ಹುಬ್ಬಳ್ಳಿ: ಸಾರ್ವಜನಿಕ ಶೌಚಾಲಯದಲ್ಲಿ ಸ್ವಯಂ ಚಾಲಿತವಾಗಿ ಕಾರ್ಯನಿರ್ವಹಿಸುವ ಯಾಂತ್ರಿಕ ಫ್ಲಶ್ ಸಿಸ್ಟಮ್ ಅನ್ನು ಇಲ್ಲಿನ ವಿದ್ಯಾನಗರದ ಬಿವಿಬಿ ಕಾಲೇಜ್ ಆಫ್ ಇಂಜನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಇಂಡಸ್ಟ್ರಿಯಲ್ ಪ್ರೊಡಕ್ಷನ್‌ದ ಅಂತಿಮ ವರ್ಷದ ವಿದ್ಯಾರ್ಥಿಗಳು ತಯಾರಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ವಿದ್ಯಾರ್ಥಿ ರವಿ ಜಾಗನೂರೆ, ಪ್ರಧಾನಿ ನರೇಂದ್ರ ಮೋದಿ ಅವರು ಸರಕಾರದಿಂದ ಹಮ್ಮಿಕೊಂಡಿರುವ ಸ್ವತ್ಛ ಭಾರತ ಮಿಷನ್ ವತಿಯಿಂದ ಈ ನೂತನ ವ್ಯವಸ್ಥೆ ಸಿದ್ಧಪಡಿಸಲಾಗಿದೆ. ಸಂಶೋಧನೆಯ ಪ್ರಕಾರ ಸಾರ್ವಜನಿಕರ ಶೌಚಾಲಯದಲ್ಲಿ ಶೇ.38ರಷ್ಟು ನೀರು ವ್ಯರ್ಥವಾಗುತ್ತಿದೆ.
ಈಗ ಸಿದ್ಧಪಡಿಸಲಾಗಿರುವ ನವೀನ ಯೋಜನೆಯೊಂದಿಗೆ ವಿಶ್ವಿಷ್ಟವಾಗಿ ತಯಾರಿಸಲಾದ ನೂತನ ಯಾಂತ್ರಿಕ ಫ್ಲಶ್ ಸಿಸ್ಟಮ್‌ನಡಿ ಶೇ.170-180ರಷ್ಟು ನೀರು ಉಳಿತಾಯವಾಗಲಿದೆ. ಇದಕ್ಕೆ ಯಾವುದೇ ರೀತಿ ಹಸ್ತಚಾಲಿತ ಕಾರ್ಯ ಬೇಕಾಗಿಲ್ಲ ಹಾಗೂ ಯಾವುದೇ ಬಗೆಯ ವಿದ್ಯುತ್ (ಸೆನ್ಸಾರ್) ಬಳಸದೆ, ಸಮಗ್ರವಾಗಿ ಸ್ಟೀರಿಂಗ್ ಮತ್ತು ವಾಲ್Ì ಯಾಂತ್ರಿಕ ವ್ಯವಸ್ಥೆಯಡಿ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸಲಿದೆ ಎಂದರು.
ಈ ನೂತನ ವ್ಯವಸ್ಥೆಯಲ್ಲಿ ವ್ಯಕ್ತಿಯು ಪ್ಲಾಟ್ ಫಾರ್‌ಂನಲ್ಲಿ ನಿಂತರೆ ಸಾಕು ಸ್ಟೀರಿಂಗ್, ವಾಲ್Ì ಯಾಂತ್ರಿಕ ವ್ಯವಸ್ಥೆಯಡಿ ಸ್ವಯಂಚಾಲಿತಗೊಂಡು ನೀರು ಹೊರ ಸೂಸುತ್ತದೆ ಹಾಗೂ ಆಟೋಮ್ಯಾಟಿಕ್ ಆಗಿ ಬಂದ್ ಆಗುತ್ತದೆ. ಸದ್ಯ 700 ಎಂಎಲ್ ನೀರು ಸಂಗ್ರಹದ ಟ್ಯಾಂಕ್ μಕ್ಸ್ ಮಾಡಲಾಗಿದೆ. ಇದನ್ನು 300 ಎಂಎಲ್, 500 ಎಂಎಲ್‌ಗಳಿಗೂ ಹೊಂದಿಸಿಕೊಳ್ಳಬಹುದಾಗಿದೆ.
ಸದ್ಯ ಸ್ಟೀರಿಂಗ್‌ನ ಭಾರದ ಪ್ರಮಾಣವನ್ನು ಗರಿಷ್ಠ 150 ಕೆಜಿಗೆ ಸಿದ್ಧಪಡಿಸಲಾಗಿದೆ. ಈ ಉತ್ಪನ್ನವು ಅಸೆಂಬಲ್ಡ್ ಆಗಿದ್ದರಿಂದ ನಿರ್ವಹಣೆಯು ತೀರಾ ಸುಲಭವಾಗಿದೆ. ಸ್ವತ್ಛತೆ ಕಾಪಾಡಲು ಅತೀ ಉಪಯುಕ್ತವಾಗಿದೆ. ಒಂದು ಉತ್ಪನ್ನ ತಯಾರಿಸಲು ಸದ್ಯ ಅಂದಾಜು 3500-4000 ರೂ. ಖರ್ಚಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಉತ್ಪನ್ನ ತಯಾರಿಸಿದರೆ ಇನ್ನು ಖರ್ಚು ಕಡಿಮೆಯಾಗುತ್ತದೆ ಎಂದರು.
ಸಿಟಿಐಇ ನಿರ್ದೇಶಕ ಪ್ರೊ| ನಿತೀನ ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ಯೋಜನೆ ತಯಾರಿಸಲಾಗಿದೆ. ಈಗಾಗಲೇ ಈ ಉತ್ಪನ್ನವನ್ನು ಬಿವಿಬಿ ಕಾಲೇಜ್‌ನ ಮುಖ್ಯ ಕಟ್ಟಡದಲ್ಲಿ ಅಳವಡಿಸಲಾಗಿದ್ದು, ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಯೋಜನೆ ಸಿದ್ಧಪಡಿಸಲು ಪ್ರೊ| ಪ್ರವೀಣ ಪೇಟಕರ, ಪ್ರೊ| ಪ್ರವೀಣ ಹಿರೇಮಠ ಸಹಕರಿಸಿದ್ದಾರೆ.
ಈ ಯೋಜನೆಗೆ ಸರಕಾರದಿಂದ ಅನುಮತಿ ದೊರೆತರೆ ಎಲ್ಲ ಶಾಲೆ-ಕಾಲೇಜು, ಬಸ್, ರೈಲ್ವೆ ನಿಲ್ದಾಣ ಹಾಗೂ ಸಾರ್ವಜನಿಕ ಶೌಚಾಲಯಗಳಲ್ಲಿ ಅಳವಡಿಸಲಾಗುವುದು. ಇದರಿಂದ ನೀರು ಮಿತವಾಗಿ ಬಳಕೆಯಾಗಿ ಉಳಿತಾಯ ಮಾಡಬಹುದು. ವಿಕ್ರಮ ನಾಡಿಗೇರ, ಶಿವಾನಂದ ಗುಂಡಣ್ಣವರ. ಪೂರ್ಣಿಮಾ ಪಾಟೀಲ ಸೇರಿ ಈ ಉತ್ಪನ್ನ ತಯಾರಿಸಿದ್ದೇವೆ ಎಂದರು. ವಿಕ್ರಮ, ಶಿವಾನಂದ ಈ ಸಂದರ್ಭದಲ್ಲಿದ್ದರು.