Advertisement

ಸಂಸತ್‌ ಚುನಾವಣೆ : ಸ್ಕಾಟ್‌ಮಾರಿಸನ್‌ ನೇತೃತ್ವದ ಆಸ್ಟ್ರೇಲಿಯನ್‌ ಲಿಬ­ರಲ್‌ ಪಾರ್ಟಿಗೆ ಸೋಲು

12:39 AM May 22, 2022 | Team Udayavani |

ಕ್ಯಾನ್‌ಬೆರ್ರಾ: ಆಸ್ಟ್ರೇಲಿಯಾದ ಸಂಸತ್‌ಗೆ ನಡೆದ ಚುನಾವಣೆ­ಯಲ್ಲಿ ಪ್ರಧಾನಿ ಸ್ಕಾಟ್‌ಮಾರಿಸನ್‌ ನೇತೃತ್ವದ ಆಸ್ಟ್ರೇಲಿಯನ್‌ ಲಿಬ­ರಲ್‌ ಪಾರ್ಟಿ ಸೋಲು ಅನುಭವಿ­ಸಿದೆ.

Advertisement

ಈ ಕಾರ­ಣಕ್ಕಾಗಿ ವಿಪಕ್ಷ ಲೇಬರ್‌ ಪಾರ್ಟಿ ಮತ್ತು ಮೈತ್ರಿಕೂಟದ ಮುಖ್ಯಸ್ಥ ಆ್ಯಂಟನಿ ಆಲ್ಬನೀಸ್‌ ಶೀಘ್ರದ­ಲ್ಲಿಯೇ ಪ್ರಧಾನಿಯಾಗಲಿದ್ದಾರೆ.

ಸದ್ಯದ ಫ‌ಲಿತಾಂಶದ ಪ್ರಕಾರ ಆಡಳಿತಾ­ರೂಡ ಆಸ್ಟ್ರೇ­ಲಿಯನ್‌ ಲಿಬರಲ್‌ ಪಾರ್ಟಿ ಶೇ. 23.54 ಮತ­ಗಳನ್ನು ಪಡೆದುಕೊಂಡಿದ್ದರೆ, ವಿಪಕ್ಷ ಲೇಬರ್‌ ನ್ಯಾಶನಲ್‌ ಪಕ್ಷ ಮತ್ತು ಮೈತ್ರಿಕೂಟಕ್ಕೆ ಶೇ.35.41 ಮತಗಳು ಪ್ರಾಪ್ತವಾಗಿವೆ.

2007ರ ಬಳಿಕ ಇದೇ ಮೊದಲ ಬಾರಿಗೆ ಆಸೀಸ್‌ನಲ್ಲಿ ವಿಪಕ್ಷ ನಾಯಕರು ಪ್ರಧಾನಿ ಹುದ್ದೆಗೆ ಏರಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next