Advertisement

ಬಸ್ಸನ್ನೇ ಮನೆ ಮಾಡಿ ಸುತ್ತಾಟ

05:02 PM Oct 04, 2021 | Team Udayavani |

ವಾಷಿಂಗ್ಟನ್‌: ಕೊರೊನಾ ಬಂದಾಗಿನಿಂದ ಮಕ್ಕಳೆಲ್ಲ ಮನೆಯೊಳಗೇ ಕುಳಿತು ಹೊರಗಿನ ಪ್ರಪಂಚವನ್ನೇ ಮರೆತಿದ್ದಾರೆ. ಆದರೆ ಈ ದಂಪತಿ ತಮ್ಮ ಮಕ್ಕಳಿಗೆ ಶಾಲೆಯ ಬಸ್ಸಿನಲ್ಲೇ ಬರೋಬ್ಬರಿ 16 ರಾಜ್ಯ ಸುತ್ತಿಸಿದ್ದಾರೆ!

Advertisement

ಅಮೆರಿಕದ ಎಲಿಜಬೆತ್‌ ಹಾಗೂ ಸ್ಪೈಕ್‌ ದಂಪತಿ ಏನಾದರೂ ಸಾಹಸ ಮಾಡಬೇಕೆಂಬ ನಿಟ್ಟಿನಲ್ಲಿ 2020ರ ಜೂನ್‌ ನಲ್ಲಿ 3,500 ಡಾಲರ್‌ಗೆ ಶಾಲಾ ಬಸ್ಸೊಂದನ್ನು ಖರೀದಿಸಿದರು. 15,000 ಡಾಲರ್‌ ಖರ್ಚು ಮಾಡಿ, ಆ ಬಸ್ಸನ್ನು ಮನೆಯಂತೆ ವಿನ್ಯಾಸಗೊಳಿಸಿದರು.

ಬೆಡ್‌ರೂಂ, ಬಾತ್‌ ರೂಂ, ಅಡುಗೆ ಮನೆ ಎಲ್ಲವನ್ನೂ ಅದರೊಳಗೆ ನಿರ್ಮಿಸಿದರು. ಬಸ್ಸು ಮನೆ ಯಾದ ನಂತರ ಅದರಲ್ಲಿ ಪೂರ್ತಿ ಕುಟುಂಬ ಅಮೆರಿಕದ 16 ಪ್ರಾಂತ್ಯಗಳನ್ನು ಸುತ್ತಿದೆ. ಮಕ್ಕಳು ಅದೇ ಬಸ್ಸಿನೊಳಗೆ ಕುಳಿತು, ಪ್ರಯಾಣಿ ಸುತ್ತಲೇ ಆನ್‌ಲೈನ್‌ ತರಗತಿಯನ್ನೂ ಅಟೆಂಡ್‌ ಮಾಡಿದ್ದಾರೆ.

ಎಲಿಜಬೆತ್‌ ದಂಪತಿ ಬಸ್ಸಿನಿಂದಲೇ ಆಫೀಸಿನ ಕೆಲಸವನ್ನೂ ಮಾಡಿದ್ದಾರೆ. ಈ ದಂಪತಿ ‘chasingthecoastline’ ಹೆಸರಿನ ಇನ್‌ ಸ್ಟಾಗ್ರಾಂ ಖಾತೆ ಮಾಡಿಕೊಂಡಿದ್ದು, ಅದರಲ್ಲಿ ತಮ್ಮ ಬಸ್‌ ಮನೆ ಹಾಗೂ ಪ್ರಯಾಣದ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next