Advertisement

ರಸ್ತೇಲಿ ಹಾವಿನ ಜತೆ ತೆವಳಿದ ವ್ಯಕ್ತಿ!

10:53 AM Jun 11, 2017 | Team Udayavani |

ಹೊಸದಿಲ್ಲಿ: ರಸ್ತೆ ದಾಟುತ್ತಿದ್ದ ಎರಡೂವರೆ ಮೀಟರ್‌ ಉದ್ದದ ದೊಡ್ಡ ಸರ್ಪದ ಪಕ್ಕದಲ್ಲೇ ಮಲಗಿದ ವ್ಯಕ್ತಿಯೊಬ್ಬರು, ಅದು ರಸ್ತೆ ದಾಟುವವರೆಗೂ ಅದರೊಂದಿಗೆ ತೆವಳಿ ಅದರ ಪ್ರಾಣ ಉಳಿಸಿದ್ದಾರೆ. ಆಸ್ಟ್ರೇಲಿಯಾದ ಡ್ಯಾಂಪಿಯರ್‌ ಪೋರ್ಟ್‌ ಅಥಾರಿಟಿ ರಸ್ತೆಯಲ್ಲಿ ಈ ಘಟನೆ ನಡೆದಿದೆ. 

Advertisement

ಈ ರಸ್ತೆಯಲ್ಲಿ ವಾಹನಗಳ ಸಂಚಾರ ಅತಿಯಾಗಿತ್ತು. ಇದೇ ವೇಳೆ ಅಳಿವಿನಂಚಿನಲ್ಲಿರುವ “ಪಿಲ್ಬರಾ ರಾಕ್‌ ಓಲಿವ್‌ ಪೈಥಾನ್‌’ ಜಾತಿಯ ಸರ್ಪ ರಸ್ತೆ ದಾಟಲು ಮುಂದಾಯಿತು. ಇದನ್ನು ಗಮನಿಸಿದ ಮ್ಯಾಥಿವ್‌ ಬಗೆರ್‌ ಎಂಬವರು, ಹಾವಿನ ಪಕ್ಕವೇ ಮಲಗಿ, ಅದರೊಂದಿಗೆ ತೆವಳಿದರು. ಹಾವು ರಸ್ತೆ ದಾಟಲು ಐದು ನಿಮಿಷ ಹಿಡಿಯಿತಂತೆ. ಅಲ್ಲಿವರೆಗೂ ಅದರ ಪಕ್ಕವೇ ತೆವಳಿದ ಮ್ಯಾಥಿವ್‌ ವಾಹನಗಳು ಅದರ ಮೇಲೆ ಹರಿಯದಂತೆ ಕಾಪಾಡಿದರು.

ಮ್ಯಾಥಿವ್‌ರ ಈ ಸಾಹಸವನ್ನು ಕೆಮರಾದಲ್ಲಿ  ಸೆರೆಹಿಡಿದ ಟ್ರೇಸಿ ಹೆಮ್‌ಬರ್ಗೆರ್‌ ಎಂಬುವವರು ಫೇಸ್‌ಬುಕ್‌ನಲ್ಲಿ ಫೋಟೋ ಸಹಿತ ಮ್ಯಾಥಿವ್‌ರ ಸಾಹಸವನ್ನು ವಿವರಿಸಿದ್ದಾರೆ. ಇದೀಗ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next