Advertisement

ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌: ಪ್ರಶಸ್ತಿಗಾಗಿ ರಿಬಕಿನಾ, ಸಬಲೆಂಕಾ ಹೋರಾಟ

07:36 AM Jan 27, 2023 | Team Udayavani |

ಮೆಲ್ಬರ್ನ್: ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಸೆಮಿಫೈನಲ್‌ನಲ್ಲಿ ವಿಂಬಲ್ಡನ್‌ ಚಾಂಪಿಯನ್‌ ಕಝಕಸ್ತಾನದ ಎಲೆನಾ ರಿಬಕಿನಾ ಅವರು ವಿಕ್ಟೋರಿಯಾ ಅಜರೆಂಕಾ ಅವರನ್ನು ಎರಡು ಸೆಟ್‌ಗಳ ಕಠಿಣ ಹೋರಾಟದಲ್ಲಿ ಸೋಲಿಸಿದ್ದಾರೆ. ಅಲ್ಲಿ ಮಹಿಳಾ ಸಿಂಗಲ್ಸ್‌ನಲ್ಲಿ ಫೈನಲ್‌ ಹಂತಕ್ಕೇರಿದ್ದಾರೆ. ಅವರು ಕಳೆದ ಮೂರು ಗ್ರ್ಯಾನ್‌ಸ್ಲಾéಮ್‌ ಕೂಟಗಳಲ್ಲಿ ಎರಡನೇ ಬಾರಿ ಫೈನಲಿಗೇರಿದ ಸಾಧನೆ ಮಾಡಿದ್ದಾರೆ.

Advertisement

ಶನಿವಾರ ನಡೆಯುವ ಫೈನಲ್‌ ಹೋರಾಟದಲ್ಲಿ ರಿಬಕಿನಾ ಅವರು ಬೆಲಾರಸ್‌ನ ಅರ್ಯಾನಾ ಸಬಲೆಂಕಾ ಅವರ ಸವಾಲನ್ನು ಎದುರಿಸಲಿದ್ದಾರೆ. ಗುರುವಾರ ನಡೆದ ಇನ್ನೊಂದು ಸೆಮಿಫೈನಲ್‌ ಹೋರಾಟದಲ್ಲಿ ಸಬಲೆಂಕಾ ಅವರು ಶ್ರೇಯಾಂಕರಹಿತ ಆಟಗಾರ್ತಿ ಪೊಲೆಂಡಿನ ಮ್ಯಾಗಾx ಲಿನೆಟ್‌ ಅವರನ್ನು 7-6 (7-1), 6-2 ಸೆಟ್‌ಗಳಿಂದ ಸೋಲಿಸಿ ಫೈನಲಿಗೇರಿದ್ದರು.

ಅಡಿಲೇಡ್‌ ಚಾಂಪಿಯನ್‌ ಆಗಿರುವ ಸಬಲೆಂಕಾ 2023ರಲ್ಲಿ ನಡೆದ 10 ಪಂದ್ಯಗಳಲ್ಲಿ ಯಾವುದೇ ಸೆಟ್‌ ಕಳೆದುಕೊಳ್ಳದೇ ಗೆಲುವು ಸಾಧಿಸುತ್ತ ಬಂದಿದ್ದಾರೆ. ಆದರೆ ಸೆಮಿಫೈನಲ್‌ನ ಮೊದಲ ಸೆಟ್‌ನಲ್ಲಿ ಅವರು ಕಳಪೆಯಾಗಿ ಆರಂಭ ಮಾಡಿದ್ದರು. ಆದರೆ ಟೈಬ್ರೇಕರ್‌ನಲ್ಲಿ ಸೆಟ್‌ ಗೆಲ್ಲಲು ಯಶಸ್ವಿಯಾಗಿದ್ದರು.

ಅಜರೆಂಕಾಗೆ ಸೋಲು
2012 ಮತ್ತು 2013ರಲ್ಲಿ ಇಲ್ಲಿ ಪ್ರಶಸ್ತಿ ಜಯಿಸಿದ್ದ ಅಜರೆಂಕಾ ಕೂಡ ಮೊದಲ ಸೆಟ್‌ನಲ್ಲಿ ಪ್ರಬಲ ಹೋರಾಟ ಸಂಘಟಿಸಿದ್ದರು. ಆದರೆ ರಿಬಕಿನಾ ಅವರ ಅದ್ಭುತ ಆಟದೆದುರು ಅವರ ಆಟ ನಡೆಯಲಿಲ್ಲ. ಅಂತಿಮವಾಗಿ ರಿಬಕಿನಾ 7-6 (4), 6-3 ಸೆಟ್‌ಗಳಿಂದ ಜಯ ಸಾಧಿಸಿ ಪ್ರಶಸ್ತಿ ಸುತ್ತಿಗೆ ತಲುಪಿದರು. ರಿಬಕಿನಾ ಕಳೆದ ಎರಡು ವಾರಗಳಲ್ಲಿ ಅಜರೆಂಕಾ ಸಹಿತ ನಂಬರ್‌ ವನ್‌ ಐಗಾ ಸ್ವಿಯಾಟೆಕ್‌, 17ನೇ ರ್‍ಯಾಂಕಿನ ಜೆಲೆನಾ ಒಸ್ಟಾಪೆಂಕೊ ಮತ್ತು ಡೆನಿಲೆ ಕಾಲಿನ್ಸ್‌ ಅವರನ್ನು ಸೋಲಿಸಿದ್ದರು.

ಶಕ್ತಿಶಾಲಿ ಸರ್ವ್‌ಗಳಿಗೆ ಹೆಸರುವಾಸಿಯಾಗಿರುವ ರಿಬಕಿನಾ ಈ ಪಂದ್ಯದಲ್ಲೂ 9 ಏಸ್‌ಗಳನ್ನು ಸಿಡಿಸಿದ್ದರು. ಒಟ್ಟಾರೆ ಈ ಕೂಟದಲ್ಲಿ 44 ಏಸ್‌ಗಳನ್ನು ಸಿಡಿಸಿ ತನ್ನ ಪರಾಕ್ರಮವನ್ನು ಮೆರೆದಿದ್ದಾರೆ. 23ರ ಹರೆಯದ ರಿಬಕಿನಾ ಅವರು ಅಜರೆಂಕಾ ಅವರಿಗಿಂತ 10 ವರ್ಷ ಚಿಕ್ಕವರು. ಇದನ್ನು ಗಮನಿಸಿದರೆ ರಿಬಕಿನಾ ಅವರ ಭವಿಷ್ಯ ಉಜ್ವಲವಾಗಿರಬಹುದು ಎಂಬುದನ್ನು ತಿಳಿಯಬಹುದು.

Advertisement

ರಷ್ಯಾದಲ್ಲಿ ಜನನ
ರಷ್ಯಾದ ಮಾಸ್ಕೋದಲ್ಲಿ ಜನಿಸಿದ್ದ ರಿಬಕಿನಾ 2018ರಿಂದ ಕಝಕಸ್ತಾನವನ್ನು ಪ್ರತಿನಿಧಿಸುತ್ತಿದ್ದಾರೆ. ತಮ್ಮ ಟೆನಿಸ್‌ ಬಾಳ್ವೆಗೆ ಹಣ ನೀಡಿ ಸಹಕರಿಸುವುದಾಗಿ ಕಝಕಸ್ತಾನ ಭರವಸೆ ನೀಡಿದ್ದರಿಂದ ಅವರು ಆ ದೇಶವನ್ನು ಇದೀಗ ಪ್ರತಿನಿಧಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next