Advertisement
ರವಿವಾರದ ಆಟದಲ್ಲಿ ಭಾರತ ಯಾವ ಹೋರಾಟವನ್ನೂ ತೋರ್ಪಡಿಸಲಿಲ್ಲ. 5ಕ್ಕೆ 128 ರನ್ ಮಾಡಿದಲ್ಲಿಂದ ದಿನದಾಟ ಮುಂದುವರಿಸಿ 175ಕ್ಕೆ ಸರ್ವಪತನ ಕಂಡಿತು. ಇನ್ನಿಂಗ್ಸ್ ಸೋಲು ತಪ್ಪಿತು. ದ್ವಿತೀಯ ಇನ್ನಿಂಗ್ಸ್ ನಲ್ಲಿ ಭಾರತ ಎದುರಿಸಿದ್ದು 36.5 ಓವರ್ ಮಾತ್ರ. ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ 5 ವಿಕೆಟ್ ಬೇಟೆಯಾಡಿದರು. ಸ್ಕಾಟ್ ಬೋಲ್ಯಾಂಡ್ 3, ಮಿಚೆಲ್ ಸ್ಟಾರ್ಕ್ 2 ವಿಕೆಟ್ ಉರುಳಿಸಿದರು. ಸ್ಪಿನ್ನರ್ ನಥನ್ ಲಿಯಾನ್‌ಗೆ ಬೌಲಿಂಗ್ ಅವಕಾಶವೇ ಸಿಗಲಿಲ್ಲ.
Related Articles
ಪರ್ತ್ ಟೆಸ್ಟ್ ಪಂದ್ಯವನ್ನು 295 ರನ್ನುಗಳ ಭಾರೀ ಅಂತರದಿಂದ ಜಯಿಸಿದ್ದ ಭಾರತ, ಅಡಿಲೇಡ್‌ನಲ್ಲಿ ಒಟ್ಟು ನಿಭಾಯಿಸಿದ್ದು ಬರೀ 81 ಓವರ್. ಇದು ಒಂದು ದಿನದಾಟದ ಓವರ್‌ಗಳಿಗಿಂತಲೂ (90) ಕಡಿಮೆ. ಅರ್ಥಾತ್, ಟೀಮ್ ಇಂಡಿಯಾ ಒಂದೇ ದಿನದಲ್ಲಿ 2 ಸಲ ಆಲೌಟ್ ಆದಂತಾಯಿತು. ಬ್ಯಾಟಿಂಗ್ ವೈಫಲ್ಯವೇ ಸೋಲಿಗೆ ಕಾರಣ ಎಂಬುದನ್ನು ಇದು ಸಾಬೀತುಪಡಿಸುತ್ತದೆ.
Advertisement
ನಾಯಕ ರೋಹಿತ್ ಶರ್ಮ, ಶುಭಮನ್ ಗಿಲ್, ಆರ್. ಅಶ್ವಿನ್ ಅವರ ಸೇರ್ಪಡೆಯಿಂದ ತಂಡ ಬಲಿಷ್ಠವಾಗಿ ಕಂಡರೂ ಇದು ಕಾಗದದಲ್ಲಿ ಮಾತ್ರ ಎಂಬುದು ರುಜುವಾತಾಯಿತು. ಭಾರತದ ಬ್ಯಾಟಿಂಗ್ ಬರಗಾಲದಿಂದಾಗಿ ಈ ಪಂದ್ಯ ಕೇವಲ ಎರಡೂವರೆ ದಿನದಲ್ಲೇ ಮುಗಿಯಿತು. ಪಂದ್ಯ 3ನೇ ದಿನದಾಟದ ರಾತ್ರಿಗೆ ವಿಸ್ತರಿಸಲೇ ಇಲ್ಲ.
