ನವದೆಹಲಿ: ಭಾರತದ ಜತೆಗೆ ಆಸ್ಟ್ರೇಲಿಯಾ ಹೊಂದಲು ಉದ್ದೇಶಿಸಿರುವ ಮುಕ್ತ ವ್ಯಾಪಾರ ಒಪ್ಪಂದ (ಎಫ್ ಟಿಎ)ಕ್ಕೆ ಆ ದೇಶದ ಸಂಸತ್‌ನ ಅನುಮೋದನೆ ದೊರಕಿದೆ. ಇದರಿಂದಾಗಿ ಒಪ್ಪಂದ ಶೀಘ್ರವೇ ಜಾರಿಯಾಗಲಿದೆ.
Advertisement
ಎರಡೂ ದೇಶಗಳ ನಡುವೆ ಏಪ್ರಿಲ್‌ನಲ್ಲಿ ಸಹಿ ಹಾಕಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ಸಭೆಯಲ್ಲಿ ಕೂಡ ಈ ಬಗ್ಗೆ ಚರ್ಚೆ ನಡೆಸಿ ಅನುಮೋದನೆ ಲಭಿಸಿತ್ತು.
ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಎರಡು ದೇಶಗಳು ಹೊಂದಿರುವ ಸಹಭಾಗಿತ್ವ ವೃದ್ಧಿಸಲಿದೆ ಎಂದಿದ್ದಾರೆ.