Advertisement
ಯುಎಸ್ ಓಪನ್ ಸೆಮಿ ಫೈನಲ್‌ನಲ್ಲಿ ಪ್ಲಿಸ್ಕೋವಾ ಕೈಯಲ್ಲಿ ಆಘಾತಕಾರಿ ಸೋಲುಂಡ ಬಳಿಕ ಸೆರೆನಾ ಫಾರ್ಮ್ ಬಗ್ಗೆ ಸ್ವಲ್ಪ ಅನುಮಾನ ಹುಟ್ಟಿಕೊಂಡಿತ್ತು. ಈ ಸೋಲಿನಿಂದ ಸೆರೆನಾರ ಅಗ್ರ ರ್‍ಯಾಂಕಿಂಗ್ ಕೂಡ ಜಾರಿತ್ತು. ಇದೂ ಸಾಲದೆಂಬಂತೆ, ಇದೇ ತಿಂಗಳ ಆಕ್ಲೆಂಡ್ ಕ್ಲಾಸಿಕ್ ದ್ವಿತೀಯ ಸುತ್ತಿನಲ್ಲೇ ಅವರು ಮ್ಯಾಡಿಸನ್ ಬ್ರಿಂಗಲ್‌ಗೆ ಸೋತಿದ್ದರು. ಆದರೆ ಬೆನ್ಸಿಕ್ ವಿರುದ್ಧ ಶಕ್ತಿಶಾಲಿ ಪ್ರದರ್ಶನವನ್ನೇ ನೀಡಿ ಅನುಮಾನವನ್ನು ದೂರ ಮಾಡಿದರು. ಆದರೆ ಇದು ಪ್ರಥಮ ಸುತ್ತಿನಲ್ಲೇ ತಾನು ಕಂಡ ಅತ್ಯಂತ ಕಠಿನ ಪಂದ್ಯ ಎಂದಿದ್ದಾರೆ.
Related Articles
18ನೇ ಶ್ರೇಯಾಂಕಿತ ಆಟ ಗಾರ್ತಿ ಸಮಂತಾ ಸ್ಟೋಸರ್ ಮೊದಲ ಸುತ್ತಿ ನಲ್ಲೇ ಸೋಲುಂಡು ಆತಿಥೇಯ ನಾಡಿನ ಟೆನಿಸ್ ಅಭಿಮಾನಿಗಳನ್ನು ನಿರಾಸೆಯಲ್ಲಿ ಕೆಡವಿದರು. ಬ್ರಿಟನ್ನಿನ ಹೀತರ್ ವಾಟ್ಸನ್ 6-3, 3-6, 6-0 ಅಂತರದಿಂದ ಆಸ್ಟ್ರೇಲಿಯನ್ ಆಟಗಾರ್ತಿಗೆ ಆಘಾತವಿಕ್ಕಿದರು.
Advertisement
ಆತಿಥೇಯ ದೇಶದ ಮತ್ತೂಬ್ಬ ಆಟಗಾರ್ತಿ ಅರಿನಾ ರೊಡಿಯೊನೋವಾ ಕೂಡ ಮೊದಲ ಸುತ್ತಿನಲ್ಲೇ ಎಡವಿದ್ದಾರೆ. ಅವರನ್ನು ಡೆನ್ಮಾರ್ಕ್‌ನ ಕ್ಯಾರೋಲಿನ್ ವೋಜ್ನಿಯಾಕಿ 6-1, 6-2ರಿಂದ ಸುಲಭದಲ್ಲಿ ಮಣಿಸಿದರು.
ಸ್ಲೊವಾಕಿಯಾದ 6ನೇ ಶ್ರೇಯಾಂಕದ ಆಟಗಾರ್ತಿ, 2014ರ ಫೈನಲಿಸ್ಟ್ ಡೊಮಿನಿಕಾ ಸಿಬುಲ್ಕೋವಾ ಸಾಹಸಭರಿತ ಹೋರಾಟವೊಂದರಲ್ಲಿ ಜೆಕ್ ಗಣರಾಜ್ಯದ ಡೆನಿಸಾ ಅಲಟೋìವಾಗೆ 7-5, 6-2 ಅಂತರದ ಸೋಲುಣಿಸಿದರು. 21ನೇ ಶ್ರೇಯಾಂಕಿತೆ ಫ್ರಾನ್ಸ್‌ನ ಕ್ಯಾರೋಲಿನ್ ಗಾರ್ಸಿಯಾ ಉಕ್ರೇನಿನ ಕ್ಯಾಥರಿನಾ ಬೊಂಡಾರೆಂಕೊ ಆಟವನ್ನು 7-6 (7-4), 6-4ರಿಂದ ಮುಗಿಸಿದರು. ಜೆಕ್ ಆಟಗಾರ್ತಿ ಬಾಬೊìರಾ ಸ್ಟ್ರೈಕೋವಾ, ರಶ್ಯದ ಎಲಿನಾ ವೆಸ್ನಿನಾ, ಎಕ್ತರಿನಾ ಮಕರೋವಾ, ಇಟಲಿಯ ಸಾರಾ ಎರಾನಿ ಜಯದೊಂದಿಗೆ 2ನೇ ಸುತ್ತಿಗೆ ಏರಿದ್ದಾರೆ. ಆದರೆ ಹಂಗೇರಿಯ ಟೈಮಿಯಾ ಬಬೋಸ್ (25) ಪರಾಭವಗೊಂಡಿದ್ದಾರೆ.