಸಿಂಪಲ್‌ ಸುನಿಯವರ ಚಿತ್ರದಲ್ಲಿ ಇದುವರೆಗೂ ಕಾಣದ ವಿಭಿನ್ನ ಆಯಾಮಗಳು ಚಿತ್ರದಲ್ಲಿದ್ದು, ತಮ್ಮ ಕೈಚಳಕವನ್ನು ನಿರ್ದೇಶನದ ಮೂಲಕ ತೋರ್ಪಡಿಸಿದ್ದಾರೆ.

ಇದನ್ನೂ ಓದಿ: ದಾಖಲೆಗೆ ಫೌಂಡೇಶನ್‌ ಹಾಕಿದ್ದೇ ನಾನು! ; ಕೆಜಿಎಫ್-2 ಬಗ್ಗೆ ಕ್ರೇಜಿ ಸ್ಟಾರ್ ಮಾತು

ಶರಣ್‌ ಅಂದ ಮೇಲೆ ಅಲ್ಲಿ ಕಾಮಿಡಿ ಇಲ್ಲಾ ಅನ್ನುವಂತಿಲ್ಲ. ತಮ್ಮ ಕಾಮಿಡಿ ಟೈಮಿಂಗ್‌, ಡೈಲಾಗ್‌ಗಳ ಮೂಲಕವೇ ಟ್ರೇಲರ್‌ನಲ್ಲಿ ಕಚಗುಳಿ ಹೆಚ್ಚಿಸಿದ್ದಾರೆ. ಟ್ರೇಲರ್‌ನಲ್ಲಿರುವ ಹಾರರ್‌ ಟಚ್‌ ಹೈಪ್‌ ಸೃಷ್ಟಿಸಿದ್ದು, ಅಭಿಮಾನಿಗಳು ಟ್ರೇಲರ್‌ ನೋಡಿಯೇ ಫಿದಾ ಆಗಿದ್ದಾರೆ. “ಪುಷ್ಕರ್‌ ಫಿಲಂಸ್‌’ ಬ್ಯಾನರ್‌ನಲ್ಲಿ ಪುಷ್ಕರ್‌ ಮಲ್ಲಿಕಾರ್ಜುನ ಚಿತ್ರ ನಿರ್ಮಿಸಿದ್ದು, ಚಿತ್ರದ ಕುರಿತು ಅಪಾರ ನಿರೀಕ್ಷೆ ಹೊಂದಿದ್ದಾರೆ.

Advertisement

ಲವ್‌, ಕಾಮಿಡಿ, ಡ್ರಾಮಾ ಎಲ್ಲದರ ಮಿಶ್ರಿತ ಹೂರಣ ಚಿತ್ರದ ಟ್ರೇಲರ್‌ ನಲ್ಲಿದ್ದು, ಅವತಾರ ಪುರುಷನ ದರ್ಶನಕ್ಕೆ ಸಿನಿಮಂದಿ ಕಾತರರಾಗಿದ್ದಾರೆ. ಚಿತ್ರದಲ್ಲಿ ಹಿರಿಯ ನಟಿ ಭವ್ಯಾ, ಸಾಯಿ ಕುಮಾರ್‌, ಶ್ರೀನಗರ್‌ ಕಿಟ್ಟಿ, ಆಶಿಕಾ ರಂಗನಾಥ್‌, ಬಾಲಾಜಿ ಮನೋಹರ ಮುಂತಾದ ದೊಡ್ಡ ತಾರಾ ಬಳಗವೇ ಇದೆ. ಚಿತ್ರ ಇದೇ ಮೇ 6 ರಂದು ಚಿತ್ರಮಂದಿರಗಳಲ್ಲಿ ಲಗ್ಗೆ ಇಡಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next