Advertisement

ಬಳ್ಳಾರಿ: ಕೃಷಿ ಕಾರ್ಮಿಕರಿದ್ದ ಆಟೋ ಕಾಲುವೆಗೆ ಪಲ್ಟಿ; ಮೂವರು ಸಾವು, ಮೂವರು ನಾಪತ್ತೆ

12:04 PM Sep 14, 2022 | Team Udayavani |

ಬಳ್ಳಾರಿ: ಕೃಷಿ ಕೂಲಿ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಅಪೆ ಆಟೋವೊಂದು ತಾಲೂಕಿನ ಕೊಳಗಲ್ಲು ಗ್ರಾಮ ಬಳಿಯ ಹೆಚ್.ಎಲ್‌.ಸಿ. ಕಾಲುವೆಯಲ್ಲಿ ಬಿದ್ದಿದ್ದು, ಮೂವರು ಮೃತಪಟ್ಟಿದ್ದು, ನಾಲ್ವರು ಸುರಕ್ಷಿತವಾಗಿ, ಇನ್ನು ಮೂವರು ನಾಪತ್ತೆಯಾಗಿರುವ ಘಟನೆ ಬುಧವಾರ ನಡೆದಿದೆ.

Advertisement

ಎಲ್ಲರೂ ತಾಲೂಕಿನ ಕೊಳಗಲ್ಲು ಗ್ರಾಮದ ನಿವಾಸಿಗಳಾಗಿದ್ದಾರೆ.

ಕೊಳಗಲ್ಲು ಗ್ರಾಮದ ನಿಂಗಮ್ಮ, ದುರುಗಮ್ಮ, ಪುಷ್ಪಾವತಿ ದುರ್ಮರಣಕ್ಕೀಡಾದ ದುರ್ಧೈವಿಗಳು. ಬುಧವಾರ  ಬೆಳಗ್ಗೆ ಎಂದಿನಂತೆ ಕೃಷಿ ಕೆಲಸಕ್ಕೆಂದು ಎಂದಿನಂತೆ ಅಪೆ ಆಟೋದಲ್ಲಿ ನಿಂಗಮ್ಮ, ದುರುಗಮ್ಮ, ಪುಷ್ಪಾವತಿ, ಕುಡತಿನಿ ಹುಲಿಗೆಮ್ಮ, ಲಕ್ಷ್ಮಿ, ನಾಗರತ್ನಮ್ಮ, ಈಡಿಗರ ಭೀಮ, ದಮ್ಮೂರಿ ಎರ್ರಮ್ಮ, ಹೇಮಾವತಿ, ಶಿಲ್ಪಾ, ಮಹೇಶ್ ಒಟ್ಟು ಹತ್ತು ಜನರು ಹೋಗಿದ್ದಾರೆ. ಪಕ್ಕದ ತುಂಗಭದ್ರಾ ಜಲಾಶಯದ ಬಲದಂಡೆ ಮೇಲ್ಮಟ್ಟದ (ಹರಚ್.ಎಲ್.ಸಿ.) ಕಾಲುವೆ ಮೇಲೆ ಆಟೋ ಸಂಚರಿಸುತ್ತಿದ್ದಾಗ ಮುಂದಿನ ಚಕ್ರಕ್ಕೆ ಕಲ್ಕು ತಗುಲಿ ಆಯ ತಪ್ಪಿ ಆಟೋ ಕಾಲುವೆಗೆ ಉರುಳಿದೆ.

ಇದನ್ನೂ ಓದಿ: ವಿಟ್ಲಪಡ್ನೂರು : ಜಾಗದ ವಿಚಾರದಲ್ಲಿ ಜಗಳ, ಸಹೋದರನ ಕೊಲೆಯಲ್ಲಿ ಅಂತ್ಯ

ಘಟನೆಯಲ್ಲಿ ನಿಂಗಮ್ಮ, ದುರುಗಮ್ಮ, ಪುಷ್ಪಾವತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕುಡತಿನಿ ವೀರೇಶ್, ಹುಲಿಗೆಮ್ಮ, ನಾಗರತ್ನಮ್ಮ, ಮೂವರು ನಾಪತ್ತೆಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ. ಈಡಿಗರ ಭೀಮ, ದಮ್ಮೂರು ಎರ್ರೆಮ್ಮ, ಹೇಮಾವತಿ, ಶಿಲ್ಪಾ, ಮಹೇಶ್ ಈ ಐವರು ಈಜಿ ದಡ ಸೇರಿ ಜೀವಂತವಾಗಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.

Advertisement

ವಿಷಯ ತಿಳಿಯುತ್ತಿದ್ದಂತೆ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ನಾಪತ್ತೆಯಾದವರ ಶೋಧ ಮಾಡುತ್ತಿದ್ದಾರೆ.

ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಮಂಜುನಾಥ್, ಎಸ್ ಪಿ ಸೈದುಲು ಅಡಾವತ್, ಮೇಯರ್ ರಾಜೇಶ್ವರಿ ಸುಬ್ಬರಾಯುಡು‌‌ ಸೇರಿ ಹಲವು ಜನಪ್ರತಿನಿಧಿಗಳು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆಯಲ್ಲಿ ಮೃತಪಟ್ಟವರಿಗೆ ಜಿಲ್ಲಾ ಉಸ್ತುವಾರಿ ಸಚಿವ, ಶ್ರೀರಾಮಲು  ಸಂತಾಪ ಸೂಚಿಸಿದ್ದು,ಮೃತರ ಕುಟುಂಬದವರೊಂದಿಗೆ ಮಾತಾನಾಡಿ, ಧೈರ್ಯ ತುಂಬಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next