Advertisement

ಪಾವಗಡ: ಆಟೋ ರಿಕ್ಷಾ ಪಲ್ಟಿಯಾಗಿ ಇಬ್ಬರು ಸಾವು

05:59 PM Jun 06, 2022 | Team Udayavani |

ಪಾವಗಡ:  ಆಟೋ ರಿಕ್ಷಾವೊಂದು ಪಲ್ಟಿಯಾಗಿ ಇಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ನಲಿಗಾನಹಳ್ಳಿ  ಗ್ರಾಮದ ಸೋಮವಾರ ( ಜೂನ್‌ 6 ರಂದು) ನಡೆದಿದೆ.

Advertisement

ತಾಲ್ಲೂಕಿನ ಬಿ.ದೊಡ್ಡಹಟ್ಟಿಯಿಂದ ಪಾವಗಡಕ್ಕೆ ಬರುತ್ತಿದ್ದಆಟೋ ನಲಿಗಾನಹಳ್ಳಿ  ಗ್ರಾಮದ ಬಳಿ ಪಲ್ಟಿಯಾಗಿದೆ ಪರಿಣಾಮ  ಬ್ಯಾಡನೂರು ದೊಡ್ಡಹಟ್ಟಿ ಗ್ರಾಮದ ಕೋಣನಕುರಿಕೆ ಬಂಡಪ್ಪ(60), ಈರಬಂಡಪ್ಪ(65) ಮೃತಪಟ್ಟಿದ್ದಾರೆ. ನಾಗಮ್ಮ ಎಂಬ  ಮಹಿಳೆಗೆ  ತೀವ್ರ ಗಾಯಗಳಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಿಕೊಡಲಾಗಿದೆ.

ಇದನ್ನೂ ಓದಿ: ಓವರ್‌ ಟೇಕ್‌ ಭರದಲ್ಲಿ ಬೈಕ್‌ ಗಳ ಮುಖಾಮುಖಿ ಢಿಕ್ಕಿ; ಲಾರಿಯಡಿಗೆ ಸಿಕ್ಕಿ ಸವಾರಿಬ್ಬರು ಸಾವು

ನಲಿಗಾನಹಳ್ಳಿ ಕಡೆಯಿಂದ ಪಟ್ಟಣಕ್ಕೆ ಬರುತ್ತಿದ್ದ ಆಟೋ ಗ್ರಾಮದ ಬಳಿಯ ಹಳ್ಳದ ಸಮೀಪ ಪಲ್ಟಿಯಾಗಿದೆ. ಗಾಯಾಳುಗಳನ್ನು ಪಟ್ಟಣದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.  ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಪಟ್ಟಣ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾವಗಡ ಶಾಸಕ ವೆಂಕಟರಮಣಪ್ಪ ಭೇಟಿ ನೀಡಿ ಮೃತ ಕುಟುಂಬಗಳಿಗೆ ಸಾಂತ್ವನ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next