ವಿಧಾನಸಭೆ: ರಾಜ್ಯ ಸರ್ಕಾರ ಅಧಿಕಾರಿಗಳ ಮೇಲೆ ಹಿಡಿತ ಕಳೆದುಕೊಂಡಿದ್ದು, ಸಚಿವರು ಅಸಹಾಯಕರಾಗಿದ್ದಾರೆ. ಅಧಿಕಾರಿಗಳ ದುರ್ವರ್ತನೆಯಿಂದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಡುವೆ ಸಂಘರ್ಷ ನಡೆಯುತ್ತಿದೆ ಎಂದು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆರೋಗ್ಯ ಇಲಾಖೆ ಮತ್ತು ಕಂದಾಯ ಇಲಾಖೆಗಳಲ್ಲಿ ಅಧಿಕಾರಿಗಳ ನಿರ್ಲಕ್ಷ ನೋಡಿದರೆ, ಆ ಎರಡೂ ಇಲಾಖೆಗಳನ್ನು ವಹಿಸಿಕೊಂಡಿರುವ ಹಿರಿಯ ಸಚಿವರು ಈಗ ಅಸಹಾಯಕರಾಗಿ ಕುಳಿತುಕೊಂಡಿದ್ದಾರೆ. ಹಿರಿಯ ಸಚಿವರ ಸ್ಥಿತಿಯೇ ಹೀಗಾದರೆ, ಸಾಮಾನ್ಯ ಜನರ
ಪರಿಸ್ಥಿತಿ ಏನು ಎಂದು ಪ್ರಶ್ನಿಸಿದರು.
ರಾಮನಗರದಲ್ಲಿ ಆರೋಗ್ಯಾಧಿಕಾರಿ 5 ಲಕ್ಷ ರೂ. ಲಂಚ ಕೊಟ್ಟು ಅಲ್ಲಿಗೆ ಬಂದಿರುವುದಾಗಿ ಹೇಳುತ್ತಾರೆ. ಅವರು ಯಾರಿಗೆ ಲಂಚ ಕೊಟ್ಟಿದ್ದಾರೆ ಅನ್ನುವುದು ಗೊತ್ತಿಲ್ಲ. ಅವರನ್ನು ವರ್ಗಾವಣೆ ಮಾಡಿ ಎಂದು ಸಚಿವರಿಗೆ ಪತ್ರ ಬರೆದಾಗ ತನಿಖೆ ಮಾಡಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಕುಮಾರಸ್ವಾಮಿ ಆರೋಪಿಸಿದರು.
ರಮೇಶ್ ಕುಮಾರ್ ಸಚಿವರಾಗಿ ಭ್ರಷ್ಟ ಅಧಿಕಾರಿಗಳನ್ನು ಸುಟ್ಟುಹಾಕಿ ಎಂದು ಬಹಿರಂಗವಾಗಿಯೇ ಹೇಳಿಕೆ ಕೊಟ್ಟಿದ್ದಾರೆ. ಅವರ ಹೇಳಿಕೆಯಿಂದ ಪ್ರೇರಿತರಾಗಿ ಲಕ್ಷ್ಮೇಶ್ವರದಲ್ಲಿ ಸಾರ್ವಜನಿಕರು ಪೊಲಿಸ್ ಠಾಣೆಗೆ ಬೆಂಕಿ ಹಚ್ಚಿರಬಹುದು. ಇದರಲ್ಲಿ ಯಾರ ವಿರುದಟಛಿ ಕ್ರಮ ಕೈಗೊಳ್ಳುತ್ತೀರಿ ಎಂದು ಪ್ರಶ್ನಿಸಿದರು. ನೀರಾವರಿ ಯೋಜನೆಗಳು ಆಮೆಗತಿಯಲ್ಲಿ ಸಾಗುತ್ತಿದ್ದು, ಯುಕೆಪಿ ಸ್ಕೀಮ್ 2 ರ ಯೋಜನೆಗಳಲ್ಲಿ 178 ಟಿಎಂಸಿ ನೀರು ಬಳಸಿಕೊಳ್ಳಲು ಅವಕಾಶವಿದೆ. ಆದರೆ, ಭೂಸ್ವಾಧೀನ ಮಾಡಿಕೊಳ್ಳಲು ಸರ್ಕಾರ ಮೀಸಲಿಟ್ಟಿರುವ ಹಣ ಯಾವುದಕ್ಕೂ ಸಾಲುವುದಿಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಜಲ ಸಂಪನ್ಮೂಲ
ಸಚಿವ ಎಂ.ಬಿ. ಪಾಟೀಲ್, ಯುಕೆಪಿ 2 ನಲ್ಲಿ 2013ರ ಕೇಂದ್ರ ಕಾಯ್ದೆಯನ್ವಯ ಸರ್ಕಾರ ಭೂ ಸ್ವಾಧೀನಕ್ಕೆ ಕ್ರಮ ಕೈಗೊಂಡಿದ್ದು, ಈಗಾಗಲೇ 17500 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಯೋಜನೆ ಪೂರ್ಣಗೊಳ್ಳಲು ಇನ್ನೂ 50 ಸಾವಿರ ಕೋಟಿ ರೂ. ಬೇಕಾಗುತ್ತದೆ. ನ್ಯಾಯಮಂಡಳಿ ಆದೇಶದಂತೆ ಕೇಂದ್ರ ಸರ್ಕಾರ ಇನ್ನೂ ಅಂತಿಮ ಆದೇಶ ಹೊರಡಿಸಿಲ್ಲ. ಅದಕ್ಕೂ ಮೊದಲೇ ರಾಜ್ಯ ಸರ್ಕಾರ ಯೋಜನೆ ಜಾರಿಗೆ ಅಗತ್ಯ ಕ್ರಮ ಕೈಗೊಂಡಿದೆ ಎಂದು ಸಮರ್ಥಿಸಿಕೊಂಡರು.
ಸರ್ಕಾರ ರಾಜ್ಯಪಾಲರ ಭಾಷಣದಲ್ಲಿ ಜನರಿಗೆ ಅನುಕಂಪ, ಸಹನೆ ಇರಬೇಕು ಎಂದು ಹೇಳಿದೆ. ಆದರೆ, ಮಹದಾಯಿ ನೀರು ಹಂಚಿಕೆ ಹೋರಾಟದಲ್ಲಿ ರೈತರು ಒಂದು ವರ್ಷ ಶಾಂತಿಯುತವಾಗಿ ಹೋರಾಟ ಮಾಡಿದ್ದರು. ನ್ಯಾಯಾಧಿಕರಣದ ತೀರ್ಪಿನಿಂದ ಆಕ್ರೋಶಗೊಂಡು ಬೆಂಕಿ ಹಚ್ಚಿದ್ದರು. ಅದಕ್ಕೆ ಪ್ರತಿಕಾರವಾಗಿ ಸರ್ಕಾರ ವಯೋವೃದಟಛಿರು, ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿತು. ಪೊಲಿಸ್ ಅಧಿಕಾರಿಗಳು ಮನೆಗೆ ನುಗ್ಗಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಅವರ ವಿರುದಟಛಿ ಸರ್ಕಾರ
ಏನು ಕ್ರಮ ಕೈಗೊಂಡಿದೆ. ಸರ್ಕಾರ ಮಹದಾಯಿ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಶೀಘ್ರವೇ ವಾಪಸ್ ಪಡೆಯಬೇಕೆಂದು ಎಚಿಕೆ ಆಗ್ರಹಿಸಿದರು.