Advertisement

ಕೊಲಂಬಿಯಾದಲ್ಲಿ ಭಾರಿ ಮಳೆ; ಭೂಕುಸಿತಕ್ಕೆ 250ಕ್ಕೂ ಹೆಚ್ಚು ಬಲಿ 

10:40 AM Apr 02, 2017 | Team Udayavani |

ಬೊಗೊಟಾ: ದಕ್ಷಿಣ ಅಮೆರಿಕಾದ ಖಂಡದ ಕೊಲಂಬಿಯಾದಲ್ಲಿ ಭಾರಿ ಮಳೆಗೆ ಭೂಕುಸಿತ ಸಂಭವಿಸಿ 200ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಭೀಕರ ದುರಂತ ಭಾನುವಾರ ನಡೆದಿದೆ.

Advertisement

ಪುಟುಮಾಯೋ ಪ್ರಾಂತ್ಯದಲ್ಲಿ ಭೂಕುಸಿತ ಸಂಭವಿಸಿ ಪ್ರವಾಹದಿಂದಾಗಿ ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿ ಭಾರಿ ಪ್ರಮಾಣದಲ್ಲಿ ಕಟ್ಟಡಗಳು ಕುಸಿದು 220 ಮಂದಿ ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.

ಶನಿವಾರದಿಂದ ಭಾರೀ ಮಳೆ ಸುರಿಯುತ್ತಿದ್ದು ಸಾವಿನ ಸಂಖ್ಯೆ ಹೆಚ್ಚಳವಾಗುವ ಎಲ್ಲಾ ಲಕ್ಷಣಗಳಿವೆ.

ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು ,ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next