Advertisement
ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸೈನಾ ನೆಹ್ವಾಲ್ 21-15, 20-22, 21-14 ರಿಂದ ಮಲೇಷ್ಯಾದ ಸೋನಿಯ ಚೋಹ ವಿರುದ್ಧ ಹೋರಾಟದ ಜಯ ಸಾಧಿಸಿದರು. 1ನೇ ಗೇಮ್ ಅನ್ನು ಸುಲಭವಾಗಿ ಗೆದ್ದ ಭಾರತೀಯ ಆಟಗಾರ್ತಿಗೆ 2ನೇ ಗೇಮ್‌ನಲ್ಲಿ ಮಲೇಷ್ಯಾ ಆಟಗಾರ್ತಿ ತಿರುಗೇಟು ನೀಡಿದ್ದರು.
Related Articles
Advertisement
ಇಂಡೋನೇಷ್ಯಾ ಓಪನ್ ಸೆಮಿಫೈನಲ್ ಪಂದ್ಯದಲ್ಲಿ ಕೂಡ ಸನ್ ವಾನ್ ಹೂಗೆ ಶ್ರೀಕಾಂತ್ ಸೋಲುಣಿಸಿದ್ದರು.ಹೀಗಾಗಿ ಶ್ರೀಕಾಂತ್‌ಗೆ ವಿಶ್ವ ನಂ.1 ಶ್ರೇಯಾಂಕಿತ ಆಟಗಾರನ ವಿರುದ್ಧ 2ನೇ ಜಯವಾಗಿದೆ. 57 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಮೊದಲ ಗೇಮ್ ಕಳೆದುಕೊಂಡ ಭಾರತೀಯ ಆಟಗಾರ 2 ಮತ್ತು 3ನೇ ಗೇಮ್ ಗೆದ್ದು ಕ್ವಾರ್ಟರ್‌ಗೆ ಪ್ರವೇಶಿಸಿದರು. ಜಿದ್ದಿಜಿದ್ದಿನಿಂದ ನಡೆದ ಹೋರಾಟದಲ್ಲಿ ಶ್ರೀಕಾಂತ್ ಅದ್ಭುತ ಹೋರಾಟ ಪ್ರದರ್ಶಿಸಿದರು. ಪುರುಷ ಮತ್ತೂಂದು ಸಿಂಗಲ್ಸ್ ಪಂದ್ಯದಲ್ಲಿ ಭಾರತೀಯ ಆಟಗಾರ ಸಾಯಿ ಪ್ರಣೀತ್ 21-15, 18-21,21-13 ರಿಂದ ಚೀನಾದ ಹುವಾಂಗ್ ಯುಕ್ಸಿಯಾಂಗ್ ವಿರುದ್ಧ ಹೋರಾಟದ ಜಯ ದಾಖಲಿಸಿದರು. ಮೊದಲ ಗೇಮ್ ಗೆದ್ದ ಪ್ರಣೀತ್‌ಗೆ ಚೀನಿ ಆಟಗಾರ 2ನೇ ಗೇಮ್‌ನಲ್ಲಿ ತಿರುಗೇಟು ನೀಡಿದ್ದರು. ಆದರೆ ನಿರ್ಣಾಯಕವಾಗಿದ್ದ 3ನೇ ಗೇಮ್ ಅನ್ನು ಪ್ರಣೀತ್ ವಶಪಡಿಸಿಕೊಂಡು ಕ್ವಾರ್ಟರ್‌ಗೆ ಪ್ರವೇಶಿಸಿದರು. ಕ್ವಾರ್ಟರ್‌ನಲ್ಲಿಶ್ರೀಕಾಂತ್,
ಪ್ರಣೀತ್ ಹಣಾಹಣಿ
ಆಸ್ಟ್ರೇಲಿಯಾ ಓಪನ್‌ನ 2ನೇ ಸುತ್ತಿನಲ್ಲಿ ಜಯ ಸಾಧಿಸಿದ ಭಾರತೀಯ ಆಟಗಾರರಾದ ಶ್ರೀಕಾಂತ್ ಮತ್ತು ಸಾಯಿ ಪ್ರಣೀತ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಖಾಮುಖೀಯಾಗಲಿದ್ದಾರೆ. ಇಬ್ಬರು ಇತ್ತೀಚೆಗೆ ಭರ್ಜರಿ ಫಾಮ್‌ನಲ್ಲಿರುವುದರಿಂದ ತೀವ್ರ ಹೋರಾಟವನ್ನು ನಿರೀಕ್ಷಿಸಬಹುದು.