Advertisement
ಆಸ್ಟ್ರೇಲಿಯ ಕ್ರಿಕೆಟಿಗರನ್ನು ಸುರಕ್ಷಿತ ವಾಗಿ ತಾಯ್ನಾಡಿಗೆ ಕಳುಹಿಸಿಕೊಡುವುದು ಬಿಸಿಸಿಐ ಮುಂದಿರುವ ದೊಡ್ಡ ಸಮಸ್ಯೆ ಯಾಗಿತ್ತು. ಆದರೆ ಬುಧವಾರವೇ ವಿಶೇಷ ವಿಮಾನದ ಮೂಲಕ ಆಸೀಸ್ ತಂಡವನ್ನು ಮಾಲ್ಡೀವ್ಸ್‌ಗೆ ಕಳುಹಿಸಲಾಗಿದೆ. ಇಲ್ಲಿ ತಾತ್ಕಾಲಿಕ ವಸತಿ ಕಲ್ಪಿಸಿ ಮೇ 15ರ ಬಳಿಕ ಅಲ್ಲಿಂದಲೇ ಆಸ್ಟ್ರೇಲಿಯಕ್ಕೆ ಕಳುಹಿಸಲು ಬಿಸಿಸಿಐ ನಿರ್ಧರಿಸಿದೆ. ಮೇ 15ರ ತನಕ ಭಾರತದ ವಿಮಾನಗಳಿಗೆ ಆಸ್ಟ್ರೇಲಿಯ ನಿರ್ಬಂಧ ವಿಧಿಸಿದೆ.
Related Articles
Advertisement
ನ್ಯೂಜಿಲ್ಯಾಂಡ್ ಕ್ರಿಕೆಟಿಗರೆಲ್ಲ.ಹೊಟೇಲ್ ಐಸೊಲೇಶನ್‌ನಲ್ಲಿದ್ದಾರೆ. ಕೇನ್ ವಿಲಿಯಮ್ಸನ್ ಮತ್ತಿತರ ಸದಸ್ಯರು ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲು ಭಾರತದಿಂದಲೇ ಲಂಡನ್‌ಗೆ ತೆರಳುವುದು ನಿಗದಿಯಾಗಿದೆ.
ಇಂಗ್ಲೆಂಡ್ ಕ್ರಿಕೆಟಿಗರು ಲಂಡನ್‌ಗೆ :
ಹೊಸದಿಲ್ಲಿ: ಐಪಿಎಲ್‌ನಲ್ಲಿದ್ದ ಇಂಗ್ಲೆಂಡ್ ಕ್ರಿಕೆಟಿಗರ ಪ್ರಯಾಣಕ್ಕೆ ಯಾವುದೇ ತೊಂದರೆ ಆಗಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರು ಮಂಗಳ ವಾರ ರಾತ್ರಿಯೇ ಅಹ್ಮದಾಬಾದ್‌ನಿಂದ ಹೊಸದಿಲ್ಲಿಗೆ ಪ್ರಯಾಣಿಸಿದ್ದಾರೆ. ಅಲ್ಲಿ ರುವ ತಮ್ಮ ದೇಶದ ಕ್ರಿಕೆಟಿಗರೊಂದಿಗೆ ತವರಿಗೆ ವಿಮಾನವನ್ನು ಏರಿ ಲಂಡನ್‌ಗೆ ಬಂದಿಳಿದಿದ್ದಾರೆ.
ಇವರೆಂದರೆ ಜಾನಿ ಬೇರ್‌ಸ್ಟೊ, ಜಾಸ್ ಬಟ್ಲರ್, ಸ್ಯಾಮ್ ಬಿಲ್ಲಿಂಗ್ಸ್, ಕ್ರಿಸ್ ವೋಕ್ಸ್, ಮೊಯಿನ್ ಅಲಿ, ಜಾಸನ್ ರಾಯ್ ಮತ್ತು ಕರನ್ ಬ್ರದರ್. ಲಂಡನ್ ತಲುಪಿದ ಬಳಿಕ ಇವರೆಲ್ಲ ಸರಕಾರ ಸೂಚಿಸಿದ ಹೊಟೇಲ್‌ಗಳಲ್ಲಿ ಕಠಿನ ಕ್ವಾರಂಟೈನ್‌ಗೆ
ಒಳಗಾಗಬೇಕಿದೆ. ಉಳಿದ ಕ್ರಿಕೆಟಿಗರಾದ ಇಯಾನ್ ಮಾರ್ಗನ್, ಡೇವಿಡ್ ಮಲಾನ್ ಮತ್ತು ಕ್ರಿಸ್ ಜೋರ್ಡನ್ ಮುಂದಿನ 48 ಗಂಟೆಗಳಲ್ಲಿ ಲಂಡನ್‌ಗೆ ಪ್ರಯಾಣಿಸಲಿದ್ದಾರೆ ಎಂದು ತಿಳಿದು ಬಂದಿದೆ.