ಬಿಡುಗಡೆ ಕಾರ್ಯಕ್ರಮ ಗುರುವಾರ ಪ್ರಸ್ ಕ್ಲಬ್‌ನಲ್ಲಿ ನಡೆಯಿತು.
Advertisement
ನೂತನವಾಗಿ ವಿನ್ಯಾಸಗೊಳಿಸಲಾದ ಸ್ಟಿಕ್ಕರ್‌ನ್ನು ಬಿಡುಗಡೆಗೊಳಿಸಿದ ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಸಹಾಯಕ ಉಪ ನಿರೀಕ್ಷಕ ಸುರೇಶ್ ಶರ್ಮ ಮಾತನಾಡಿ, ಪತ್ರಕರ್ತರು ಹಾಗೂ ಪೊಲೀಸರ ಮಧ್ಯೆ ಬಹಳಷ್ಟು ನಂಟು ಇದೆ. ಕಾನೂನು ಸುವ್ಯವಸ್ಥೆ ಹಾಗೂ ಸಂಚಾರ ವ್ಯವಸ್ಥೆ ನಿರ್ವಹಣೆಯಲ್ಲಿ ಇಬ್ಬರಿಗೂ ಜವಾಬ್ದಾರಿ ಇದೆ. ಪತ್ರಕರ್ತರಿಗೆ ಸಂಘದ ಮೂಲಕ ಅಧಿಕೃತವೆನಿಸುವ ಸ್ಟಿಕ್ಕರ್ ನೀಡುವುದು ಸಂದೇಹಗಳ ನಿವಾರಣೆಗೆ ಪ್ರಯೋಜನ ಕಾರಿಯಾಗಲಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಗರಸಭಾ ಸದಸ್ಯ ರಾಜೇಶ್ ಬನ್ನೂರು ಮಾತನಾಡಿ, ಪುತ್ತೂರಿನ ಪತ್ರಕರ್ತರು
ತಮ್ಮ ವಿಭಿನ್ನ ಶೈಲಿಯ ಕಾರ್ಯನಿರ್ವಹಣೆಯಿಂದ ಗುರುತಿಸಿಕೊಂಡಿದ್ದಾರೆ. ಸಮಾಜ ಸೇವೆಯಲ್ಲಿಯೂ ಸಂಘದ ಸದಸ್ಯರು ತೊಡಗಿಸಿಕೊಂಡಿರುವುದು ಉತ್ತಮ ಬೆಳವಣಿಗೆ. ಸ್ಟಿಕ್ಕರ್ ಮೂಲಕ ಮಾದ್ಯಮ ಅವಕಾಶ ದುರುಪಯೋಗವಾಗುವುದು ತಪ್ಪಲಿದೆ ಎಂದು ಹೇಳಿದರು. ಹೊಸತನ ಬೇಕು
ಪತ್ರಕರ್ತರ ಸಂಘದ ಮಾರ್ಗದರ್ಶಕರು, ಕಾನೂನು ಸಲಹೆಗಾರ ಬಿ. ಪುರಂದರ ಭಟ್ ಅವರು ಮಾತನಾಡಿ,
ಹೊಸತನವಿಲ್ಲದೆ ಯಾವುದೇ ಕ್ಷೇತ್ರ ಬೆಳೆಯಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಪುತ್ತೂರು ಪತ್ರಕರ್ತರ ಸಂಘವು
ಬೇರೆ ಬೇರೆ ಕಾರ್ಯಕ್ರಮಗಳ ಮೂಲಕ ತನ್ನ ಅಸ್ತಿತ್ವವನ್ನು ತೋರಿಸಿಕೊಂಡು ಬಂದಿದೆ ಎಂದು ಮೆಚ್ಚುಗೆ
ವ್ಯಕ್ತಪಡಿಸಿದರು.
Related Articles
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಪತ್ರಕರ್ತರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ಮಾತನಾಡಿ, ಕೆಲವೊಂದು
ಗೊಂದಲಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸಮರ್ಪಕ ರೀತಿಯ ಸ್ಟಿಕ್ಕರನ್ನು ಸದಸ್ಯರಿಗೆ ನೀಡಿಲಾಗಿದೆ. ಸದಸ್ಯರ
ಎಲ್ಲ ವಿವರಗಳುಳ್ಳ ಪಟ್ಟಿಯನ್ನು ಪೊಲೀಸ್ ಇಲಾಖೆಗೂ ನೀಡಲಾಗುತ್ತದೆ ಎಂದರು. ಸಂಚಾರ ನಿಯಮಗಳನ್ನು
ಪಾಲಿಸಿಕೊಂಡು, ದಾಖಲೆಗಳನ್ನು ಇಟ್ಟುಕೊಂಡು ಪತ್ರಕರ್ತರು ವಾಹನಗಳನ್ನು ಚಲಾಯಿಸಬೇಕು ಎಂದು ವಿನಂತಿಸಿದರು.
Advertisement
ಸಂಘದ ಸದಸ್ಯ ಮೇಘ ಪಾಲೆತ್ತಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯ ಸಂಶುದ್ದೀನ್ ಸಂಪ್ಯ ಸ್ವಾಗತಿಸಿ,ಸಂಘದ ಕಾರ್ಯದರ್ಶಿ ವಂದಿಸಿದರು. ಉಪಾಧ್ಯಕ್ಷ ಸುಧಾಕರ ಸುವರ್ಣ ತಿಂಗಳಾಡಿ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಅನಂತರ ಸಂಘದ ಸಾಮಾನ್ಯ ಸಭೆ ನಡೆಯಿತು.