Advertisement

ಉಡುಪಿ : ಪರಿಷ್ಕೃತ ಆಟೋರಿಕ್ಷಾ ಯಾನ ದರ ಅ. 1ರಿಂದ ಜಾರಿ

12:05 PM Sep 20, 2022 | Team Udayavani |

ಉಡುಪಿ : ಜಿಲ್ಲಾ ಸಾರಿಗೆ ಪ್ರಾಧಿಕಾರವು ಅ. 1ರಿಂದ ಜಾರಿಗೆ ಬರುವಂತೆ ಜಿಲ್ಲೆಯಲ್ಲಿ ಸಂಚರಿಸುವ ಆಟೋ ರಿಕ್ಷಾಗಳಿಗೆ ಪ್ರಯಾಣದರ ಪರಿಷ್ಕರಿಸಿ ಆದೇಶ ಹೊರಡಿಸಿದೆ.

Advertisement

ಅದರಂತೆ 1.5 ಕಿ.ಮೀ.ವರೆಗೆ ಕನಿಷ್ಠ ದರ 40 ರೂ., ಅನಂತರದ ಪ್ರತಿ ಕಿ.ಮೀ.ಗೆ 20 ರೂ. ನಿಗದಿಪಡಿಸಲಾಗಿದೆ.

ಜಿಲ್ಲೆಯ ಎಲ್ಲ ಆಟೋರಿಕ್ಷಾ ಚಾಲಕ/ಮಾಲಕರು ತಮ್ಮ ರಿಕ್ಷಾಗಳಿಗೆ ಕಾನೂನಿನ ಪ್ರಕಾರ ಅನುಮತಿ ಇರುವ ಫ್ಲಾಗ್‌ ಮೀಟರನ್ನು ಕಡ್ಡಾಯವಾಗಿ ಅಳವಡಿಸಿಕೊಂಡು ಮೇಲಿನ ದರಕ್ಕೆ ಅನುಗುಣವಾಗಿ ಕಾನೂನು ಮಾಪನ ಶಾಸ್ತ್ರ ಇಲಾಖೆಯಿಂದ ಅ. 31ರ ಒಳಗೆ ಕಡ್ಡಾಯವಾಗಿ ರಿಕ್ಯಾಲೀಬರೇಷನ್‌ ಹಾಗೂ ಸೀಲ್‌ ಮಾಡಬೇಕು. ತಪ್ಪಿದಲ್ಲಿ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಭಾರ ಕಾರ್ಯದರ್ಶಿ ರವಿಶಂಕರ ಪಿ. ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : ಉಪ್ಪಿನಂಗಡಿ ಪಂಜಳ: ನೇತ್ರಾವತಿಯಲ್ಲಿ 3 ಮೊಸಳೆ ಪತ್ತೆ! ಸ್ಥಳೀಯರಲ್ಲಿ ಆತಂಕ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next