Advertisement
5ನೇ ಆಟಗಾರ್ತಿಅಂಕಿತಾ ರೈನಾ ಗ್ರ್ಯಾನ್‌ಸ್ಲಾಮ್ ಪ್ರಧಾನ ಸುತ್ತಿನಲ್ಲಿ ಆಡುವ ಅರ್ಹತೆ ಪಡೆದ ಭಾರತದ 5ನೇ ಆಟಗಾರ್ತಿ. ಉಳಿದವರೆಂದರೆ ನಿರುಪಮಾ ಮಂಕಡ್ (1971), ನಿರುಪಮಾ ವೈದ್ಯನಾಥನ್ (1998), ಶಿಖಾ ಒಬೇ ರಾಯ್ (2004) ಮತ್ತು ಸಾನಿಯಾ ಮಿರ್ಜಾ. ಇವರಲ್ಲಿ ನಿರುಪಮಾ ಮಂಕಡ್ 1971ರ ವಿಂಬಲ್ಡನ್‌ನಲ್ಲಿ ಆನಂದ್ ಅಮೃತ್‌ರಾಜ್ ಅವರೊಂದಿಗೆ ಮಿಶ್ರ ಡಬಲ್ಸ್ ನಲ್ಲಿ ಆಡಿದ್ದರು. ನಿರುಪಮಾ ವೈದ್ಯನಾಥನ್ 1998ರ ಆಸ್ಟ್ರೇಲಿಯನ್ ಓಪನ್ ಕೂಟದಲ್ಲೇ ಕಣಕ್ಕಿಳಿದಿದ್ದರು. ಶಿಖಾ 2004ರ ಯುಎಸ್ ಓಪನ್‌ನಲ್ಲಿ ದ್ವಿತೀಯ ಸುತ್ತು ತಲುಪಿದ್ದರು. ಅನಂತರದ್ದು ಸಾನಿಯಾ ಮಿರ್ಜಾ ಸರದಿ. ಸ್ಟಾರ್ ಆಟಗಾರ್ತಿಯಾಗಿ ಮೆರೆದ ಸಾನಿಯಾ 6 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳನ್ನೆತ್ತಿದ್ದಾರೆ.
ಅಂಕಿತಾ-ಬುಜರೆರ್ಕು ಮೊದಲ ಸುತ್ತಿನಲ್ಲಿ ಆಸ್ಟ್ರೇಲಿ ಯದ ಒಲಿವಿಯಾ ಗಡೇಕಿ-ವೆಲಿಂಡಾ ವೂಲ್‌ಕಾಕ್ ವಿರುದ್ಧ ಸೆಣಸಲಿದ್ದಾರೆ.
ಪುರುಷರ ವಿಭಾಗದಲ್ಲಿ ಭಾರತದ ಮೂವರು ಸ್ಪರ್ಧೆಯಲ್ಲಿದ್ದಾರೆ. ಇವರೆಂದರೆ ಸುಮಿತ್ ನಾಗಲ್, ದಿವಿಜ್ ಶರಣ್ ಮತ್ತು ರೋಹನ್ ಬೋಪಣ್ಣ. ಇವರಲ್ಲಿ ಸುಮಿತ್ ನಾಗಲ್ ಸಿಂಗಲ್ಸ್‌ನಲ್ಲಿ ಸೆಣಸಲಿದ್ದಾರೆ. ಇವರ ಮೊದಲ ಸುತ್ತಿನ ಎದುರಾಳಿ ಲಿಥುವೇನಿಯಾದ ರಿಕಾರ್ಡಸ್ ಬೆರಂಕಿಸ್.
Related Articles
Advertisement