Advertisement
ಮಾರ್ಚ್‌ಗೆ ಅಂತ್ಯವಾದ ತ್ತೈಮಾಸಿಕದಲ್ಲಿ ಆಸ್ಟ್ರೇಲಿಯದ ಆರ್ಥಿಕತೆ ಶೇ. 0.3 ಹಿಂದಕ್ಕೆ ಚಲಿಸಿದೆ. ದೇಶದ ಆರ್ಥಿಕತೆಯ ನಾಗಾಲೋಟಕ್ಕೆ ಕೋವಿಡ್ ವೈರಸ್ ಭಾರೀ ದೊಡ್ಡ ತಡೆಯನ್ನು ಒಡ್ಡಿದೆ.
Related Articles
Advertisement
ಮೂರು ದಶಕಗಳಲ್ಲಿ ಆರ್ಥಿಕ ಹಿಂಜರಿತವನ್ನು ಎದುರಿಸಿದ ಮೊದಲ ಹಣಕಾಸು ಸಚಿವ ಎಂಬ ಅಪಖ್ಯಾತಿಗೆ ಸ್ವತಃ ಫ್ರೈಡೆನ್‌ಬರ್ಗ್ ಅವರೂ ಗುರಿಯಾಗಿದ್ದಾರೆ.
ಲಾಕ್‌ಡೌನ್ ಜಾರಿಗೊಳಿಸುವ ಮೂಲಕ ಆಸ್ಟ್ರೇಲಿಯ ಕೋವಿಡ್ ವೈರಸ್ ಪ್ರಸರಣವನ್ನು ಯಶಸ್ವಿಯಾಗಿ ನಿಭಾಯಿಸಿದೆ. ಆದಾಯದ ಬಹುಪಾಲು ಮೊತ್ತವನ್ನು ಆರೋಗ್ಯ ಕ್ಷೇತ್ರದ ಮೇಲೆ ವಿನಿಯೋಗಿಸಿರುವುದರಿಂದ “ಆರ್ಥಿಕ ತಜ್ಞರು ಹೇಳುವ ಅರ್ಮಗಡೆನ್’ ವಿಪತ್ತಿನಿಂದ ದೇಶ ಪಾರಾಗಿದೆ. ಜುಲೈಯಲ್ಲಿ ಸರಕಾರ ವಿಸ್ತೃತವಾದ ಆರ್ಥಿಕ ವರದಿಯನ್ನು ಬಹಿರಂಗಗೊಳಿಸಲಿದ್ದು, ಆಗ ಆರ್ಥಿಕತೆಯ ಸಮಗ್ರ ಚಿತ್ರಣ ಜನತೆಗೆ ಸಿಗಲಿದೆ ಎಂದಿದ್ದಾರೆ.
ಉದ್ಯೋಗ ಸಬ್ಸಿಡಿ ಕಡಿತಆಸ್ಟ್ರೇಲಿಯದಲ್ಲಿ ನಿರುದ್ಯೋಗಿಗಳಿಗೆ ನೀಡುವ ಉದ್ಯೋಗ ಸಬ್ಸಿಡಿ ಕಡಿತವಾಗಲಿದೆ. ಉದ್ಯೋಗ ಸಬ್ಸಿಡಿ ಮೊತ್ತವನ್ನು 1,500 ಡಾಲರ್‌ಗೆ ಮಿತಿಗೊಳಿಸುವ ಸಾಧ್ಯತೆಯಿದೆ ಇಲ್ಲವೆ ನೌಕರರ ಆದಾಯವನ್ನು ಪರಿಗಣಿಸಿ ಬೇರೆ ಬೇರೆ ಸ್ತರವನ್ನು ನಿಗದಿಪಡಿಸುವ ಸಾಧ್ಯತೆಯಿದೆ. ಕಾಳ್ಗಿಚ್ಚಿನ ಬೆನ್ನಿಗೆ ಕೋವಿಡ್
