Advertisement

ಬೆಳಗಿನ ಬ್ರೇಕ್‌ ಫಾಸ್ಟ್‌ಗೆ ಹೊಸ ರೀತಿ ಅವಲಕ್ಕಿ ಚಿತ್ರಾನ್ನ ಒಮ್ಮೆ ರುಚಿ ನೋಡಿ

06:03 PM Feb 24, 2023 | ಶ್ರೀರಾಮ್ ನಾಯಕ್ |

ಬೆಳಗ್ಗಿನ ತಿಂಡಿಗೆ ಏನು ಮಾಡುವುದು ಎಂದು ನೀವು ಯೋಚಿಸುತ್ತಿದ್ದೀರಾ? ಹಾಗಾದರೆ ಇಲ್ಲಿದೆ ಸುಲಭ ರೆಸಿಪಿ. ಒಮ್ಮೆ ಮಾಡಿ ತಿಂದರೆ ಸಾಕು ಮತ್ತೆ ಮತ್ತೆ ತಿನ್ನಬೇಕು ಅನಿಸುತ್ತದೆ ಅಷ್ಟು ಚೆನ್ನಾಗಿರುತ್ತದೆ ಮಾತ್ರವಲ್ಲದೇ ಆರೋಗ್ಯಕ್ಕೂ ಇದು ಒಳ್ಳೆಯ ರೆಸಿಪಿ ಅದುವೇ “ಅವಲಕ್ಕಿ ಚಿತ್ರಾನ್ನ” .

Advertisement

ಭಾರತದ ಹಲವು ರಾಜ್ಯಗಳಲ್ಲಿ ಅವಲಕ್ಕಿಯಿಂದ ವಿವಿಧ ರೀತಿಯ ತಿಂಡಿ ತಿನಿಸುಗಳನ್ನು ಮಾಡುತ್ತಾರೆ. ಉದಾಃ ಅವಲಕ್ಕಿ ಒಗ್ಗರಣೆ, ಅವಲಕ್ಕಿ ಬಾತ್‌, ಅವಲಕ್ಕಿ ಉಪ್ಪಿಟ್ಟು ,ಅವಲಕ್ಕಿ ಚಿತ್ರಾನ್ನ, ಅವಲಕ್ಕಿ ಪೊಂಗಲ್‌ ಹೀಗೆ ಹತ್ತು ಹಲವು . ಅವಲಕ್ಕಿಯಲ್ಲಿ ವಿಟಮಿನ್‌ ಬಿ ಅಂಶ ಇರುವ ಕಾರಣ, ದೇಹದ ಶಕ್ತಿಯನ್ನು ಹೆಚ್ಚಿಸಿ, ಮೆದುಳಿನ ಆರೋಗ್ಯವನ್ನು ಉತ್ತಮಪಡಿಸಿಕೊಳ್ಳಲು ಇದೊಂದು ಅದ್ಭುತ ಆಹಾರವಾಗಿದೆ.

ಚಿತ್ರಾನ್ನವನ್ನೇ ಹೋಲುವ ಮತ್ತೊಂದು ಸ್ವಾದಿಷ್ಟ ತಿಂಡಿಯಾದ ಅವಲಕ್ಕಿ ಚಿತ್ರಾನ್ನ ಸುಲಭವಾಗಿ ತಯಾರಿಸಬಹುದು. ಬನ್ನಿ ಧಿಡೀರನೇ ತಯಾರಿಸಬಹುದಾದ ಈ ರುಚಿಕರ ಮತ್ತು ಆರೋಗ್ಯಕರ ರೆಸಿಪಿಯನ್ನು ತಯಾರಿಸುವ ವಿಧಾನವನ್ನು ನೋಡೋಣ

ಅವಲಕ್ಕಿ ಚಿತ್ರಾನ್ನ: ಬೇಕಾಗುವ ಸಾಮಗ್ರಿಗಳು
ದಪ್ಪ ಅವಲಕ್ಕಿ -3ಕಪ್‌, ಈರುಳ್ಳಿ-2(ಸಣ್ಣಗೆ ಹೆಚ್ಚಿದ್ದು), ಹಸಿಮೆಣಸು-4ರಿಂದ 5, ಸಾಸಿವೆ-ಅರ್ಧ ಚಮಚ, ಜೀರಿಗೆ-ಅರ್ಧ ಚಮಚ, ಶೇಂಗಾ ಬೀಜ-2ಚಮಚ, ನಿಂಬೆಹಣ್ಣು-ಅರ್ಧ ಚಮಚ, ಕರಿಬೇವು-5ರಿಂದ6 ಎಸಳು, ಕೊತ್ತಂಬರಿ ಸೊಪ್ಪು-ಸ್ವಲ್ಪ, ತೆಂಗಿನೆಣ್ಣೆ-3ಚಮಚ, ಅರಿಶಿನ ಪುಡಿ-ಅರ್ಧ ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ
ಮೊದಲಿಗೆ ದಪ್ಪ ಅವಲಕ್ಕಿಯನ್ನು 5ರಿಂದ 10 ನಿಮಿಷಗಳ ಕಾಲ ನೀರಿನಲ್ಲಿ ನೆನೆಹಾಕಿರಿ. ನಂತರ ಒಂದು ಬಾಣಲೆಗೆ 3ಚಮಚದಷ್ಟು ಎಣ್ಣೆ ಹಾಕಿ ಕಾದ ನಂತರ ಸಾಸಿವೆ, ಜೀರಿಗೆ, ಶೇಂಗಾಬೀಜ, ಕರಿಬೇವು, ಹಸಿಮೆಣಸು ಮತ್ತು ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಸರಿಯಾಗಿ ಫ್ರೈ ಮಾಡಿ ಆಬಳಿಕ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ತದನಂತರ ಸ್ವಲ್ಪ ಅರಿಶಿನಪುಡಿ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿಕೊಳ್ಳಿ. ಈಗ ನೆನೆಸಿ ತೆಗೆದ ಅವಲಕ್ಕಿ ಹಾಕಿ ಅದಕ್ಕೆ ನಿಂಬೆರಸ ಹಿಂಡಿ, ನಂತರ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್‌ ಮಾಡಿದರೆ ಅವಲಕ್ಕಿ ಚಿತ್ರಾನ್ನ ಸವಿಯಲು ಸಿದ್ಧ . ಇದನ್ನು ಕಾಯಿ ಚಟ್ನಿಯೊಂದಿಗೆ ಸವಿಯಲು ಬಹಳ ರುಚಿಕರ.  ಒಮ್ಮೆ ಮಾಡಿ, ಸವಿದು ನೋಡಿ…

Advertisement

-ಶ್ರೀರಾಮ್ ಜಿ . ನಾಯಕ್

Advertisement

Udayavani is now on Telegram. Click here to join our channel and stay updated with the latest news.

Next