Advertisement

Australian Open; ಎರಡು ಮಕ್ಕಳ ತಾಯಿ ವೋಜ್ನಿಯಾಕಿಗೆ ವೈಲ್ಡ್‌ ಕಾರ್ಡ್‌

11:41 PM Dec 06, 2023 | Team Udayavani |

ಮೆಲ್ಬರ್ನ್: ಡೆನ್ಮಾರ್ಕ್‌ ಆಟಗಾರ್ತಿ, ಎರಡು ಮಕ್ಕಳ ತಾಯಿ ಕ್ಯಾರೋಲಿನ್‌ ವೋಜ್ನಿಯಾಕಿ ಅವರಿಗೆ ವರ್ಷಾರಂಭದ ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಟೆನಿಸ್‌ ಪಂದ್ಯಾ ವಳಿಯ ವೈಲ್ಡ್‌ಕಾರ್ಡ್‌ ನೀಡಲಾಗಿದೆ.

Advertisement

ಇದರೊಂದಿಗೆ 2018ರ ಚಾಂಪಿಯನ್‌ ಆಟಗಾರ್ತಿ ವೋಜ್ನಿಯಾಕಿ 4 ವರ್ಷಗಳ ಬಳಿಕ ಮೊದಲ ಸಲ ಮೆಲ್ಬರ್ನ್ ಕೋರ್ಟ್‌ಗೆ ಮರಳಲಿದ್ದಾರೆ. 33 ವರ್ಷದ ಕ್ಯಾರೋಲಿನ್‌ ವೋಜ್ನಿ ಯಾಕಿ 2020ರ ಆಸ್ಟ್ರೇಲಿಯನ್‌ ಓಪನ್‌ ಬಳಿಕ ಟೆನಿಸ್‌ಗೆ ವಿದಾಯ ಹೇಳಿ ದಾಂಪತ್ಯ ಬದುಕು ಆರಂಭಿಸಿದ್ದರು. ಎರಡು ಮಕ್ಕಳ ತಾಯಿಯಾದ ಬಳಿಕ ಕಳೆದ ಆಗಸ್ಟ್‌ನಲ್ಲಿ ಮಾಂಟ್ರಿಯಲ್‌ ಟೂರ್ನಿ ಮೂಲಕ ಟೆನಿಸ್‌ಗೆ ಮರಳಿದರು.

Advertisement

Udayavani is now on Telegram. Click here to join our channel and stay updated with the latest news.

Next