Advertisement

ತೆಕ್ಕಟ್ಟೆ: ಹಸುವಿನ ಹಗ್ಗ ಸಿಲುಕಿ  ಆಟೋ ಪಲ್ಟಿ ; ಚಾಲಕನಿಗೆ ಗಾಯ

07:21 PM Nov 20, 2022 | Team Udayavani |

ತೆಕ್ಕಟ್ಟೆ: ಇಲ್ಲಿನ ಮಲ್ಯಾಡಿ ದಬ್ಬೆಕಟ್ಟೆ ಸಂಪರ್ಕ ರಸ್ತೆಯ ಸಮೀಪದ ಗದ್ದೆಯಲ್ಲಿ ಮೇಯಲು ಬಿಟ್ಟ ಹಸುವಿನ ಹಗ್ಗ ಸಿಲುಕಿ ಆಟೋರಿಕ್ಷಾ ಪಲ್ಟಿಯಾದ ಘಟನೆ ರವಿವಾರ ಬೆಳಗ್ಗೆ ಸಂಭವಿಸಿದೆ.

Advertisement

ಆಟೋ ಚಾಲಕ ಪ್ರಯಾಣಿಕರನ್ನು ತೆಕ್ಕಟ್ಟೆಯಲ್ಲಿ ಬಿಟ್ಟು, ಕೆದೂರು ಕಡೆಗೆ ಹಿಂದಿರುಗುತ್ತಿರುವ ಸಂದರ್ಭ ಸಮೀಪದ ಗದ್ದೆಯಲ್ಲಿ ಮೇಯಲು ಬಿಟ್ಟಿದ ಹಸು ಏಕಾಏಕಿ ರಸ್ತೆಯ ಮತ್ತೂಂದು ಕಡೆಗೆ ಓಡಿಬಂದಿದೆ. ಪರಿಣಾಮ ಚಲಿಸುತ್ತಿದ್ದ ಆಟೋ ಚಕ್ರಕ್ಕೆ ಹಗ್ಗ ಸಿಲುಕಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮ ಆಟೋ ಹಿಂಭಾಗ ಜಖಂಗೊಂಡಿದ್ದು, ಚಾಲಕ ಕೆದೂರಿನ ಶ್ರೀನಿವಾಸ (40) ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಸ್ಥ

ಳೀಯ ತತ್‌ಕ್ಷಣವೇ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ತುರ್ತು ಚಿಕಿತ್ಸೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next