ಎಕ್ಸ್ ಟ್ರಾ ಇನ್ನಿಂಗ್ಸ್* ಆಸ್ಟ್ರೇಲಿಯ 13 ಹಗಲು-ರಾತ್ರಿ ಟೆಸ್ಟ್ ಪಂದ್ಯಗಳಲ್ಲಿ 12ನೇ ಗೆಲುವು ಸಾಧಿಸಿತು. ಒಂದರಲ್ಲಿ ಸೋತಿದೆ. ಅಡಿಲೇಡ್‌ನಲ್ಲಿ ಆಡಿದ ಎಲ್ಲ 8 ಡೇ-ನೈಟ್ ಟೆಸ್ಟ್‌ಗಳಲ್ಲೂ ಆಸೀಸ್ ಜಯ ಸಾಧಿಸಿದೆ. * ರೋಹಿತ್ ಶರ್ಮ ಸತತ 4 ಟೆಸ್ಟ್ ಪಂದ್ಯಗಳನ್ನು ಸೋತ ಭಾರತದ 5ನೇ ನಾಯಕ. ಉಳಿದವರೆಂದರೆ ದತ್ತುರಾವ್ ಗಾಯಕ್ವಾಡ್ (1959), ಎಂ.ಎಸ್. ಧೋನಿ (2 ಸಲ, 2011 ಮತ್ತು 2014), ವಿರಾಟ್ ಕೊಹ್ಲಿ (2020-21). ಮನ್ಸೂರ್ ಅಲಿಖಾನ್ ಪಟೌಡಿ ಸತತ 6 ಟೆಸ್ಟ್‌ಗಳಲ್ಲಿ ಸೋತದ್ದು ಭಾರತೀಯ ನಾಯಕರ ದಾಖಲೆ (1967-68). ಸಚಿನ್ ತೆಂಡುಲ್ಕರ್ 2ನೇ ಸ್ಥಾನದಲ್ಲಿದ್ದಾರೆ (ಸತತ 5 ಸೋಲು, 1999-2000). * ಸ್ಪಷ್ಟ ಫಲಿತಾಂಶ ಕಂಡ, ಅತೀ ಕಡಿಮೆ ಎಸೆತಗಳಲ್ಲಿ ಮುಗಿದ ಟೆಸ್ಟ್ ಗಳ ಯಾದಿಯಲ್ಲಿ ಈ ಪಂದ್ಯ 4ನೇ ಸ್ಥಾನದಲ್ಲಿ ಕಾಣಿಸಿಕೊಂಡಿತು (1,031 ಎಸೆತ). ಇದು ಭಾರತ ಪಾಲ್ಗೊಂಡ ಅತೀ ಕಡಿಮೆ ಎಸೆತಗಳ ಟೆಸ್ಟ್ ಕೂಡ ಹೌದು. 1932ರ ಆಸ್ಟ್ರೇಲಿಯ-ದಕ್ಷಿಣ ಆಫ್ರಿಕಾ ನಡುವಿನ ಮೆಲ್ಬರ್ನ್ ಟೆಸ್ಟ್ 658 ಎಸೆತಗಳಲ್ಲಿ ಮುಗಿದದ್ದು ದಾಖಲೆ. * ನಿತೀಶ್ ಕುಮಾರ್ ರೆಡ್ಡಿ ಎರಡೂ ಇನ್ನಿಂಗ್ಸ್‌ಗಳಲ್ಲಿ ಅತೀ ಹೆಚ್ಚು ರನ್ ಗಳಿಸಿದ 7ನೇ ಹಾಗೂ ಇದಕ್ಕೂ ಕೆಳ ಕ್ರಮಾಂಕದ 4ನೇ ಭಾರತೀಯ ಆಟಗಾರ. ಉಳಿದವರೆಂದರೆ ಚಂದು ಬೋರ್ಡೆ, ಎಂ.ಎಸ್. ಧೋನಿ ಮತ್ತು ಆರ್. ಅಶ್ವಿನ್. * ನಿತೀಶ್ ಕುಮಾರ್ ರೆಡ್ಡಿ ಮೊದಲ 4 ಇನ್ನಿಂಗ್ಸ್‌ಗಳಲ್ಲಿ 3 ಸಲ ಟಾಪ್ ಸ್ಕೋರರ್ ಎನಿಸಿದ ವಿಶ್ವದ 8ನೇ ಭಾರತದ 2ನೇ ಆಟಗಾರ. ಸುನೀಲ್ ಗಾವಸ್ಕರ್ ಮೊದಲಿಗ. * ಪ್ಯಾಟ್ ಕಮಿನ್ಸ್ 8ನೇ ಸಲ 5 ಪ್ಲಸ್ ವಿಕೆಟ್ ಉರುಳಿಸಿದ ನಾಯಕರೆನಿಸಿದರು. ಈ ಯಾದಿಯಲ್ಲಿ ಅವರಿಗೆ 3ನೇ ಸ್ಥಾನ. ಇಮ್ರಾನ್ ಖಾನ್ (12) ಮತ್ತು ರಿಚೀ ಬೆನಾಡ್ (9) ಮೊದಲೆರಡು ಸ್ಥಾನದಲ್ಲಿದ್ದಾರೆ. * ಈ ಪಂದ್ಯದಲ್ಲಿ ಭಾರತ ಕೇವಲ 486 ಎಸೆತಗಳನ್ನು ಎದುರಿಸಿತು. ಎರಡೂ ಇನ್ನಿಂಗ್ಸ್‌ಗಳಲ್ಲಿ ಆಲೌಟ್ ಆದ ವೇಳೆ ಭಾರತ ಎದುರಿಸಿದ 4ನೇ ಅತೀ ಕಡಿಮೆ ಎಸೆತಗಳ ದಾಖಲೆ ಇದಾಗಿದೆ. ಇಂಗ್ಲೆಂಡ್ ಎದುರಿನ 1952ರ ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಅತ್ಯಂತ ಕಡಿಮೆ 349 ಎಸೆತಗಳನ್ನು ಎದುರಿಸಿತ್ತು. * ಭಾರತ 19ನೇ ಸಲ 10 ವಿಕೆಟ್ ಸೋಲಿಗೆ ತುತ್ತಾಯಿತು. ಈ ಯಾದಿಯಲ್ಲಿ 3ನೇ ಸ್ಥಾನ. ಆಸ್ಟ್ರೇಲಿಯ (32) ಮತ್ತು ಇಂಗ್ಲೆಂಡ್ (25) ಮೊದಲೆರಡು ಸ್ಥಾನದಲ್ಲಿವೆ. ಸಂಕ್ಷಿಪ್ತ ಸ್ಕೋರ್: ಭಾರತ: 180 ಮತ್ತು 175 ಆಸ್ಟ್ರೇಲಿಯಾ: 337 ಮತ್ತು 22