Advertisement

ಎನ್‌ಇಪಿಯಿಂದ ಭಾರತಕ್ಕೆ ಅನುಕೂಲ

09:05 PM Mar 01, 2023 | Team Udayavani |

ನವದೆಹಲಿ: ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯ ಶಿಕ್ಷಣ ಸಚಿವ ಜೇಸನ್‌ ಕ್ಲೇರ್‌, ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಭಾರತದ ಸ್ವರೂಪ ಬದಲಾಗಲಿದೆ. ಇದರಿಂದ ಭಾರತ ವಿಶ್ವದ ಬಲಿಷ್ಠ ಆರ್ಥಿಕತೆ ಹೊಂದಿರುವ ದೇಶಗಳಲ್ಲಿ ಒಂದಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಮಾ.3ರ ವರೆಗೆ ಭಾರತ ಪ್ರವಾಸದಲ್ಲಿ ಇರುವ ಅವರು ಶಿಕ್ಷಣ ಕ್ಷೇತ್ರದ ತಜ್ಞರ ನಿಯೋಗದ ನೇತೃತ್ವವನ್ನೂ ವಹಿಸಿದ್ದಾರೆ. ಹೊಸ ಶಿಕ್ಷಣ ನೀತಿ ಯುವ ಜನಾಂಗವನ್ನು ಕೌಶಲ್ಯಪೂರ್ಣವನ್ನಾಗಿಸಲಿದೆ.

ಇದು ಭರತಖಂಡವನ್ನು ಜಾಗತಿಕ ಆರ್ಥಿಕ ಸೂಪರ್‌ಪವರ್‌ ಆಗಿಸಲಿದೆ’ ಎಂದು ಕ್ಲೇರ್‌ ಹೇಳಿದ್ದಾರೆ.

ಗುರುವಾರ ಭಾರತ, ಆಸ್ಟ್ರೇಲಿಯಗಳು ಎರಡೂ ದೇಶಗಳ ವಿಶ್ವವಿದ್ಯಾಲಯಗಳ ಪದವಿಗಳಿಗೆ ಪರಸ್ಪರ ಮಾನ್ಯತೆ ನೀಡುವ ಒಪ್ಪಂದಕ್ಕೆ ಸಹಿ ಹಾಕಲಿವೆ.

Advertisement

Udayavani is now on Telegram. Click here to join our channel and stay updated with the latest news.

Next