ಆಸ್ಟ್ರೇಲಿಯ ಸುಮಾರು ಮೂರು ತಿಂಗಳು ಭೀಕರ ಕಾಳಿYಚ್ಚಿನ ವಿರುದ್ಧ ಹೋರಾಡಿತ್ತು. ಕನಿಷ್ಠ ಮೂರು ರಾಜ್ಯಗಳು ಶತಮಾನದ ಭೀಕರ ಕಾಳ್ಗಿಚ್ಚಿನಿಂದ ಧಗಧಗಿಸಿದ್ದವು. ಬೆಂಕಿ ನಂದಿಸಿ ಮೂಲಸೌಕರ್ಯಗಳನ್ನು ಕಲ್ಪಿಸುವ ಕಾರ್ಯ ನಡೆಯುತ್ತಿರುವಂತೆಯೇ ಕೋವಿಡ್ ವಕ್ಕರಿಸಿತು. ಹೀಗಾಗಿ ಎರಡೆರಡು ಹೊಡೆತಗಳನ್ನು ಒಂದೇ ಸಲ ತಾಳಿಕೊಳ್ಳುವ ಅನಿವಾರ್ಯತೆ ದೇಶಕ್ಕೆ ಎದುರಾಗಿದೆ. ಮನೆವಾರ್ತೆ ಬಳಕೆಯಲ್ಲಿ ಶೇ. 1.1 ಕುಸಿತವಾಗಿದೆ ಎಂದು ಅಂಕಿಅಂಶಗಳು ತಿಳಿಸುತ್ತಿವೆ. 2008ರಿಂದೀಚೆಗೆ ಗೃಹ ವಾರ್ತೆಯಲ್ಲಿ ಆಗಿರುವ ಮೊದಲ ಕುಸಿತವಿದು. 34 ವರ್ಷಗಳಲ್ಲಿ ತ್ತೈಮಾಸಿಕ ವೊಂದರಲ್ಲಿ ಇಷ್ಟು ದೊಡ್ಡ ಕುಸಿತವಾಗಿರುವುದು ಇದೇ ಮೊದಲು. ಲಾಕ್‌ಡೌನ್ ಜಾರಿ ಯಾಗುವ ಸಾಧ್ಯತೆ ಗ್ರಹಿಸಿ ಜನರು ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದರು. ಆದರೆ ಇತರ ಸೇವಾ ವಲಯಗಳಲ್ಲಿ ಶೇ. 2.4 ಕುಸಿತ ದಾಖಲಾಗಿದೆ. ಸಾಮಾಜಿಕ ಅಂತರ ಪಾಲನೆ, ಪ್ರಯಾಣ ನಿರ್ಬಂಧ ಇತ್ಯಾದಿ ಕಾರಣಗಳಿಂದ ಸಾರಿಗೆ, ಹೋಟೆಲ್, ಕೆಫೆ, ರೆಸ್ಟೋರೆಂಟ್ ಇತ್ಯಾದಿಗಳಿಗಾಗಿ ಮಾಡುವ ಖರ್ಚಿ ನಲ್ಲಿ ಇಳಿಮುಖವಾಗಿದೆ. ಕೋವಿಡ್ ವೈರಸ್‌ನಿಂದಾಗಿ ಗೃಹ ಬಳಕೆಯ ವಸ್ತುಗಳ ಆಮದು ಶೇ. 3.9 ಕುಸಿದಿದೆ. ಇದೇ ವೇಳೆ ಸೇವೆಗಳ ಆಮದಿನಲ್ಲಿ ಶೇ. 13.6 ಕುಸಿತವಾಗಿದೆ. ಸರಕು ರಫ್ತಿನಲ್ಲಿ ಶೇ.0.7 ಮತ್ತು ಸೇವೆಗಳ ರಫ್ತಿನಲ್ಲಿ ಶೇ. 12.8 ಕುಸಿತ ದಾಖಲಾಗಿದೆ.