Advertisement

ಆಸ್ಟ್ರೇಲಿಯನ್‌ ಓಪನ್‌: 4ನೇ ಸುತ್ತಿಗೆ ಓಟ ಬೆಳೆಸಿದ ಕೆರ್ಬರ್‌

03:45 AM Jan 21, 2017 | |

ಮೆಲ್ಬರ್ನ್: ಹಾಲಿ ಚಾಂಪಿಯನ್‌, ವಿಶ್ವದ ನಂಬರ್‌ ವನ್‌ ಆಟಗಾರ್ತಿ, ಜರ್ಮನಿಯ ಆ್ಯಂಜೆಲಿಕ್‌ ಕೆರ್ಬರ್‌ “ಆಸ್ಟ್ರೇಲಿಯನ್‌ ಓಪನ್‌’ನಲ್ಲಿ ಗೆಲುವಿನ ಆಟ ಮುಂದುವರಿಸಿದ್ದು, ನಾಲ್ಕನೇ ಸುತ್ತಿಗೆ ಓಟ ಬೆಳೆಸಿದ್ದಾರೆ. ಇವರೊಂದಿಗೆ ವೀನಸ್‌ ವಿಲಿಯಮ್ಸ್‌, ಜೆಲೆನಾ ಜಾನ್ಕೋವಿಕ್‌, ಅನಸ್ತಾಸಿಯಾ ಪಾವುÉಚೆಂಕೋವಾ, ಕೊಕೊ ವಾಂಡೆವೆ ಕೂಡ ಮೂರನೇ ಸುತ್ತನ್ನು ಯಶಸ್ವಿಯಾಗಿ ದಾಟಿದ್ದಾರೆ. ಮುಂದಿನದು 16ನೇ ಸುತ್ತಿನ, ಪ್ರಿ-ಕ್ವಾರ್ಟರ್‌ ಫೈನಲ್‌ ರ್ಯಾಕೆಟ್‌ ಸಮರವಾಗಿದೆ.

Advertisement

ಮೊದಲೆರಡು ಪಂದ್ಯಗಳಲ್ಲಿ ಗೆಲುವಿಗಾಗಿ 3 ಸೆಟ್‌ ತೆಗೆದುಕೊಂಡ ಕೆರ್ಬರ್‌, ಶುಕ್ರವಾರ ನೇರ ಸೆಟ್‌ಗಳಳಿÉ ಜೆಕ್‌ ಆಟಗಾರ್ತಿ ಕ್ರಿಸ್ಟಿನಾ ಪ್ಲಿಸ್ಕೋವಾ ಅವರನ್ನು ಮಣಿಸಿದರು. ಅಂತರ 6-0, 6-4. ಇದು ಕೆರ್ಬರ್‌-ಪ್ಲಿಸ್ಕೋವಾ ನಡುವಿನ ಮೊದಲ ಮುಖಾಮುಖೀಯಾಗಿತ್ತು. ಆದರೆ ಈಕೆಯ ಅವಳಿ ಸೋದರಿ ಕ್ಯಾರೋಲಿನಾ ಪ್ಲಿಸ್ಕೋವಾ ವಿರುದ್ಧ ಕೆರ್ಬರ್‌ ಅತ್ಯಂತ ಮಹತ್ವದ ಗೆಲುವು ಸಾಧಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಅದು ಕಳೆದ ವರ್ಷದ ಯುಎಸ್‌ ಓಪನ್‌ ಫೈನಲ್‌ನಲ್ಲಿ ಒಲಿದಿತ್ತು.
ಕೆರ್ಬರ್‌ ಅವರಿನ್ನು ಅಮೆರಿಕದ ಕೊಕೊ ವಾಂಡೆವೆ ವಿರುದ್ಧ ಸೆಣಸಲಿದ್ದಾರೆ. ವಾಂಡೆವೆ ಕೆನಡಾದ ಯುಗೆನಿ ಬೌಶಾರ್ಡ್‌ ವಿರುದ್ಧ ಭಾರೀ ಹೋರಾಟ ನಡೆಸಿ 6-4, 3-6, 7-5 ಅಂತರದ ಜಯ ಸಾಧಿಸುವಲ್ಲಿ ಯಶಸ್ವಿಯಾದರು.

“ವಾಂಡೆವೆ-ಬೌಶಾರ್ಡ್‌ ಪಂದ್ಯವನ್ನು ನಾನು ಸ್ವಲ್ಪ ವೀಕ್ಷಿಸಿದೆ. ವಾಂಡೆವೆ ಜತೆ ಬಹಳ ಸಮಯದ ಹಿಂದೊಮ್ಮೆ ಆಡಿದ್ದೆ. ರವಿವಾರದ ಸ್ಪರ್ಧೆಯನ್ನು ಎದುರು ನೋಡುತ್ತಿದ್ದೇನೆ’ ಎಂದು ಕೆರ್ಬರ್‌ ಪ್ರತಿಕ್ರಿಯಿಸಿದ್ದಾರೆ.

ವೀನಸ್‌ ಸುಲಭ ಜಯ
ವನಿತಾ ಸಿಂಗಲ್ಸ್‌ 3ನೇ ಸುತ್ತಿನ ಇತರ ಪ್ರಮುಖ ಸ್ಪರ್ಧೆಗಳಲ್ಲಿ ಅಮೆರಿಕದ ವೀನಸ್‌ ವಿಲಿಯಮ್ಸ್‌ ಚೀನದ ಯಿಂಗ್‌ ಯಿಂಗ್‌ ಡುವಾನ್‌ ಅವರನ್ನು 6-1, 6-0 ಅಂತರದಿಂದ; ರಶ್ಯದ ಅನಸ್ತಾಸಿಯಾ ಪಾವುÉಚೆಂಕೋವಾ ಉಕ್ರೇನಿನ ಎಲಿನಾ ಸ್ವಿಟೋಲಿನಾ ಅವರನ್ನು 7-5, 4-6, 6-3 ಅಂತರದಿಂದ; ಸರ್ಬಿಯಾದ ಜೆಲೆನಾ ಜಾನ್ಕೋವಿಕ್‌ ರಶ್ಯದ ಸ್ವೆತ್ಲಾನಾ ಕುಜ್ನೆತ್ಸೋವಾ ಅವರನ್ನು 4-6, 7-5, 7-9 ಅಂತರದಿಂದ; ರೊಮೇನಿಯಾದ ಸೊರಾನಾ ಕಿಸ್ಟಿì ಅಮೆರಿಕದ ಅಲಿಸನ್‌ ರಿಸ್ಕೆ ಅವರನ್ನು 6-2, 7-6 (7-2) ಅಂತರದಿಂದ ಪರಾಭವಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next