Advertisement

ಮ್ಯಾಕ್ಸ್‌ವೆಲ್‌ ಚಂಡಮಾರುತ; ಎಡವಿದ ಭಾರತ

12:30 AM Feb 28, 2019 | |

ಬೆಂಗಳೂರು: ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರ ಬ್ಯಾಟಿಂಗ್‌ ಚಂಡಮಾರುತಕ್ಕೆ ತತ್ತರಿಸಿದ ಭಾರತ ದ್ವಿತೀಯ ಟಿ20 ಪಂದ್ಯದಲ್ಲೂ ಸೋತು ಆಸ್ಟ್ರೇಲಿಯದ ಕೈಯಲ್ಲಿ 0-2 ವೈಟ್‌ವಾಶ್‌ ಅವಮಾನಕ್ಕೆ ಸಿಲುಕಿತು.

Advertisement

ಬುಧವಾರ ಇಲ್ಲಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ನಡೆದ ಮುಖಾಮುಖೀಯಲ್ಲಿ ಮ್ಯಾಕ್ಸ್‌ವೆಲ್‌ ಅಮೋಘ ಶತಕ ಬಾರಿಸಿ ಆಸ್ಟ್ರೇಲಿಯಕ್ಕೆ 7 ವಿಕೆಟ್‌ಗಳ ಅಮೋಘ ಗೆಲುವನ್ನು ತಂದಿತ್ತರು. ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 4 ವಿಕೆಟಿಗೆ 190 ರನ್‌ ಪೇರಿಸಿದರೆ, ಆಸ್ಟ್ರೇಲಿಯ 19.4 ಓವರ್‌ಗಳಲ್ಲಿ ಮೂರೇ ವಿಕೆಟಿಗೆ 194 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು.

ಆಸೀಸ್‌ ಗೆಲುವಿನ ವೇಳೆ ಮ್ಯಾಕ್ಸ್‌ವೆಲ್‌ 113 ರನ್‌ ಬಾರಿಸಿ ಅಜೇಯರಾಗಿದ್ದರು. 55 ಎಸೆತ ಎದುರಿಸಿದ ಮ್ಯಾಕ್ಸ್‌ವೆಲ್‌ 9 ಸಿಕ್ಸರ್‌, 7 ಬೌಂಡರಿ ಬಾರಿಸಿ ಭಾರತದ ಬೌಲಿಂಗನ್ನು ಧೂಳೀಪಟಗೊಳಿಸಿದರು. ಇದು 59ನೇ ಪಂದ್ಯದಲ್ಲಿ ಮ್ಯಾಕ್ಸ್‌ವೆಲ್‌ ಬಾರಿಸಿದ 3ನೇ ಶತಕ. ಹ್ಯಾಂಡ್ಸ್‌ಕಾಂ 20 ರನ್‌ ಮಾಡಿ ಅಜೇಯರಾಗಿ ಉಳಿದರು. ಇವರಿಬ್ಬರು 8.3 ಓವರ್‌ಗಳಲ್ಲಿ ಮುರಿಯದ 4ನೇ ವಿಕೆಟಿಗೆ 99 ರನ್‌ ಪೇರಿಸಿದರು. ಆರಂಭಕಾರ ಡಿ’ಆರ್ಸಿ ಶಾರ್ಟ್‌ ಬ್ಯಾಟಿನಿಂದ 40 ರನ್‌ ಹರಿದು ಬಂತು (28 ಎಸೆತ, 6 ಬೌಂಡರಿ).

ಭಾರತ ತಂಡದಲ್ಲಿ 3 ಬದಲಾವಣೆ
ದ್ವಿತೀಯ ಟಿ20 ಪಂದ್ಯಕ್ಕಾಗಿ ಭಾರತ ತನ್ನ ತಂಡದಲ್ಲಿ 3 ಬದಲಾವಣೆ ಮಾಡಿಕೊಂಡಿತು. ಆರಂಭಕಾರ ರೋಹಿತ್‌ ಶರ್ಮ, ಕಳೆದ ಪಂದ್ಯದಲ್ಲಿ ದುಬಾರಿಯಾದ ಉಮೇಶ್‌ ಯಾದವ್‌ ಮತ್ತು ಕಳೆದ ಪಂದ್ಯದಲ್ಲಷ್ಟೇ ಪದಾರ್ಪಣೆ ಮಾಡಿದ ಮಾಯಾಂಕ್‌ ಮಾರ್ಕಂಡೆ ಅವರನ್ನು ಕೈಬಿಟ್ಟು ಶಿಖರ್‌ ಧವನ್‌, ವಿಜಯ್‌ ಶಂಕರ್‌ ಮತ್ತು ಸಿದ್ಧಾರ್ಥ್ ಕೌಲ್‌ ಅವರಿಗೆ ಅವಕಾಶ ನೀಡಿತು.

