Advertisement

ಸಚಿವ, ಸಿಬ್ಬಂದಿ ಸಂಬಂಧ ನಿಷೇಧ

07:30 AM Feb 16, 2018 | Harsha Rao |

ಸಿಡ್ನಿ: ಆಸ್ಟ್ರೇಲಿಯಾ ಸರ್ಕಾರದ ಸಚಿವರು ಹಾಗೂ ಸಿಬ್ಬಂದಿ ನಡುವಿನ ಸಂಭಾವ್ಯ ಲೈಂಗಿಕ ಸಂಬಂಧವನ್ನು ನಿಷೇಧಿಸಿ ಆಸ್ಟ್ರೇಲಿಯಾದ ಪ್ರಧಾನಿ ಮಾಲ್ಕೊಮ್‌ ಟರ್ನ್ಬುಲ್‌ ಆದೇಶ ಹೊರಡಿಸಿದ್ದಾರೆ. 

Advertisement

ಉಪ ಪ್ರಧಾನಿ ಬಾರ್ನಬಿ ಜೋಯ್ಸ ತಮ್ಮ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮಾಧ್ಯಮ ಕಾರ್ಯದರ್ಶಿ ಜತೆ ಅಕ್ರಮ ಸಂಬಂಧವಿರಿಸಿಕೊಂಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದು, ಟರ್ನ್ಬುಲ್‌ ನೇತೃತ್ವದ ಲಿಬರಲ್‌ ಪಾರ್ಟಿ ಹಾಗೂ ಜೋಯ್ಸ ಅವರ ನ್ಯಾಷನಲ್‌ ಪಾರ್ಟಿ ನಡುವೆ ಬಿರುಕು ಏರ್ಪಟ್ಟು ಸರ್ಕಾರವೇ ಪತನಗೊಳ್ಳುವ ಅಪಾಯಕ್ಕೆ ಸಿಲುಕಿತ್ತು. ವಿವಾದ ತಣ್ಣಗಾಗಿಸುವ ಪ್ರಯತ್ನವೊಂದರಲ್ಲಿ ಟರ್ನ್ಬುಲ್‌ ಅವರು, ಜೋಯ್ಸ ಅವರನ್ನು ಸರ್ಕಾರದಿಂದ ವಜಾಗೊಳಿಸಲು ಮುಂದಾಗಿದ್ದರಾದರೂ, ಕೇವಲ ಒಂದೇ ಒಂದು ಮತದ ಬಹುಮತದಿಂದ ಈ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ, ಜೋಯ್ಸ ಅವರನ್ನು ಅದೇ ಹುದ್ದೆಯಲ್ಲಿ ಮುಂದುವರಿಸಲು ನಿರ್ಧರಿಸಿದರು. 

ಈ ಎಲ್ಲಾ ಬೆಳವಣಿಗೆಗಳ ತರುವಾಯವೂ, ಪ್ರತಿಪಕ್ಷಗಳ ಬಾಯಿ ಮುಚ್ಚಿಸಲು ಮುಂದಾಗಿರುವ ಟರ್ನ್ಬುಲ್‌, ಇದೀಗ, ಸರ್ಕಾರಿ ವಲಯದಲ್ಲಿನ ಯಾವುದೇ ಸಚಿವರು, ಅಧಿಕಾರಿಗಳು ಇನ್ನಿತರ ಸಿಬ್ಬಂದಿಗಳ ನಡುವಿನ ಲೈಂಗಿಕ ಸಂಬಂಧಗಳನ್ನು ನಿಷೇಧಿಸಿದ್ದಾರೆ. ಕಳೆದ ವಾರವಷ್ಟೇ, ಇಂಥದ್ದೊಂದು ನಿಯಮವನ್ನು ಅಮೆರಿಕ ಅಳವಡಿಸಿಕೊಂಡಿದ್ದು, ಇದೀಗ ತಾವೂ ಅದೇ ಹಾದಿಯಲ್ಲಿ ಸಾಗಿರುವುದಾಗಿ ಅವರು ತಿಳಿಸಿದ್ದಾರೆ. 

ಕಚೇರಿಗಳಲ್ಲಿ ನಮ್ಮ ಜತೆ ಕೆಲಸ ಮಾಡುವವರ ಜತೆ ಲೈಂಗಿಕ ಸಂಪರ್ಕ ಬೆಳೆಸುವುದು ಕೆಟ್ಟ ಆಚರಣೆ. ಇಂಥ ಬೆಳವಣಿಗೆ ಗಳು ಆಯಾ ಸಿಬ್ಬಂದಿಗೆ ಘನತೆಗೆ ಕುಂದು ತರುವಂಥವು. 
ಮಾಲ್ಕೋಮ್‌ ಟರ್ನ್ಬುಲ್‌, ಆಸ್ಟ್ರೇಲಿಯಾ ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next