Advertisement

ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌: ಚಾಂಪಿಯನ್‌ ನಡಾಲ್‌ ನಿರ್ಗಮನ

11:52 PM Jan 18, 2023 | Team Udayavani |

ಮೆಲ್ಬರ್ನ್: ವರ್ಷಾ ರಂಭದ ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ನಲ್ಲಿ ದೊಡ್ಡ ತಾರೆ ಯೊಂದು ಪತನಗೊಂಡಿದೆ. ಹಾಲಿ ಚಾಂಪಿಯನ್‌ ರಫೆಲ್‌ ನಡಾಲ್‌ ದ್ವಿತೀಯ ಸುತ್ತಿನಲ್ಲೇ ಆಘಾತಕಾರಿ ಸೋಲನುಭವಿಸಿ ಕೂಟದಿಂದ ನಿರ್ಗಮಿಸಿದ್ದಾರೆ.

Advertisement

ಅಷ್ಟೇನೂ ಫಿಟ್‌ನೆಸ್‌ ಹೊಂದಿಲ್ಲದ ನಡಾಲ್‌ ಅವರನ್ನು ಅಮೆರಿಕದ ಮೆಕೆಂಝಿ ಮೆಕ್‌ಡೊನಾಲ್ಡ್‌ 6-4, 6-4, 7-5 ಅಂತರದ ನೇರ ಸೆಟ್‌ಗಳಲ್ಲಿ ಮಣಿಸಿದರು.

ಪಂದ್ಯ ವೇಳೆ ನಡಾಲ್‌ ಸೊಂಟದ ನೋವಿನಿಂದ ನರಳುತ್ತಿದ್ದರು. ವೈದ್ಯ ಕೀಯ ನೆರವನ್ನೂ ಪಡೆದರು. ಆದರೆ ಅವರ ಸೋಲಿಗೆ ಇದೊಂದೇ ಕಾರಣವಾಗಿರಲಿಲ್ಲ. ಎದುರಾಳಿ ಮೆಕ್‌ಡೊನಾಲ್ಡ್‌ ತೀಕ್ಷ್ಣ ಹೊಡೆತಗಳ ಮೂಲಕ ಸ್ಪೇನಿಗನ ಮೇಲೆ ಸವಾರಿ ಮಾಡಿದ್ದರು.

ಇದು 2016ರ ಬಳಿಕ ಗ್ರ್ಯಾನ್‌ಸ್ಲಾಮ್‌ ಕೂಟದಲ್ಲಿ ನಡಾಲ್‌ ಕಂಡ ಅತ್ಯಂತ ತ್ವರಿತ ನಿರ್ಗಮನವಾಗಿದೆ. ಅಂದಿನ ಆಸ್ಟ್ರೇಲಿಯನ್‌ ಓಪನ್‌ ಕೂಟದ ಮೊದಲ ಸುತ್ತಿನಲ್ಲೇ ಫೆರ್ನಾಂಡೊ ವೆರ್ದಸ್ಕೊ ಅವರಿಗೆ ಶರಣಾಗಿದ್ದರು.

ನಡಾಲ್‌ ಅವರನ್ನು ಪರಾಭವಗೊಳಿ ಸಿದ ಮೆಕೆಂಝಿ ಮೆಕ್‌ಡೊನಾಲ್ಡ್‌ ಈವರೆಗಿನ ಯಾವುದೇ ದೊಡ್ಡ ಮಟ್ಟದ ಟೆನಿಸ್‌ ಕೂಟದಲ್ಲಿ 4ನೇ ಸುತ್ತು ದಾಟಿದವರಲ್ಲ.

Advertisement

ಪುರುಷರ ವಿಭಾಗದ ಇನ್ನೊಂದು ಪಂದ್ಯದಲ್ಲಿ ಕೆನಡಾದ ಫೆಲಿಕ್ಸ್‌ ಔಗರ್‌ ಅಲಿಯಾಸಿಮ್‌ ಸ್ವಲ್ಪದರಲ್ಲೇ ಬಚಾವಾದರು. ಸ್ಲೊವಾಕಿಯಾದ ಅಲೆಕ್ಸ್‌ ಮೋಲ್‌ಕ್ಯಾನ್‌ ವಿರುದ್ಧದ 5 ಸೆಟ್‌ಗಳ ಜಿದ್ದಾಜಿದ್ದಿ ಕಾಳಗದಲ್ಲಿ ಅಲಿಯಾಸಿಮ್‌ 3-6, 3-6, 6-3, 6-2, 6-2ರಿಂದ ಗೆದ್ದು ಬಂದರು.

ಡಾರ್ಕ್‌ ಹಾರ್ಸ್‌ ಆಗಿರುವ ಇಟಲಿಯ ಜಾನಿಕ್‌ ಸಿನ್ನರ್‌ ಆರ್ಜೆಂ ಟೀನಾದ ಥಾಮಸ್‌ ಈಶೆವೆರಿ ವಿರುದ್ಧ 6  -3, 6-2, 6-2 ಅಂತರದ ನೇರ ಸೆಟ್‌ಗಳ ಜಯ ಸಾಧಿಸಿದರು.

ಸ್ವಿಯಾಟೆಕ್‌, ಸಕ್ಕರಿ ವಿಜಯ
ವನಿತಾ ವಿಭಾಗದ ನೆಚ್ಚಿನ ಆಟಗಾರ್ತಿ, ನಂ.1 ಖ್ಯಾತಿಯ ಐಗಾ ಸ್ವಿಯಾಟೆಕ್‌ ಕೊಲಂಬಿಯಾದ ಕ್ಯಾಮಿಲಾ ಒಸೋರಿಯೊ ಅವರನ್ನು 6-2, 6-3ರಿಂದ ಹಿಮ್ಮೆಟ್ಟಿಸಿ 3ನೇ ಸುತ್ತಿಗೆ ಏರಿದರು.

ಗ್ರೀಕ್‌ನ 6ನೇ ಶ್ರೇಯಾಂಕದ ಮರಿಯಾ ಸಕ್ಕರಿ 18 ವರ್ಷದ ಎದುರಾಳಿ, ರಷ್ಯಾದ ದಿಯಾನಾ ಶ್ನೆàಡರ್‌ ವಿರುದ್ಧ ಸೋಲಿನ ದವಡೆ ಯಿಂದ ಪಾರಾದರು. ಸಕ್ಕರಿ ಗೆಲುವಿನ ಅಂತರ 3-6, 7-5, 6-3.

ಅಮೆರಿಕದ 18ರ ಹರೆಯದ ಕೊಕೊ ಗಾಫ್ ಬ್ರಿಟನ್‌ನ ಮತ್ತೋರ್ವ ಯುವ ಆಟಗಾರ್ತಿ ಎಮ್ಮಾ ರಾಡುಕಾನು ವಿರುದ್ಧ 6-3, 7-6 (4)ರಿಂದ ಗೆದ್ದು ದ್ವಿತೀಯ ಸುತ್ತು ದಾಟಿದರು. ಇವರಿಬ್ಬರ ಮೊದಲ ಮುಖಾಮುಖಿ ಇದಾಗಿತ್ತು. ಕೊಕೊಗಾಫ್ ಕಳೆದ ಫ್ರೆಂಚ್‌ ಓಪನ್‌ ಫೈನಲಿಸ್ಟ್‌ ಆಗಿದ್ದು, ಅಲ್ಲಿ ಐಗಾ ಸ್ವಿಯಾಟೆಕ್‌ಗೆ ಶರಣಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next