ಕ್ಯಾನ್ ಬೆರಾ : ಆಸ್ಟ್ರೇಲಿಯಾದ ಸಂಸತ್ತಿನಲ್ಲಿ ಅಪರಿಚಿತ ಸಹದ್ಯೋಗಿವೊರ್ವರಿಂದ ಅತ್ಯಾಚಾರವಾಗಿದೆ ಎಂದು ಆರೋಪಿಸಿರುವ ಮಹಿಳೆಗೆ ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಸ್ಕಾಟ್ ಮೊರಿಸನ್ ಕ್ಷಮಯಾಚಿಸಿದ್ದಾರೆ. ಮತ್ತು ಆ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
ಓದಿ : ಯಾವ ಐಎಎಸ್ ಅಧಿಕಾರಿ ಲಾಬಿಯೋ ಗೊತ್ತಿಲ್ಲ: ಕತ್ತಿ ವಿರುದ್ದ ರೇಣುಕಾಚಾರ್ಯ ಕಿಡಿ
ರಕ್ಷಣಾ ಸಚಿವ ಲಿಂಡಾ ರೆನೊಲ್ಡ್ಸ್ ಅವರ ಕಚೇರಿಯಲ್ಲಿ, ಮೊರಿಸನ್ ಅವರ ಲಿಬರಲ್ ಪಾರ್ಟಿಯಲ್ಲಿ ಕೆಲಸ ಮಾಡುತ್ತಿದ್ದ ಓರ್ವನಿಂದ 2019ರ ಮಾರ್ಚ್ ನಲ್ಲಿ ಬಲವಂತವಾಗಿ ಅತ್ಯಾಚಾರವಾಗಿದೆ ಎಂದು ಆಕೆ ಹೇಳಿಕೊಂಡಿದ್ದಾಳೆ ಎಂದು ವರದಿಯಾಗಿದೆ.
ಆಕೆಗೆ ಪೊಲೀಸ್ ದೂರು ನೀಡುವ ಕುರಿತಾಗಿ ತಿಳಿಸಲಾಗಿತ್ತು. ಆದರೇ, ಮಹಿಳೆ ದೂರು ಸಲ್ಲಿಸುವುದರ ವಿರುದ್ಧ ಆಕೆಗೆ ಒತ್ತಡ ಹೇರಿದ್ದರು ಎಂದು ರೆನೋಲ್ಡ್ಸ್ ಸ್ಪಷ್ಟ ಪಡಿಸಿದ್ದಾರೆ.
ಇನ್ನು, ಸಂಸತ್ತಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಮಹಿಳೆಯರ ಬಗ್ಗೆ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಇನ್ನು ಮುಂದೆ ಇಂತಹ ಪ್ರಕರಣಗಳು ನಡೆಯದಂತೆ ನೋಡಿಕೊಳ್ಳಲಾಗುತ್ತದೆ ಎಂದು ಮೊರಿಸನ್ ಹೇಳಿದ್ದಾರೆ ಎಂದು ವರದಿಯಾಗಿದೆ.
ಓದಿ : ಫೆ.20ರಂದು ರಾಜ್ಯದ 227 ಕಡೆ ‘ಹಳ್ಳಿ ಕಡೆ ನಡೆಯಿರಿ’ ಕಾರ್ಯಕ್ರಮ: ಸಚಿವ ಅಶೋಕ್