Advertisement

ಗಾಂಧಿ ಮೌಲ್ಯಗಳು ಜಗತ್ತನ್ನು ಪ್ರೇರೇಪಿಸುತ್ತಿವೆ: ಸಬರಮತಿ ಆಶ್ರಮಕ್ಕೆ ಆಸ್ಟ್ರೇಲಿಯ ಪ್ರಧಾನಿ

09:42 PM Mar 08, 2023 | Team Udayavani |

ಅಹಮದಾಬಾದ್: ಮಹಾತ್ಮ ಗಾಂಧೀಜಿಯವರ ಮೌಲ್ಯಗಳು ಮತ್ತು ತತ್ವಜ್ಞಾನಗಳು ಜಗತ್ತನ್ನು ಪ್ರೇರೇಪಿಸುತ್ತಿವೆ ಮತ್ತು ಅವರ ಜೀವನದಿಂದ ಬಹಳಷ್ಟು ಕಲಿಯಬಹುದು ಎಂದು ಆಸ್ಟ್ರೇಲಿಯದ ಪ್ರಧಾನಿ ಆಂಥೋನಿ ಅಲ್ಬನೀಸ್ ಹೇಳಿದ್ದಾರೆ.

Advertisement

ಭಾರತ ಪ್ರವಾಸದಲ್ಲಿರುವ ಆಂಥೋನಿ ಅಲ್ಬನೀಸ್ ಬುಧವಾರ ಸಂಜೆ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಬಳಿಕ ಮಹಾತ್ಮ ಗಾಂಧಿಯವರ ಹಿಂದಿನ ಮನೆಯಾದ ಆಶ್ರಮಕ್ಕೆ ನೇರವಾಗಿ ತೆರಳಿ ಶ್ರದ್ಧಾಂಜಲಿ ಸಲ್ಲಿಸಿದರು.

ರಾಷ್ಟ್ರಪಿತ 1917 ರಲ್ಲಿ ಸಬರಮತಿ ನದಿಯ ದಡದಲ್ಲಿ ಆಶ್ರಮವನ್ನು ಸ್ಥಾಪಿಸಿದ್ದರು, ಮಾರ್ಚ್ 1930 ರವರೆಗೆ ಇಲ್ಲಿ ವಾಸಿಸುತ್ತಿದ್ದರು, ಅವರು ಪ್ರಸಿದ್ಧ ‘ದಂಡಿ ಮಾರ್ಚ್’ ಅನ್ನು ಪ್ರಾರಂಭಿಸಿದ್ದರು, ಭಾರತಕ್ಕೆ ಸ್ವಾತಂತ್ರ್ಯ ಸಿಗುವವರೆಗೆ ಸ್ಥಳಕ್ಕೆ ಹಿಂತಿರುಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು.

ನಾಲ್ಕು ದಿನಗಳ ಭಾರತ ಪ್ರವಾಸದಲ್ಲಿರುವ ಅಲ್ಬನೀಸ್ ಅವರನ್ನು ವಿಮಾನ ನಿಲ್ದಾಣದಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸ್ವಾಗತಿಸಿ ಆಶ್ರಮ ಭೇಟಿ ಸಂದರ್ಭದಲ್ಲಿ ಜೊತೆಗಿದ್ದರು.

ಆಶ್ರಮದ ತೆರೆದ ಮೈದಾನದಲ್ಲಿ ನಡೆಯುವಾಗ ಸಂದರ್ಶಕರು ಪಾದರಕ್ಷೆಗಳನ್ನು ತೆಗೆಯುವುದು ಕಡ್ಡಾಯವಲ್ಲದಿದ್ದರೂ, ಆಸ್ಟ್ರೇಲಿಯದ ಪ್ರಧಾನಿಗಳು ಮಹಾತ್ಮ ಗಾಂಧಿ ಮತ್ತು ಸಾಂಪ್ರದಾಯಿಕ ಸ್ಥಳದ ಗೌರವಾರ್ಥವಾಗಿ ಪಾದರಕ್ಷೆಗಳನ್ನ ತೆಗೆದಿದ್ದಾರೆ ಎಂದು ಆಶ್ರಮದ ಟ್ರಸ್ಟಿ ಕಾರ್ತಿಕೇಯ ಸಾರಾಭಾಯ್ ಹೇಳಿದ್ದಾರೆ.

Advertisement

ಭಾರತೀಯ ಸ್ವಾತಂತ್ರ್ಯ ವೀರರು ವಾಸಿಸುತ್ತಿದ್ದ ಆಶ್ರಮದೊಳಗಿನ ಕೋಣೆಯಾದ ‘ಹೃದಯ್ ಕುಂಜ್’ ಅನ್ನು ಸಹ ನೋಡಿದರು.

“ಅಲ್ಬನೀಸ್ ಚರಕವನ್ನು ಬಳಸಿ ಖಾದಿಯನ್ನು ಹೇಗೆ ನೇಯುತ್ತಾರೆ ಎಂಬುದನ್ನು ನೋಡಿ ಆಶ್ಚರ್ಯಚಕಿತರಾದರು. ‘ಖಾದಿ’ ಎಂಬ ಪದ ಅವರಿಗೆ ಹೊಸತು, ಆದ್ದರಿಂದ ನಮ್ಮ ಟ್ರಸ್ಟಿ ಅಮೃತ್‌ಭಾಯ್ ಮೋದಿ ಅವರಿಗೆ ಸಂಪೂರ್ಣ ಪ್ರಕ್ರಿಯೆಯನ್ನು ವಿವರಿಸಿದರು” ಎಂದು ಸಾರಾಭಾಯ್ ಸುದ್ದಿಗಾರರಿಗೆ ತಿಳಿಸಿದರು.

ಸಬರಮತಿ ಆಶ್ರಮ ಸಂರಕ್ಷಣೆ ಮತ್ತು ಸ್ಮಾರಕ ಟ್ರಸ್ಟ್‌ನ ಪರವಾಗಿ, ಸಾರಾಭಾಯ್ ಮತ್ತು ಇತರ ಟ್ರಸ್ಟಿಗಳು ಮಹಾತ್ಮ ಗಾಂಧಿಯವರ ಐತಿಹಾಸಿಕ ಉಪ್ಪಿನ ಮೆರವಣಿಗೆಯ ಕುರಿತು ಆಸ್ಟ್ರೇಲಿಯದ ಲೇಖಕ ಥಾಮಸ್ ವೆಬರ್ ಬರೆದ ಪುಸ್ತಕವನ್ನು ಭೇಟಿ ನೀಡಿದ ನಾಯಕನಿಗೆ ಉಡುಗೊರೆಯಾಗಿ ನೀಡಿದರು.

ರಾಜಭವನದಲ್ಲಿ ನಡೆದ ಹೋಳಿ ಆಚರಣೆ ಕಾರ್ಯಕ್ರಮದಲ್ಲಿ ಆಂಥೋನಿ ಅಲ್ಬನೀಸ್, ಭೂಪೇಂದ್ರ ಪಟೇಲ್ ಮತ್ತು ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್ ಭಾಗವಹಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next