ಆಸ್ಟ್ರೇಲಿಯ ತನ್ನ ತಂಡದಲ್ಲಿ ಯಾವುದೇ ಪರಿವರ್ತನೆ ಮಾಡಿಕೊಳ್ಳಲಿಲ್ಲ. ವಿಶಾಖಪಟ್ಟಣದ ವಿಜಯೀ ತಂಡವನ್ನೇ ಕಣಕ್ಕಿಳಿಸಿತು.

Advertisement

ಸ್ಕೋರ್‌ಪಟ್ಟಿ
ಭಾರತ

ಕೆ.ಎಲ್‌. ರಾಹುಲ್‌    ಸಿ ರಿಚರ್ಡ್‌ಸನ್‌ ಬಿ ನೈಲ್‌    47
ಶಿಖರ್‌ ಧವನ್‌    ಸಿ ಸ್ಟೋಯಿನಿಸ್‌ ಬಿ ಬೆಹೆÅಂಡಾಫ್ì    14
ವಿರಾಟ್‌ ಕೊಹ್ಲಿ    ಔಟಾಗದೆ    72
ರಿಷಬ್‌ ಪಂತ್‌    ಸಿ ರಿಚರ್ಡ್‌ಸನ್‌ ಬಿ ಶಾರ್ಟ್‌    1
ಎಂ.ಎಸ್‌. ಧೋನಿ    ಸಿ ಫಿಂಚ್‌ ಬಿ ಕಮಿನ್ಸ್‌    40
ದಿನೇಶ್‌ ಕಾರ್ತಿಕ್‌    ಔಟಾಗದೆ    8
ಇತರ        8
ಒಟ್ಟು  (20 ಓವರ್‌ಗಳಲ್ಲಿ 4 ವಿಕೆಟಿಗೆ)        190
ವಿಕೆಟ್‌ ಪತನ: 1-61, 2-70, 3-74, 4-174.
ಬೌಲಿಂಗ್‌:
ಜಾಸನ್‌ ಬೆಹೆÅಂಡಾಫ್ì        3-0-17-1
ಜೇ ರಿಚರ್ಡ್‌ಸನ್‌        4-0-45-0
ನಥನ್‌ ಕೋಲ್ಟರ್‌ ನೈಲ್‌        3-0-33-1
ಪ್ಯಾಟ್‌ ಕಮಿನ್ಸ್‌        3-0-40-1
ಆ್ಯಡಂ ಝಂಪ        4-0-23-0
ಡಿ’ಆರ್ಸಿ ಶಾರ್ಟ್‌        3-0-29-1

ಆಸ್ಟ್ರೇಲಿಯ
ಡಿ’ಆರ್ಸಿ ಶಾರ್ಟ್‌    ಸಿ ರಾಹುಲ್‌ ಬಿ ಶಂಕರ್‌    40
ಮಾರ್ಕಸ್‌ ಸ್ಟೋಯಿನಿಸ್‌    ಬಿ ಕೌಲ್‌    7
ಆರನ್‌ ಫಿಂಚ್‌    ಸಿ ಧವನ್‌ ಬಿ ಶಂಕರ್‌    8
ಗ್ಲೆನ್‌ ಮ್ಯಾಕ್ಸ್‌ವೆಲ್‌    ಔಟಾಗದೆ    113
ಪೀಟರ್‌ ಹ್ಯಾಂಡ್ಸ್‌ಕಾಂಬ್‌    ಔಟಾಗದೆ    20
ಇತರ        6
ಒಟ್ಟು  (19.4 ಓವರ್‌ಗಳಲ್ಲಿ 3 ವಿಕೆಟಿಗೆ)        194
ವಿಕೆಟ್‌ ಪತನ: 1-13, 2-22, 3-95.
ಬೌಲಿಂಗ್‌:
ವಿಜಯ್‌ ಶಂಕರ್‌        4-0-38-2
ಜಸ್‌ಪ್ರೀತ್‌ ಬುಮ್ರಾ        4-0-30-0
ಸಿದ್ಧಾರ್ಥ್ ಕೌಲ್‌        3.4-0-45-1
ಯಜುವೇಂದ್ರ ಚಾಹಲ್‌        4-0-47-0
ಕೃಣಾಲ್‌ ಪಾಂಡ್ಯ        4-0-33-0
ಪಂದ್ಯಶ್ರೇಷ್ಠ: ಗ್ಲೆನ್‌ ಮ್ಯಾಕ್ಸ್‌ವೆಲ್‌

Advertisement

Udayavani is now on Telegram. Click here to join our channel and stay updated with the latest news.

Next