ಬೆಂಗಳೂರು: ನಿರೀಕ್ಷೆಯಂತೆ ಬುಧವಾರ ದಿಂದ ನಗರದಲ್ಲಿ ಆಟೋ ಪ್ರಯಾಣ ಜನರ ಜೇಬು ಸುಡಲಿದೆ. ಕನಿಷ್ಠ 5 ರೂ.ಯಿಂದ ಗರಿಷ್ಠ 15 ರೂ.ವರೆಗೆ ಈ ದರ ಏರಿಕೆ ಬಿಸಿ ತಟ್ಟಲಿದೆ. ಇದರೊಂದಿಗೆ ತೈಲ, ಅಡುಗೆ ಎಣ್ಣೆ ಮತ್ತು ಅನಿಲ ದರ ಏರಿಕೆ ಜತೆಗೆ ಈಗ ಆಟೋ ಬಾಡಿಗೆ ಕೂಡ ಸೇರಿದಂತಾಗಿದೆ.
ನ.8ರಂದು ಈ ಸಂಬಂಧ ಆದೇಶ ಹೊರಡಿಸಲಾಗಿತ್ತು. ಅದರಂತೆ ಡಿ.1ರಿಂದ ಅಧಿಕೃತವಾಗಿ ಈ ಪರಿಷ್ಕೃತ ದರ ಜಾರಿಗೆ ಬರಲಿದೆ. ಪ್ರಸ್ತುತ ಬಾಡಿಗೆ ಆಟೋ ಕನಿಷ್ಠ ದರ (ಮೊದಲ ಎರಡು ಕಿ.ಮೀ.ಗೆ) 25 ರೂ. ಇದೆ. ಪರಿಷ್ಕೃತ ದರ 30 ರೂ. ಆಗಲಿದೆ. ಮೂವರು ಪ್ರಯಾಣಿಕರಿಗೆ ಮಾತ್ರ ಅವಕಾಶ ಇರಲಿದೆ.
ಅದೇ ರೀತಿ, 2 ಕಿ.ಮೀ. ನಂತರದ ಪ್ರತಿ ಕಿ. ಮೀ. ಗೆ 15 ರೂ. ದರ ನಿಗದಿಪಡಿಸಲಾಗಿದೆ. ಪ್ರಸ್ತುತ ಈ ದರ 13 ರೂ. ಇದೆ. ಇನ್ನು ಮೊದಲ ಐದು ನಿಮಿಷ ಕಾಯುವಿಕೆಗೆ ಯಾವು ದೇ ದರ ವಿಧಿಸುವಂತಿಲ್ಲ. ಮೊದಲ ಹದಿನೈದು ನಿಮಿಷಗಳ ನಂತರ ಮತ್ತು ಪ್ರತಿ ಹದಿನೈದು ನಿಮಿಷಕ್ಕೆ 5 ರೂ. ವಿಧಿಸಲು ಅನುಮತಿ ನೀಡಲಾಗಿದೆ. ಲಗೇಜು ದರ ಮೊದಲ 20 ಕೆಜಿ ಉಚಿತವಾಗಿದ್ದು, 20 ಕೆಜಿ ನಂತÃ ದ ಪ್ರತಿ 20 ಕೆಜಿ ಅಥವಾ ಅದರ ಭಾಗಕ್ಕೆ ತಲಾ 5 ರೂ. ಮತ್ತು ಗರಿಷ್ಠ ಪ್ರಯಾ ಣಿಕರ ಲಗೇಜು 50 ಕೆಜಿಗೆ ಮಿತಿ ಗೊಳಿಸಲಾಗಿದೆ. ಪ್ರಸ್ತುತ ಲಗೇಜು ದರ ಮೊದಲ 20 ಕೆಜಿಗೆ 2 ರೂ. ಇತ್ತು.
ಇದನ್ನೂ ಓದಿ;- ಗುಂಡಿನ ದಾಳಿ ನಡೆಸಿದ ಹೈಸ್ಕೂಲ್ ವಿದ್ಯಾರ್ಥಿ; ಮೂವರು ವಿದ್ಯಾರ್ಥಿಗಳು ಸಾವು, 8 ಮಂದಿಗೆ ಗಾಯ
ಇನ್ನು ರಾತ್ರಿ ವೇಳೆ ಅಂದರೆ 10ರಿಂದ ಬೆಳಗಿನಜಾವ 5ರವರೆಗೆ ಸಾಮಾನ್ಯ ದರದ ಜತೆಗೆ ಅದರ ಅರ್ಧಪಟ್ಟು ಅಂದರೆ ಒಂದೂವರೆಪಟ್ಟು ನಿಗದಿಪಡಿಸಲಾಗಿದೆ. ಉದಾಹರಣೆಗೆ ಹಗಲಿನಲ್ಲಿ ಸಾಮಾನ್ಯದರ 30 ರೂ. ಇದ್ದರೆ, ರಾತ್ರಿ ವೇಳೆ 45 ರೂ. ಆಗಿರಲಿದೆ. ನ. 6ರಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಉಪ ಸಮಿತಿಯ ಶಿಫಾರಸಿನಂತೆ ಈ ದರ ಪರಿಷ್ಕರಿಸಿ ಆದೇಶಿಸಲಾಗಿದೆ. ಅನುಮೋದಿಸಲ್ಪಟ್ಟ ಪರಿಷ್ಕೃತ ದರಗಳನ್ನು ಮೀಟರ್‌ನಲ್ಲಿ ಪ್ರದರ್ಶನವಾಗುವಂತೆ 2022ರ ಫೆಬ್ರವರಿ ಅಂತ್ಯದೊಳಗೆ ಅಳವಡಿಸಿಕೊಳ್ಳುವಂತೆ ಸೂಚಿಸಲಾಗಿದೆ.
ಕಂಪನಿಗಳು ಹಿಂದೇಟು ಹಾಕಿದ್ರೆ, ಹೋರಾಟ
ಸಾಮಾನ್ಯ ಆಟೋ ಬಾಡಿಗೆಗಳಿಗೆ ಮಾತ್ರವಲ್ಲ; ಒಲಾ ಮತ್ತು ಉಬರ್ ಅಡಿ ಕಾರ್ಯಾಚರಣೆ ಮಾಡುತ್ತಿರುವ ಆಟೋಗಳಿಗೂ ಇದೇ ದರವನ್ನು ಆಯಾ ಕಂಪೆನಿಗಳು ನಿಗದಿಪಡಿಸಬೇಕು. ಈ ಮೂಲಕ ನಗರದ ಎಲ್ಲ ಆಟೋಗಳಿಗೆ ಏಕರೂಪದ ಬಾಡಿಗೆ ದರ ಜಾರಿಗೊಳ್ಳಬೇಕು. ಇಲ್ಲವಾದರೆ, ಆ ಚಾಲಕರಿಗೆ ಅನ್ಯಾಯ ಆಗಲಿದೆ. ಒಂದು ವೇಳೆ ಇದಕ್ಕೆ ಕಂಪನಿಗಳು ಹಿಂದೇಟು ಹಾಕಿದರೆ, ಹೋರಾಟ ನಡೆಸಲಾಗುವುದು ಎಂದು ಒಲಾ-ಉಬರ್ ಚಾಲಕರ ಸಂಘದ ಮುಖ್ಯಸ್ಥ ತನ್ವೀರ್ ಪಾಷಾ ಎಚ್ಚರಿಸಿದ್ದಾರೆ.