Advertisement
ನೊವಾಕ್ ಜೊಕೋವಿಕ್ ಭಾರತೀಯ ಮೂಲದ ಅಮೆರಿಕದ ಯುವ ಆಟಗಾರ ನಿಶೇಷ್ ಬಸವಾರೆಡ್ಡಿ ಅವರನ್ನು 4 ಸೆಟ್‌ಗಳ ಸೆಣಸಾಟದಲ್ಲಿ ಮಣಿಸಿದರು. ಜೊಕೋಗೆ ಮೊದಲ ಸೆಟ್‌ನಲ್ಲೇ ಆಘಾತವಿಕ್ಕುವ ಮೂಲಕ ದಕ್ಷಿಣ ಕ್ಯಾಲಿಫೋರ್ನಿಯಾದ ಟೆನಿಸಿಗ ಮಂದಹಾಸ ಬೀರಿದರು. ಆದರೆ ಅನಂತರದ ಮೂರೂ ಸೆಟ್‌ಗಳಲ್ಲಿ ಜೊಕೋ ಮೇಲುಗೈ ಸಾಧಿಸಿದರು. ಗೆಲುವಿನ ಅಂತರ 4-6, 6-3, 6-4, 6-2.
ಕಳೆದ ವರ್ಷ ಮೆಲ್ಬರ್ನ್ನಲ್ಲೇ ಮೊದಲ ಗ್ರ್ಯಾನ್‌ಸ್ಲಾಮ್ ಗೆದ್ದ ಜಾನಿಕ್ ಸಿನ್ನರ್ 7-6 (2), 7-6 (5), 6-1 ಅಂತರದಿಂದ ನಿಕೋಲಸ್ ಜರ್ರಿ ಅವರನ್ನು ಮಣಿಸುವಲ್ಲಿ ಯಶಸ್ವಿಯಾದರು.
4 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳ ಸರದಾರ ಕಾರ್ಲೋಸ್ ಅಲ್ಕರಾಜ್ ಕಜಾಕ್‌ಸ್ಥಾನದ ಅಲೆಕ್ಸಾಂಡರ್ ಶೆವೆÏಂಕೊ ಅವರನ್ನು 6-1, 7-5, 6-1ರಿಂದ ಮಣಿಸಿದರು.
Related Articles
2023ರ ಫೈನಲಿಸ್ಟ್, 11ನೇ ಶ್ರೇಯಾಂಕದ ಸ್ಟೆಫನಸ್ ಸಿಸಿಪಸ್ ಅಮೆರಿಕದ ಅಲೆಕ್ಸ್ ಮೈಕಲ್‌ಸೆನ್ ವಿರುದ್ಧ ಮೊದಲ ಸುತ್ತಿನಲ್ಲೇ ಸೋಲುಂಡು ಹೊರಬಿದ್ದದ್ದು ಈ ಕೂಟದ ಮೊದಲ ಬುಡಮೇಲು ಫಲಿತಾಂಶಕ್ಕೆ ಸಾಕ್ಷಿಯಾಯಿತು. ಮೈಕಲ್‌ಸೆನ್ ಅವರ ಗೆಲುವಿನ ಅಂತರ 7-5, 6-3, 2-6, 6-4.
ಕಳೆದ ವರ್ಷದ ಜಪಾನ್ ಓಪನ್ ಟೂರ್ನಿಯಲ್ಲೂ ಮೈಕಲ್‌ಸೆನ್ ಸಿಸಿಪಸ್‌ಗೆ ಸೋಲುಣಿಸಿದ್ದರು. ಇದರೊಂದಿಗೆ ಗ್ರೀಕ್ ಟೆನಿಸಿಗನ ವಿರುದ್ಧ ಅಜೇಯ ದಾಖಲೆ ಕಾಯ್ದುಕೊಂಡಂತಾಯಿತು.
Advertisement
ಸ್ವಿಯಾಟೆಕ್, ಗಾಫ್ ಮುನ್ನಡೆವಿಶªದ ನಂ.2 ಆಟಗಾರ್ತಿ ಇಗಾ ಸ್ವಿಯಾಟೆಕ್ ಜೆಕ್ ಗಣರಾಜ್ಯದ ಕ್ಯಾಥರಿನಾ ಸಿನಿಯಕೋವಾ ಅವರನ್ನು 6-3, 6-4ರಿಂದ ಪರಾಭವಗೊಳಿಸಿದರು. ಕೊಕೊ ಗಾಫ್ 2020ರ ಚಾಂಪಿಯನ್ ಸೋಫಿಯಾ ಕೆನಿನ್ ಅವರಿಗೆ 6-3, 6-3 ಅಂತರದ ಸೋಲುಣಿಸಿದರು. ನಂ.7 ಆಟಗಾರ್ತಿ ಜೆಸ್ಸಿಕಾ ಪೆಗುಲಾ ಆತಿಥೇಯ ಆಸ್ಟ್ರೇಲಿಯದ ಮಯಾ ಜಾçಂಟ್ ಅವರನ್ನು 6-3, 6-0 ಅಂತರದಿಂದ, ಎಲೆನಾ ಸ್ವಿಟೋಲಿನಾ ರೊಮೇನಿಯಾದ ಸೊರಾನಾ ಕ್ರಿಸ್ಟಿ ಅವರನ್ನು 6-4, 6-4 ಅಂತರದಿಂದ, ಡಯಾನಾ ಶ್ನೆ„ಡರ್ ಇಟಲಿಯ ಎಲಿಸಾಬೆಟ್ಟಾ ಕೋಕ್ಸಿಯಾರೆಟ್ಟೊ ಅವರನ್ನು 7-6 (7-4), 6-4 ಅಂತರದಿಂದ ಮಣಿಸಿ ದ್ವಿತೀಯ ಸುತ್ತು ತಲುಪಿದರು.