ಆಸ್ಟ್ರೇಲಿಯನ್ ಓಪನ್-2025: ಫೆಡರರ್ ದಾಖಲೆ ಮುರಿದ ಜೊಕೋ
Team Udayavani, Jan 15, 2025, 10:59 PM IST
ಮೆಲ್ಬರ್ನ್: ಟೆನಿಸ್ ಬಾಳ್ವೆಯ 430ನೇ ಪಂದ್ಯಕ್ಕೆ ಕಾಲಿಡುವ ಮೂಲಕ ನೊವಾಕ್ ಜೊಕೋವಿಕ್ ನೂತನ ದಾಖಲೆಯೊಂದನ್ನು ಬರೆದರು. ರೋಜರ್ ಫೆಡರರ್ ಅವರ 429 ಪಂದ್ಯಗಳ ಗ್ರ್ಯಾನ್‌ಸ್ಲಾಮ್ ದಾಖಲೆಯನ್ನು ಮೀರಿಸಿ ಮುನ್ನುಗ್ಗಿದರು.
ಬುಧವಾರ ಜೇಮ್ ಫಾರಿಯ ವಿರುದ್ಧದ ಆಸ್ಟ್ರೇಲಿಯನ್ ಓಪನ್ ಪಂದ್ಯವನ್ನು 6-1, 6-7 (4), 6-3, 6-2ರಿಂದ ಜಯಿಸುವ ಮೂಲಕ ಜೊಕೋವಿಕ್ ನೂತನ ಮೈಲುಗಲ್ಲು ನೆಟ್ಟರು. ಅವರೀಗ 3ನೇ ಸುತ್ತು ತಲುಪಿದ್ದಾರೆ.
ರೂಡ್, ಕ್ವಿನ್ವೆನ್ ಪರಾಭವ
ಕಾರ್ಲೋಸ್ ಅಲ್ಕರಾಜ್, ಜೇಕಬ್ ಮೆನ್ಸಿಕ್, ಕೊಕೊ ಗಾಫ್, ನವೋಮಿ ಒಸಾಕಾ ಮೊದಲಾದವರೆಲ್ಲ ಮುನ್ನಡೆ ಸಾಧಿಸಿದ್ದಾರೆ. ಇವರಲ್ಲಿ ಶ್ರೇಯಾಂಕ ರಹಿತ ಯುವ ಆಟಗಾರ ಜೇಕಬ್ ಮೆನ್ಸಿಕ್ ದೊಡ್ಡ ಬೇಟೆಯ ಮೂಲಕ ಕ್ಯಾಸ್ಪರ್ ರೂಡ್ ಅವರನ್ನು ಮನೆಗೆ ಕಳುಹಿಸಿದರು. ಹಾಗೆಯೇ ಕಳೆದ ವರ್ಷದ ರನ್ನರ್ ಅಪ್, ಪ್ಯಾರಿಸ್ ಒಲಿಂಪಿಕ್ಸ್ ಬಂಗಾರ ವಿಜೇತೆ ಜೆಂಗ್ ಕ್ವಿನ್ವೆನ್ ಕೂಡ ಕೂಟದಿಂದ ಹೊರಬಿದ್ದರು.
19 ವರ್ಷದ ಜೆಕ್ ಆಟಗಾರ ಜೇಕಬ್ ಮೆನ್ಸಿಕ್ 6-2, 3-6, 6-1, 6-4 ಅಂತರದಿಂದ ಕ್ಯಾಸ್ಪರ್ ರೂಡ್ ಅವರನ್ನು ಸೋಲಿಸಿ ಅಮೋಘ ಸಾಧನೆಗೈದರು. ಮೆನ್ಸಿಕ್ ಗ್ರ್ಯಾನ್‌ಸ್ಲಾಮ್ ಕೂಟದ 3ನೇ ಸುತ್ತು ತಲುಪಿದ್ದು ಇದೇ ಮೊದಲು. ಕ್ಯಾಸ್ಪರ್ ರೂಡ್ ಈ ಕೂಟದಿಂದ ಹೊರಬಿದ್ದ 4ನೇ ಟಾಪ್-10 ಆಟಗಾರನೆನಿಸಿದರು. ಉಳಿದವರೆಂದರೆ ಸ್ಟೆಫನಸ್ ಸಿಸಿಪಸ್, ಆ್ಯಂಡ್ರೆ ರುಬ್ಲೇವ್ ಮತ್ತು ಗ್ರಿಗರ್ ಡಿಮಿಟ್ರೋವ್. ಕಾರ್ಲೋಸ್ ಅಲ್ಕರಾಜ್ ಜಪಾನ್‌ನ ಯೊಶಿಟೊ ನಿಶಿಯೋಕ ವಿರುದ್ಧ 6-0, 6-1, 6-4ರಿಂದ ಗೆದ್ದು ಬಂದರು.
