Advertisement

ಅನುದಾನ ಪಡೆಯಲು ರಿಕ್ಷಾ ಚಾಲಕರಿಗೆ ಸಮಸ್ಯೆ

01:39 PM Jun 09, 2021 | Team Udayavani |

ಥಾಣೆ: ಪರವಾನಿಗೆ ಪಡೆದ ಆಟೋರಿûಾ ಚಾಲಕರಿಗೆ ರಾಜ್ಯ ಸರಕಾರ ಕೊರೊನಾ ಅವಧಿಯಲ್ಲಿ 1,500 ರೂ. ಗಳ ಅನುದಾನವನ್ನು ಘೋಷಿಸಿದ್ದು, ಈ ಅನು ದಾನಕ್ಕಾಗಿ ಆನ್‌ಲೈನ್‌ ಅರ್ಜಿಗಳನ್ನು ಸಲ್ಲಿಸಲು ರಿಕ್ಷಾ ಚಾಲಕರ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ಅನೇಕ ತಾಂತ್ರಿಕ ತೊಂದರೆಗಳು ಎದುರಾಗಿವೆ.

Advertisement

ಎಲ್ಲ ಸಮಸ್ಯೆಗಳನ್ನು ನಿವಾರಿಸಲು ಪ್ರಾದೇಶಿಕ ಸಾರಿಗೆ ಇಲಾಖೆ ಥಾಣೆ, ನವಿಮುಂಬಯಿ ಮತ್ತು ಕಲ್ಯಾಣ್‌ ಕಚೇರಿಗಳಲ್ಲಿ ಆಧಾರ್‌ ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು, ರಿಕ್ಷಾ ಚಾಲಕರಿಂದ ಉತ್ತಮ ಪ್ರತಿಕ್ರಿಯೆ ಲಭಿಸುತ್ತಿದೆ. ಆಟೋ ರಿಕ್ಷಾ ಚಾಲಕರು ಅನುದಾನ ಪಡೆಯಲು ಆನ್‌ಲೈನ್‌ ಅರ್ಜಿಯನ್ನು ಭರ್ತಿ ಮಾಡಬೇಕಾಗುತ್ತದೆ. ಚಾಲಕರು ಆಧಾರ್‌ ಸಂಖ್ಯೆಯನ್ನು ಅರ್ಜಿಯನ್ನು ಭರ್ತಿ ಮಾಡುವಾಗ ಅವರ ಬ್ಯಾಂಕ್‌ ಖಾತೆ ಮತ್ತು ಮೊಬೈಲ್‌ ಸಂಖ್ಯೆಗೆ ಲಗತ್ತಿಸಬೇಕು. ಅನೇಕ ರಿಕ್ಷಾ ಎಳೆಯುವವರ ಆಧಾರ್‌ ಸಂಖ್ಯೆ ಮೊಬೈಲ್‌ಗೆ ಲಗತ್ತಿಸದ ಕಾರಣ ಅಪ್ಲಿಕೇಶನ್‌ ಭರ್ತಿ ಆಗುತ್ತಿಲ್ಲ.

84,000 ಪರವಾನಿಗೆ ಪಡೆದ ರಿಕ್ಷಾ ಚಾಲಕರು :

ರಿಕ್ಷಾ ಚಾಲಕರು ಆಧಾರ್‌ ಕಾರ್ಡ್‌ ಗೆ ಸಂಬಂಧಿಸಿದ ಕೆಲಸಗಳನ್ನು ಕೂಡಲೇ ಮಾಡಬೇಕು ಮತ್ತು ಸಬ್ಸಿಡಿಯಿಂದ ವಂಚಿತ ರಾಗಬಾರದು ಎಂದು ಪ್ರಾದೇಶಿಕ ಸಾರಿಗೆ ಇಲಾಖೆ ಜಿಲ್ಲಾಧಿಕಾರಿ ರಾಜೇಶ್‌ ನರ್ವೇಕರ್‌ ಅವರನ್ನು ಕಚೇರಿಯಲ್ಲಿ ಆಧಾರ್‌ ಕೇಂದ್ರಗಳನ್ನು ಸ್ಥಾಪಿಸುವಂತೆ ಕೇಳಿಕೊಂಡಿತ್ತು. ಅನುಮತಿ ನೀಡಿದ ಬಳಿಕ ಪ್ರಾದೇಶಿಕ ಸಾರಿಗೆ ಇಲಾಖೆಯ ಥಾಣೆ, ಕಲ್ಯಾಣ್‌ ಮತ್ತು ನವಿಮುಂಬಯಿ ಕಚೇರಿಗಳಲ್ಲಿ ತಾತ್ಕಾಲಿಕ ಆಧಾರ್‌ ಕೇಂದ್ರಗಳನ್ನು ಪ್ರಾರಂಭಿಸಲಾಯಿತು. ಥಾಣೆ ವಿಭಾಗದಲ್ಲಿ ಸುಮಾರು 84,000 ಪರವಾನಿಗೆ ಪಡೆದ ರಿಕ್ಷಾ ಚಾಲಕರು ನೋಂದಾಯಿಸಿಕೊಂಡಿದ್ದಾರೆ. ಈ ವರೆಗೆ 16,000 ಆಟೋ ರಿಕ್ಷಾ ಚಾಲಕರು ಮಾತ್ರ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಈ ಪೈಕಿ 11,720 ಆಟೋ ರಿಕ್ಷಾ ಚಾಲಕರ ಅರ್ಜಿಗಳನ್ನು ಮೌಲ್ಯೀಕರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next