Advertisement

ಓಟಿಟಿ ಬಿಡುಗಡೆಗೆ ಸಿದ್ದವಾದ ಸಿಂಪಲ್ ಸುನಿ ನಿರ್ದೇಶನದ ‘ಅವತಾರ ಪುರುಷ’

04:08 PM Jun 09, 2022 | Team Udayavani |

ಶರಣ್‌ ಮತ್ತು ಆಶಿಕಾ ರಂಗನಾಥ್‌ ಮುಖ್ಯಪಾತ್ರದಲ್ಲಿರುವ ‘ಅವತಾರ ಪುರುಷ’ ಸಿನಿಮಾ ಓಟಿಟಿ ವೇದಿಕೆಯಲ್ಲಿ ಬರಲು ಸಿದ್ದವಾಗಿದೆ. ಸಿಂಪಲ್ ಸುನಿ ನಿರ್ದೇಶನದ, ಪುಷ್ಕರ್‌ ಮಲ್ಲಿಕಾರ್ಜುನಯ್ಯ ನಿರ್ಮಾಣದ ‘ಅವತಾರ ಪುರುಷ’ ಚಿತ್ರವು ಜೂನ್ 14ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ತೆರೆಕಾಣಲಿದೆ.

Advertisement

ಭಾರತದ ಮತ್ತು 240 ದೇಶಗಳು ಹಾಗೂ ಪ್ರದೇಶಗಳಲ್ಲಿನ ಪ್ರೈಮ್ ಸದಸ್ಯರು ಸಿನಿಮಾವನ್ನು ಜೂನ್‌ 14 ರಂದು ತಮ್ಮ ಮನೆಯಿಂದಲೇ ಸ್ಟ್ರೀಮ್ ಮಾಡಬಹುದು.

“ಅವತಾರ ಪುರುಷ ಕೌಟುಂಬಿಕ ಮನರಂಜನೆ ಸಿನಿಮಾ ಆಗಿದ್ದು, ಇದರಲ್ಲಿ ಕಾಮಿಡಿ, ಡ್ರಾಮಾ ಮತ್ತು ಸೂಪರ್‌ ನ್ಯಾಚುರಲ್‌ ಫ್ಯಾಂಟಸಿ ಇದೆ” ಎಂದು ಅವತಾರ ಪುರುಷ ಸಿನಿಮಾದ ನಿರ್ದೇಶಕ ಸುನಿ ಹೇಳಿದ್ದಾರೆ. “ಸಿನಿಮಾ ಥಿಯೇಟರ್‌ನಲ್ಲಿ ಬಿಡುಗಡೆಯಾದಾಗ ಪ್ರೇಕ್ಷಕರು ಉತ್ತಮವಾಗಿ ಸ್ವೀಕರಿಸಿದ್ದಾರೆ ಮತ್ತು ಜಗತ್ತಿನ ವಿವಿಧ ಭಾಗದ ಜನರು ಕೂಡ ಈ ಸಿನಿಮಾವನ್ನು ಇದೇ ರೀತಿ ಸ್ವೀಕರಿಸುತ್ತಾರೆ ಎಂಬ ವಿಶ್ವಾಸವನ್ನು ಹೊಂದಿದ್ದೇವೆ. ಸಿನಿಮಾ ಉತ್ತಮ ಮನರಂಜನೆ ನೀಡುತ್ತದೆ. ಈ ಶುಕ್ರವಾರ ನಿಮ್ಮ ಕುಟುಂಬದ ಜೊತೆಗೆ ಕುಳಿತು ನೋಡಿ” ಎನ್ನುತ್ತಾರೆ ಸಿಂಪಲ್ ಸುನಿ.

ಇದನ್ನೂ ಓದಿ:ನಯನತಾರಾ-ವಿಘ್ನೇಶ್ ವಿವಾಹ ಸಮಾರಂಭದಲ್ಲಿ ಭಾಗಿಯಾದ ರಜಿನಿಕಾಂತ್, ಶಾರುಖ್ ಖಾನ್

ಚಿತ್ರದ ಮುಖ್ಯ ಪಾತ್ರದಲ್ಲಿ ಶರಣ್‌, ಆಶಿಕಾ ರಂಗನಾಥ್‌, ಸಾಯಿ ಕುಮಾರ್ ಮತ್ತು ಸುಧಾರಾಣಿ. ಶ್ರೀನಗರ ಕಿಟ್ಟಿ ನಟಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next