Advertisement

ಭಾರತದ ವನಿತೆಯರಿಗೆ ವೀರೋಚಿತ ಸೋಲು ; ಟಿ20 ವಿಶ್ವಕಪ್‌ ಕನಸು ಭಗ್ನ

10:18 PM Feb 23, 2023 | Team Udayavani |

ಕೇಪ್‌ ಟೌನ್‌ :ಇಲ್ಲಿ ಗುರುವಾರ ನಡೆದ ವನಿತಾ ಟಿ20 ವಿಶ್ವಕಪ್‌ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಿದ ಆಸ್ಟ್ರೇಲಿಯ ತಂಡ ಭಾರತ ತಂಡವನ್ನು 5 ರನ್‌ಗಳಿಂದ ಸೋಲಿಸಿ ಫೈನಲ್ ಗೆ ಲಗ್ಗೆ ಇಟ್ಟಿದೆ.

Advertisement

ತಾಕತ್ತು ತೋರಿದ ಕಾಂಗರೂ ಪಡೆ ಸೆಮಿಫೈನಲ್‌ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 4 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿ ಭರ್ಜರಿ ಮೊತ್ತವನ್ನು ಭಾರತ ತಂಡದ ಮುಂದಿಟ್ಟಿತು. ಮೂನಿ 54, ಲ್ಯಾನಿಂಗ್ 49, ಹೀಲಿ 25 ರನ್ ಮತ್ತು ಗಾರ್ಡ್ನರ್ 31 ರನ್ ಕೊಡುಗೆ ಸಲ್ಲಿಸಿದರು. ಭಾರತದ ಪರ ಶಿಖಾ ಪಾಂಡೆ 2, ದೀಪ್ತಿ ಶರ್ಮಾ 1 ವಿಕೆಟ್ ಪಡೆದರು.

ಗುರಿ ಬೆನ್ನಟ್ಟಿದ ಭಾರತ ತಂಡ 28 ರನ್ ಆಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆ ಬಳಿಕ ಗೆಲುವಿನ ಭರವಸೆಯ ಆಟವಾಡಿದ ಜೆಮಿಮಾ ರೋಡ್ರಿಗಸ್ 43 ರನ್ ಗಳಿಸಿ ಔಟಾದರು. ಜವಾಬ್ದಾರಿಯುತ ಆಟವಾಡಿದ ನಾಯಕಿ ಹರ್ಮನ್‌ಪ್ರೀತ್ ಕೌರ್ 52 ರನ್ ಗಳಿಸಿದ್ದ ವೇಳೆ ರನ್ ಔಟ್ ಆದರು. ರಿಚಾ ಘೋಷ್ 14 ರನ್, ದೀಪ್ತಿ ಶರ್ಮ ಔಟಾಗದೆ 20 ರನ್ ಗಳಿಸಿದರು. 8 ವಿಕೆಟ್ ನಷ್ಟಕ್ಕೆ 167ರನ್ ಗಳನ್ನು ಮಾತ್ರ ಗಳಿಸಿ ವೀರೋಚಿತ ಸೋಲಿಗೆ ಶರಣಾಯಿತು.

19 ಓವರ್‌ಗಳ ನಂತರ ಸ್ಕೋರ್ 7 ವಿಕೆಟ್ ಗೆ 157 ರನ್ ಆಗಿತ್ತು ಆದರೆ ಕೊನೆಯ ಓವರ್ ನಲ್ಲಿ 16 ರನ್ ಗಳಿಸುವ ಸವಾಲು ಎದುರಾಗಿತ್ತು. ವನಿತೆಯರು ವೀರೋಚಿತ ಆಟವನ್ನು ಆಡಿದರು. ರೋಚಕ ಪಂದ್ಯ ಇದಾಗಿತ್ತು. ಆಶ್ಲೀ ಗಾರ್ಡ್ನರ್ 2 ವಿಕೆಟ್ ಪಡೆದರು . ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next