Advertisement
ಇನ್ನೊಂದು ಐದು ಸೆಟ್‌ಗಳ ಕಠಿನ ಹೋರಾಟದಲ್ಲಿ 11ನೇ ಶ್ರೇಯಾಂಕದ ಕ್ಯಾಸ್ಪರ್ ರೂಡ್ ಅವರು ಸ್ಥಳೀಯ ಮ್ಯಾಕ್ಸ್ ಪುರ್ಸೆಲ್ ಅವರನ್ನು ಸೋಲಿಸಿ ಮೂರನೇ ಸುತ್ತಿಗೇರಿದ್ದಾರೆ. 6-3, 6-7 (5), 6-3, 3-6, 7-6 (7) ಸೆಟ್‌ಗಳಿಂದ ಎದುರಾಳಿಯನ್ನು ಮಣಿಸಿದ ರೂಡ್ ಅವರು ಮೂರನೇ ಸುತ್ತಿನಲ್ಲಿ ಬ್ರಿಟನ್‌ನ ಕ್ಯಾಮರಾನ್ ನೂರಿ ಅವರ ಸವಾಲನ್ನು ಎದುರಿಸಲಿದ್ದಾರೆ. ನೂರಿ ಕೂಡ ಇನ್ನೊಂದು ಐದು ಸೆಟ್‌ಗಳ ಹೋರಾಟದಲ್ಲಿ ಇಟಲಿನ ಅರ್ಹತಾ ಆಟಗಾರ ಜಿಲಿಯೊ ಜೆಪ್ಪೀರಿ ಅವರನ್ನು ಕೆಡಹಿದ್ದರು.
ಆರನೇ ಶ್ರೇಯಾಂಕದ ಅಲೆಕ್ಸಾಂಡರ್ ಜ್ವರೇವ್ ಅವರು ಸ್ಲೊವಾಕಿಯದ ಅರ್ಹತಾ ಆಟಗಾರ ಲುಕಾಸ್ ಕ್ಲೈನ್ ಅವರನ್ನು 7-5, 3-6, 4-6, 7-6 (5), 7-6 (7) ಸೆಟ್‌ಗಳಿಂದ ಮಣಿಸಿ ಮೂರನೇ ಸುತ್ತು ಪ್ರವೇಶಿಸಿದ್ದಾರೆ. ಮಳೆಯಿಂದ ಈ ಪಂದ್ಯ ಛಾವಣಿ ಇರುವ ಮೈದಾನದಲ್ಲಿ ನಡೆಯಿತು. ಸ್ವಿಯಾಟೆಕ್‌ಗೆ ಗೆಲುವು
ವಿಶ್ವದ ನಂಬರ್ ವನ್ ಇಗಾ ಸ್ವಿಯಾಟೆಕ್ ಅವರು ಎರಡು ಬ್ರೇಕ್ ಅಂಕದಿಂದ ಹಿನ್ನೆಡೆಯಲ್ಲಿದ್ದರೂ ಚೇತರಿಸಿಕೊಂಡು ಡೇನಿಯಲ್ ಕಾಲಿನ್ಸ್ ಅವರನ್ನು 6-4, 3-6, 6-4 ಸೆಟ್‌ಗಳಿಂದ ಸೋಲಿಸಿ ಮೂರನೇ ಸುತ್ತಿಗೇರಿದರು. ಅವರು ಸತತ ಐದನೇ ವರ್ಷ ಅವರು ಮೂರನೇ ಸುತ್ತಿಗೇರಿದ ಸಾಧನೆ ಮಾಡಿದ್ದಾರೆ. ನಾಲ್ಕು ಬಾರಿಯ ಗ್ರ್ಯಾನ್ ಸ್ಲಾಮ್ ಚಾಂಪಿಯನ್ ಸ್ವಿಯಾಟೆಕ್ ಅವರು ಮುಂದಿನ ಸುತ್ತಿನಲ್ಲಿ ಜೆಕ್‌ನ ಲಿಂಡಾ ನೊಸ್ಕೋವಾ ಅವರನ್ನು ಎದುರಿಸಲಿದ್ದಾರೆ.
Related Articles
Advertisement