ನೋಯ್ಡ: ಮಾರುತಿ ಸುಜುಕಿ ತನ್ನ ನೂತನ ಎಲೆಕ್ಟ್ರಿಕ್ ಎಸ್‌ಯುವಿ ಇವಿಎಕ್ಸ್ ಕಾರು ಪರಿಚಯಿಸಿದ್ದು, ಒಮ್ಮೆ ಚಾರ್ಜ್ ಮಾಡಿದರೆ 550 ಕಿ.ಮೀ. ಕ್ರಮಿಸಲಿದೆ ಎಂದು ಕಂಪನಿ ತಿಳಿಸಿದೆ.
ನೋಯ್ಡದಲ್ಲಿ ನಡೆಯುತ್ತಿರುವ ಆಟೊ ಎಕ್ಸ್‌ಪೊದಲ್ಲಿ ಮಾರುತಿ ಸುಜುಕಿ ತನ್ನ 16 ವಿವಿಧ ವಾಹನಗಳನ್ನು ಪ್ರದರ್ಶಿಸಿತು. ಈ ಪೈಕಿ ಎಲೆಕ್ಟ್ರಿಕ್ ಎಸ್‌ಯುವಿ ಇವಿಎಕ್ಸ್ ಕಾರು 4,300 ಮಿ.ಮೀ. ಉದ್ದ, 1,800 ಮಿ.ಮೀ. ಅಗಲ ಮತ್ತು 1,600 ಮಿ.ಮೀ. ಎತ್ತರವಿದೆ. 60 ಕೆಡಬ್ಲೂಎಚ್ ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಒಮ್ಮೆ ಚಾರ್ಜ್ ಮಾಡಿದರೆ 550 ಕಿ.ಮೀ. ದೂರ ಕ್ರಮಿಸಲಿದೆ ಎಂದು ಕಂಪನಿ ಹೇಳಿದೆ.
ಇನ್ನೊಂದೆಡೆ, ಹುಂಡೈ ಮೊಟಾರ್ ಇಂಡಿಯಾ ಕಂಪನಿ ತನ್ನ ಹೊಸ ಅತ್ಯಾಧುನಿಕ ಎಲೆಕ್ಟ್ರಿಕ್ ಕಾರು “ಹುಂಡೈ ಅಯಾನಿಕ್ 5ಇವಿ’ ಪರಿಚಯಿಸಿದೆ. ಒಮ್ಮೆ ಜಾರ್ಜ್ ಮಾಡಿದರೆ 631 ಕಿ.ಮೀ. ಚಲಿಸಲಿದೆ. ಇದರ ಎಕ್ಸ್‌ಶೋಮ್ ಬೆಲೆ 44.95 ರೂ. ಇದೆ ಎಂದು ಕಂಪನಿ ತಿಳಿಸಿದೆ.
ಈ ನಡುವೆ, ಕಿಯಾ ಮೋಟರ್ಸ್ ಈಗಾಗಲೇ ಬಿಡುಗಡೆ ಮಾಡಿರುವ ಕಾರ್ನಿವಾಲ್‌ನ ಹೊಸ ಆವೃತ್ತಿಯನ್ನು ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಗಿದೆ. ಭಾರತದಲ್ಲಿ ಯಾವ ಮಾದರಿ ಲಭ್ಯವಾಗಲಿದೆ ಎಂಬ ಬಗ್ಗೆ ಕಂಪನಿ ಹೇಳಿಲ್ಲ.