Advertisement

ಪ್ರಾಧಿಕಾರಗಳು ಹಣ ಕಬಳಿಸುವ ಕೇಂದ್ರ: ಅನಂತಕುಮಾರ ಹೆಗಡೆ

09:38 AM Oct 24, 2019 | Team Udayavani |

ಚನ್ನಮ್ಮನ ಕಿತ್ತೂರು:ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಬಹುತೇಕ ಎಲ್ಲ ಪ್ರಾಧಿಕಾರಗಳೂ ಹಣ ಕಬಳಿಸುವ ಹಾಗೂ ಲೂಟಿ ಹೊಡೆಯುವ ಕೇಂದ್ರಗಳು ಎಂದು ಕೇಂದ್ರ ಮಾಜಿ ಸಚಿವ, ಕೆನರಾ ಸಂಸದ ಅನಂತಕುಮಾರ ಹೆಗಡೆ ಗಂಭೀರ ಆರೋಪ ಮಾಡಿದರು.

Advertisement

ಕಿತ್ತೂರು ಉತ್ಸವದಲ್ಲಿ ಮಾತನಾಡಿದ ಅವರು, ಪ್ರಾ ಧಿಕಾರಗಳನ್ನು ಉದ್ಯಮದ ರೀತಿಯಲ್ಲಿ ಪರಿಗಣಿಸಿದರೆ ಹಣವನ್ನು ಸರ್ಕಾರದ ಬಳಿ ಕೇಳುವ ಪ್ರಮೇಯವೇ ಬರುವುದಿಲ್ಲ. ಸರ್ಕಾರ ನೀಡುವ ಹಣದಿಂದ ಮಾತ್ರ ಅಭಿವೃದ್ಧಿ ಆಗುವುದಿಲ್ಲ. ಇಂಥ ಅಭಿವೃದ್ಧಿ ಪ್ರಾ ಧಿಕಾರಗಳನ್ನು ಉದ್ಯಮವನ್ನಾಗಿ ಮಾರ್ಪಾಡು ಮಾಡಬೇಕು. ಹಾಗೆ ಮಾಡಿದರೆ ತಾನಾಗಿಯೇ ಹಣ ಹರಿದು ಬರುತ್ತದೆ ಎಂದರು.

ಉದ್ಯಮವಾಗಿ ಬದಲಾಯಿಸಲು ನೀತಿ ನಿಯಮಗಳ ಬದಲಾವಣೆ ಆಗಬೇಕು. ಪ್ರಾಧಿಕಾರಗಳನ್ನು ಸ್ವಾವಲಂಬಿಯಾಗಿಸಬೇಕು.ಇಷ್ಟೊಂದು ಅವಕಾಶಗಳು ಇಲ್ಲಿವೆ. ಕಿತ್ತೂರಿನಲ್ಲಿ ಪ್ರಾಧಿಕಾರಕ್ಕೆ ಉದ್ಯಮದ ಸ್ವರೂಪ ನೀಡಬೇಕಾಗಿದೆ. ಇದು ಕಿತ್ತೂರು ಕರ್ನಾಟಕದ ಕೇಂದ್ರ. ಉದ್ಯಮದ ಕಲ್ಪನೆ ಇದ್ದರೆ ಸಾಕಷ್ಟು ಅನುದಾನ ಬರುತ್ತದೆ ಎಂದರು.

ಉತ್ತರ ಕರ್ನಾಟಕದ ಸಾಂಪ್ರದಾಯಿಕ ಆಹಾರಕ್ಕೆ ಉದ್ಯಮದ ಸ್ವರೂಪ ನೀಡಿದರೆ ಬೆಳೆಯುವುದರಲ್ಲಿ ಸಂದೇಹವೇ ಇಲ್ಲ. ಹೊಸ ಉದ್ಯಮದ ಕಲ್ಪನೆಗೆ ಕಿತ್ತೂರು ಬಳಸಿಕೊಳ್ಳಬಹುದೇ ಎಂಬುದನ್ನು ಯೋಚಿಸಬೇಕಾಗಿದೆ. ಹೊಸ ಉದ್ಯಮಗಳನ್ನು ತಂದರೆ ಆರ್ಥಿಕ ಅಭಿವೃದ್ಧಿ ಆಗುತ್ತದೆ. ಸರ್ಕಾರ ಕ್ರಿಯಾಶೀಲವಾಗಿ ಯೋಚನೆ ಮಾಡಿದರೆ ನಾವು ಹೆಗಲು ಕೊಟ್ಟು ಕೆಲಸ ಮಾಡುತ್ತೇವೆ. ಕಿತ್ತೂರು ಇತಿಹಾಸದ ಅನಾವರಣ ಜನರ ಸಂಕಲ್ಪ, ಕನಸಿನೊಂದಿಗೆ ಆಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next