Advertisement

ಆಸೀಸ್‌ ಕಾಡ್ಗಿಚ್ಚಿನಿಂದ ಐತಿಹಾಸಿಕ “ಡೈನೋಸಾರ್‌ ಟ್ರೀ’ರಕ್ಷಣೆ

09:58 AM Jan 17, 2020 | sudhir |

ಮೆಲ್ಬರ್ನ್: ಆಸ್ಟ್ರೇಲಿಯಾದ ಅಗ್ನಿಶಾಮಕ ದಳದ ಸಿಬ್ಬಂದಿ ಕೈಗೊಂಡ ರಹಸ್ಯ ಕಾರ್ಯಾಚರಣೆಯಿಂದಾಗಿ ಅಳಿವನಂಚಿನಲ್ಲಿರುವ, ಆಸ್ಟ್ರೇಲಿಯಾದಲ್ಲಿ ಮಾತ್ರ ಕಾಣಸಿಗುವ, ಇತಿಹಾಸಪೂರ್ವ ವೃಕ್ಷವಾದ “ವೊಲೆಮಿ ಪೈನ್ಸ್‌’ (ಡೈನೋಸಾರ್‌ ಟ್ರೀ)ಎಂಬ ಜಾತಿಯ 200 ಮರಗಳನ್ನು ಸಂರಕ್ಷಿಸಲಾಗಿದೆ.

Advertisement

ಸಿಡ್ನಿಯ ವಿಶ್ವಪಾರಂಪರಿಕ ತಾಣವಾದ ನೈರುತ್ಯ ಭಾಗದಲ್ಲಿರುವ ಬ್ಲೂ ಮೌಂಟೇನ್ಸ್‌ ಎಂಬ ಪರ್ವತ ಶ್ರೇಣಿಗಳಲ್ಲಿರುವ ಈ ಮರಗಳು ಇರುವ ಜಾಗದ ಸುತ್ತಲಿನ ಭೂಮಿಯನ್ನು ಉಳುಮೆ ಮಾಡಿ ವ್ಯವಸಾಯ ಆರಂಭಿಸುವ ಮೂಲಕ ಆ ಜಾಗದಲ್ಲಿ ತೇವಾಂಶ ಹೆಚ್ಚಾಗಿ ಬೆಂಕಿ ಹಬ್ಬುವ ಅವಕಾಶ ಕಡಿಮೆ ಮಾಡಿದ್ದ ಅಗ್ನಿಶಾಮಕ ಸಿಬ್ಬಂದಿ, ಮರಗಳಿಗೆ ಬೆಂಕಿ ಹಬ್ಬುವ ಪ್ರಮೇಯವನ್ನು ಇಲ್ಲವಾಗಿಸಿದ್ದರೂ, ಆದರೂ, ಮುನ್ನೆಚ್ಚರಿಕೆ ಕ್ರಮವಾಗಿ ಮರಗಳ ಮೇಲೆ ಹೆಲಿಕಾಪ್ಟರ್‌ ಟ್ಯಾಂಕರ್‌ಗಳನ್ನು ನಿಯೋಜಿಸಲಾಗಿತ್ತು. ಇದರಿಂದ ಆ ಅಪರೂಪದ ಮರಗಳನ್ನು ಸಂರಕ್ಷಿಸಲಾಗಿದೆ.

ಪ್ರವಾಹ ಭೀತಿ: ಪೂರ್ವ ಆಸ್ಟ್ರೇಲಿಯಾದಲ್ಲಿ ಹಠಾತ್ತಾಗಿ ಸುರಿದ ಮಳೆಯಿಂದಾಗಿ ಆ ಭಾಗದಲ್ಲಿ ಹರಡಿದ್ದ ಕಾಡ್ಗಿಚ್ಚು ನಂದಿ ಹೋಗುತ್ತಿದೆ. ಆದರೆ, ಈ ಮುಸಲಧಾರೆ ಮಳೆಯಿಂದ ದಿಢೀರ್‌ ಪ್ರವಾಹ ಉಂಟಾಗುವ ಭೀತಿ ಆವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next