Advertisement

ಫ್ರಾನ್ಸ್‌ ಲೇಖಕ ಡೊಮಿನಿಕ್‌ ಲ್ಯಾಪಿಯರ್‌ ಇನ್ನಿಲ್ಲ

12:01 AM Dec 06, 2022 | Team Udayavani |

ಮಾರ್ಸೆಲ್ಲೆ: “ಸಿಟಿ ಆಫ್ ಜಾಯ್‌’ ಸೇರಿದಂತೆ ಹಲವಾರು ಕಾದಂಬರಿಗಳ ಮೂಲಕ ಮನೆಮಾತಾಗಿದ್ದ ಫ್ರಾನ್ಸ್‌ ಲೇಖಕ ಡೊಮಿನಿಕ್‌ ಲ್ಯಾಪಿಯರ್‌(91) ಇಹಲೋಕ ತ್ಯಜಿಸಿದ್ದಾರೆ.

Advertisement

ಭಾರತದ ಬಗ್ಗೆ ವಿಶೇಷ ಒಲವು ಹೊಂದಿದ್ದ ಲ್ಯಾಪಿಯರ್‌ ಅವರ ಕಾದಂಬರಿ ಗಳು ಬಿಸಿ ದೋಸೆಯಂತೆ ಮಾರಾಟವಾಗು ತ್ತಿದ್ದವು. ಅವರು ತಮ್ಮ 6 ಕೃತಿಗಳ 50 ದಶಲಕ್ಷ ಪ್ರತಿಗಳನ್ನು ಮಾರಾಟ ಮಾಡಿದ್ದಾರೆ.

ಈ ಪೈಕಿ “ಈಸ್‌ ಪ್ಯಾರಿಸ್‌ ಬರ್ನಿಂಗ್‌’ ಕೃತಿಯು ಹೆಚ್ಚಿನ ಜನಮನ್ನಣೆ ಗಳಿಸಿತ್ತು. 1985ರಲ್ಲಿ ಅವರು ಬರೆದ ಕೋಲ್ಕತಾದ ರಿಕ್ಷಾ ಚಾಲಕನೊಬ್ಬನ ಬದುಕಿನ ಸಂಕಷ್ಟಗಳನ್ನು ವಿವರಿಸುವಂಥ “ಸಿಟಿ ಆಫ್ ಜಾಯ್‌’ ದೊಡ್ಡ ಯಶಸ್ಸನ್ನುಗಳಿಸಿತ್ತು.

1992ರಲ್ಲಿ ಈ ಕಥೆಯನ್ನು ಆಧರಿಸಿದ ಸಿನೆಮಾವೂ ತೆರೆಕಂಡಿತ್ತು. ಈ ಕಾದಂಬರಿಯಿಂದ ತಾವು ಗಳಿಸಿದ ರಾಯ ಧನದ ಬಹುತೇಕ ಮೊತ್ತವನ್ನು ಅವರು ಭಾರತದಲ್ಲಿ ಮಾನವೀಯ ಯೋಜನೆಗಳಿಗಾಗಿಯೇ ವಿನಿಯೋಗಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next