Advertisement
ಆದರೆ ಮೊದಲ ದಿನವೇ ಪಂದ್ಯಾವಳಿಗೆ ಮಳೆಯಿಂದ ಅಡಚಣೆಯಾಗಿದ್ದು, ಕೆಲವು ಪಂದ್ಯಗಳನ್ನು ಮಂಗಳವಾರಕ್ಕೆ ಮುಂದೂಡಲಾಯಿತು. ಇದರಲ್ಲಿ ಭಾರತದ ಪ್ರಜ್ಞೆàಶ್ ಗುಣೇಶ್ವರನ್ ಅವರ ಪಂದ್ಯವೂ ಸೇರಿದೆ.
21ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯ ಗುರಿಯೊಂದಿಗೆ ಕಣಕ್ಕಿಳಿದಿರುವ 3ನೇ ಶ್ರೇಯಾಂಕದ ರೋಜರ್ ಫೆಡರರ್ ಅಮೆರಿಕದ ಸ್ಟೀವ್ ಜಾನ್ಸನ್ ವಿರುದ್ಧ 6-3, 6-2, 6-2 ಅಂತರದ ನೇರ ಸೆಟ್‌ಗಳ ಜಯ ಸಾಧಿಸಿದರು. “ರಾಡ್ ಲೆವರ್ ಅರೆನಾ’ದಲ್ಲಿ ನಡೆದ ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದರಿಂದ ಛಾವಣಿಯನ್ನು ಮುಚ್ಚಿ ಆಡಲಾಯಿತು. 38 ವರ್ಷದ ಫೆಡರರ್ ಈವರೆಗೆ ಮೆಲ್ಬರ್ನ್ ಪಾರ್ಕ್‌ನಲ್ಲಿ 6 ಸಲ ಕಿರೀಟ ಏರಿಸಿಕೊಂಡಿದ್ದಾರೆ. ವಿಶ್ವದ 6ನೇ ರ್‍ಯಾಂಕಿಂಗ್ ಆಟಗಾರ, ಗ್ರೀಕ್‌ನ ಸ್ಟೆಫನಸ್ ಸಿಸಿಪಸ್ ಕೂಡ ಸುಲಭದಲ್ಲೇ ಮೊದಲ ಸುತ್ತು ಪಾಸ್ ಆದರು. ಅವರು ಇಟೆಲಿಯ ಸಾಲ್ವಟೋರ್ ಕರುಸೊ ವಿರುದ್ಧ 6-0, 6-2, 6-3 ಅಂತರದ ಗೆಲುವು ಕಂಡರು. ಕಳೆದ ವರ್ಷ ಇಲ್ಲಿ ರೋಜರ್ ಫೆಡರರ್ ಅವರನ್ನು ಕೆಡವಿ ಸೆಮಿಫೈನಲ್‌ಗೆ ಲಗ್ಗೆ ಇರಿಸಿದ ಹೆಗ್ಗಳಿಕೆ ಸಿಸಿಪಸ್ ಅವರದಾಗಿದೆ.
Related Articles
Advertisement
ಸೆರೆನಾ, ಬಾರ್ಟಿ ವಿಜಯವನಿತಾ ಸಿಂಗಲ್ಸ್‌ನಲ್ಲಿ ಸೆರೆನಾ ವಿಲಿಯಮ್ಸ್ ಉಸಿರಾಟದ ತೊಂದರೆ ನಡುವೆಯೂ ಸುಲಭ ಗೆಲುವು ಒಲಿಸಿಕೊಂಡರು. ರಶ್ಯದ ಅನಾಸ್ತಾಸಿಯ ಪೊಟಪೋವಾ ಅವರನ್ನು 6-0, 6-3 ಅಂತರದಿಂದ ಮಣಿಸಿದರು. ಇವರ ದ್ವಿತೀಯ ಸುತ್ತಿನ ಎದುರಾಳಿ ಸ್ಲೊವೇನಿಯಾದ ಟಮಾರಾ ಜಿದಾನ್ಸೆಕ್. ಇನ್ನೊಂದು ಪಂದ್ಯದಲ್ಲಿ ಜಿದಾನ್ಸೆಕ್ ದಕ್ಷಿಣ ಕೊರಿಯಾದ ಹಾ ನಾ ಲೀ ಅವರನ್ನು 6-3, 6-3ರಿಂದ ಹಿಮ್ಮೆಟ್ಟಿಸಿದರು. ತವರಿನ ಭರವಸೆಯಾಗಿರುವ ಆ್ಯಶ್ಲಿ ಬಾರ್ಟಿ ಉಕ್ರೇನಿನ ಲೆಸಿಯಾ ಸುರೆಂಕೊ ವಿರುದ್ಧ ಮೊದಲ ಸೆಟ್ ಕಳೆದುಕೊಂಡರೂ ಬಳಿಕ ದಿಟ್ಟ ಪ್ರದರ್ಶನ ನೀಡಿ ಗೆದ್ದು ಬಂದರು. ಅಂತರ 7-5, 6-1, 6-1. ಮಳೆ: ಪ್ರಜ್ಞೆಶ್ ಪಂದ್ಯ ಮುಂದೂಡಿಕೆ
ಭಾರತದ ಪ್ರಜ್ಞೆಶ್ ಗುಣೇಶ್ವರನ್ ಮತ್ತು ಜಪಾನಿನ ಟಟ್ಸುಮ ಇಟೊ ನಡುವಿನ ಮೊದಲ ಸುತ್ತಿನ ಪಂದ್ಯವನ್ನು ಮಳೆಯ ಕಾರಣ ಮಂಗಳವಾರಕ್ಕೆ ಮುಂದೂಡಲಾಗಿದೆ. ಒಮ್ಮೆ ಮುಖ್ಯ ಸುತ್ತಿನ ಅವಕಾಶವನ್ನು ಕಳೆದುಕೊಂಡ ಪ್ರಜ್ಞೆಶ್, ಬಳಿಕ ಗೈರು ಹಾಜರಾದ ಆಟಗಾರರ ಸ್ಥಾನ ತುಂಬುವ ಅದೃಷ್ಟ ಪಡೆದಿದ್ದರು. ಜಪಾನಿ ಟೆನಿಸಿಗನನ್ನು ಸೋಲಿಸಿದರೆ ಪ್ರಜ್ಞೆಶ್ ದ್ವಿತೀಯ ಸುತ್ತಿನಲ್ಲಿ ದೈತ್ಯ ಆಟಗಾರ ನೊವಾಕ್ ಜೊಕೋವಿಕ್ ಅವರನ್ನು ಎದುರಿಸಲಿದ್ದಾರೆ. ಒಸಾಕಾ ಮುನ್ನಡೆ
ಕಳೆದ ವರ್ಷದ ಚಾಂಪಿಯನ್ ನವೋಮಿ ಒಸಾಕಾ 6-2, 6-4 ಅಂತರದಿಂದ ಜೆಕ್ ಆಟಗಾರ್ತಿ ಮಾರಿ ಬೌಜ್ಕೋವಾಗೆ ಸೋಲುಣಿಸಿ ಮುನ್ನಡೆದರು. ಚೀನದ ಜೆಂಗ್ ಸೈಸೈ ಇವರ ಮುಂದಿನ ಎದುರಾಳಿ. ಅವರು ರಶ್ಯದ ಅನ್ನಾ ಕಲಿನ್ಸ್
ಕಾಯಾ ವಿರುದ್ಧ 6-3, 6-2ರಿಂದ ಗೆದ್ದು ಬಂದರು.