ವನಿತಾ ವಿಭಾಗ
ನವೋಮಿ ಒಸಾಕಾ 1-6, 6-1, 6-3ರಿಂದ ಜೆಕ್ ಆಟಗಾರ್ತಿ ಕ್ಯಾರೋಲಿನಾ ಮುಖೋವಾ ಅವರನ್ನು ಪರಾಭವ ಗೊಳಿಸಿದರು. ಇವರ 3ನೇ ಸುತ್ತಿನ ಎದುರಾಳಿ ಸ್ವಿಜರ್ಲೆಂಡ್‌ನ ಬೆಲಿಂಡಾ ಬೆನ್ಸಿಕ್. ಚೀನದ ಜೆಂಗ್ ಕ್ವಿನ್ವೆನ್ ಅವರನ್ನು 97ನೇ ರ್‍ಯಾಂಕ್‌ನ ಲಾರಾ ಸಿಗ¾ಂಡ್ 7-6 (7-3), 6-3 ಅಂತರದಿಂದ ಪರಾಭವಗೊಳಿಸಿದರು.
ಕೊಕೊ ಗಾಫ್ ಬ್ರಿಟನ್‌ನ ಜೋಡಿ ಬರೇಜ್ ವಿರುದ್ಧ 6-3, 7-5 ಅಂತರದ ಮೇಲುಗೈ ಸಾಧಿಸಿದರು.
ಯೂಕಿ-ಒಲಿವೆಟ್ಟಿ ಜೋಡಿಗೆ ಆಘಾತ
ಆಸ್ಟ್ರೇಲಿಯನ್ ಓಪನ್‌ನಲ್ಲಿ ಭಾರತದ ಟೆನಿಸಿಗರಿಗೆ ಮೊದಲ ಸುತ್ತಿನ ಸೋಲೇ ಸಂಗಾತಿಯಾದಂತಿದೆ. ಬುಧವಾರದ ಪುರುಷರ ಡಬಲ್ಸ್‌ನಲ್ಲಿ ಫ್ರಾನ್ಸ್‌ನ ಅಲಾºನೊ ಒಲಿವೆಟ್ಟಿ ಜತೆಗೂಡಿ ಆಡಿದ ಯೂಕಿ ಭಾಂಬ್ರಿ, ಆತಿಥೇಯ ಆಸ್ಟ್ರೇಲಿಯದ ಟ್ರಿಸ್ಟನ್ ಸ್ಕೂಲ್‌ಕೇಟ್-ಆ್ಯಡಂ ವಾಲ್ಟನ್ ವಿರುದ್ಧ 2-6, 6-7 (3-7) ಅಂತರದಿಂದ ಪರಾಭವಗೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Test; 35 ವರ್ಷಗಳ ನಂತರ ಪಾಕಿಸ್ಥಾನದಲ್ಲಿ ಗೆಲುವು ಸಾಧಿಸಿದ ವೆಸ್ಟ್ ಇಂಡೀಸ್
ಪಾಕಿಸ್ತಾನದಲ್ಲಿ ಇನ್ನೂ ಮುಗಿಯದ ಮೈದಾನ ಕೆಲಸ: ಅನಿಶ್ಚಿತತೆಯಲ್ಲಿ ಚಾಂಪಿಯನ್ಸ್ ಟ್ರೋಫಿ
ICC ವರ್ಷದ ಟೆಸ್ಟ್ ಕ್ರಿಕೆಟಿಗನಾಗಿ ಬುಮ್ರಾ:ಪ್ರಶಸ್ತಿ ಗೆದ್ದ 6ನೇ ಭಾರತೀಯ ಎಂಬ ಹೆಗ್ಗಳಿಕೆ
Zanai Bhosle: ಆಶಾ ಭೋಂಸ್ಲೆ ಮೊಮ್ಮಗಳ ಜತೆ ಸಿರಾಜ್ ಡೇಟಿಂಗ್?: ಮೌನ ಮುರಿದ ವೇಗಿ
Champions Trophy ಮುನ್ನ ಲಾಹೋರ್, ಕರಾಚಿಯಲ್ಲಿ ತ್ರಿಕೋನ ಏಕದಿನ ಸರಣಿ