Advertisement

ದ್ವಿತೀಯ ಸುತ್ತು ತಲುಪಿದ ಪ್ರಜ್ಞೇಶ್ ಗುಣೇಶ್ವರನ್

10:07 PM Jan 10, 2022 | Team Udayavani |

ಮೆಲ್ಬರ್ನ್: 3ನೇ ಶ್ರೇಯಾಂಕದ ಕೊಲಂಬಿಯನ್‌ ಆಟಗಾರ ಡೇನಿಯಲ್‌ ಇಲಾಹಿ ಗಾಲನ್‌ ಅವರನ್ನು ನೇರ ಸೆಟ್‌ಗಳಲ್ಲಿ ಮಣಿಸಿದ ಭಾರತದ ಪ್ರಜ್ಞೇಶ್ ಗುಣೇಶ್ವರನ್ ಆಸ್ಟ್ರೇಲಿಯನ್‌ ಓಪನ್‌ ಅರ್ಹತಾ ಪಂದ್ಯಾವಳಿಯ ದ್ವಿತೀಯ ಸುತ್ತು ಪ್ರವೇಶಿಸಿದ್ದಾರೆ.

Advertisement

221ನೇ ರ್‍ಯಾಂಕಿಂಗ್‌ನ ಎಡಗೈ ಆಟಗಾರನಾಗಿ ರುವ ಪ್ರಜ್ಞೆàಶ್‌ ಗುಣೇಶ್ವರನ್‌ 6-4, 6-4 ಅಂತರದಿಂದ ಗಾಲನ್‌ಗೆ ಸೋಲುಣಿಸಿದರು.

“ಮೆಲ್ಬರ್ನ್ ಪಾರ್ಕ್‌’ನಲ್ಲಿ ನಡೆದ ಈ ಮುಖಾಮುಖೀ ಒಂದು ಗಂಟೆ, 13 ನಿಮಿಷಗಳ ತನಕ ಸಾಗಿತು. ಭಾರತೀಯನ ಮುಂದಿನ ಎದುರಾಳಿ ಜರ್ಮನಿಯ ಮ್ಯಾಕ್ಸಿ ಮಿಲಿಯನ್‌ ಮಾರ್ಟರರ್‌.

ಇದನ್ನೂ ಓದಿ:ವಾರಾಂತ್ಯ ಕರ್ಫ್ಯೂಗೆ ಧರಿನಾಡು ಸ್ತಬ್ದ 

ಇನ್ನೊಂದು ಪಂದ್ಯದಲ್ಲಿ ಅವರು ಕ್ರೊವೇಶಿಯಾದ ನಿನೊ ಸೆರ್ಡಾರುಸಿಕ್‌ ವಿರುದ್ಧ 3-6, 6-1, 6-4 ಅಂತರದ ಜಯ ಸಾಧಿಸಿದರು.

Advertisement

ರಾಮ್‌ಕುಮಾರ್‌ ರಾಮನಾಥನ್‌, ಯುಕಿ ಭಾಂಬ್ರಿ ಮತ್ತು ಅಂಕಿತಾ ರೈನಾ ಮಂಗಳವಾರ ಕಣಕ್ಕಿಳಿಯಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next