Advertisement

ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ ಆಸೀಸ್ ಕೀಪರ್ ಪೀಟರ್ ನೆವಿಲ್

01:00 PM Apr 01, 2022 | Team Udayavani |

ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದಲ್ಲಿ ವಿಕೆಟ್ ಕೀಪರ್ ಆಗಿದ್ದ ಪೀಟರ್ ನೆವಿಲ್ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ. ಪದೇ ಪದೇ ಗಾಯದಿಂದ ಬಳಲುತ್ತಿರುವ ಪೀಟರ್ ನೆವಿಲ್ ತನ್ನ ಕ್ರಿಕೆಟ್ ವೃತ್ತಿ ಜೀವನವನ್ನು ಅಂತಿಮಗೊಳಿಸಲು ನಿರ್ಧರಿಸಿದ್ದಾರೆ.

Advertisement

ಇತ್ತೀಚೆಗೆ ನ್ಯೂ ಸೌತ್ ವೇಲ್ಸ್ ಪರವಾಗಿ ಆಡುತ್ತಿದ್ದ ಪೀಟರ್ ನೆವಿಲ್ ಭುಜದ ಗಾಯಕ್ಕೆ ಒಳಗಾಗಿದ್ದರು. ಹೀಗಾಗಿ ಕಳೆದ ಫೆಬ್ರವರಿಯಿಂದ ಆಡಲು ಸಾಧ್ಯವಾಗಿರಲಿಲ್ಲ.

“ನಾನು ನನ್ನ ವೃತ್ತಿಜೀವನದ ಅಂತ್ಯಕ್ಕೆ ಹತ್ತಿರವಾಗಿದ್ದೇನೆ ಎಂದು ನನಗೆ ಯಾವಾಗಲೂ ತಿಳಿದಿತ್ತು. ಇದು ನನಗೆ ನಿರಾಶಾದಾಯಕ ಋತುವಾಗಿದೆ, ನನ್ನ ವೃತ್ತಿಜೀವನದ ಉಳಿದ ಭಾಗಗಳಿಗಿಂತ ಗಾಯದ ಕಾರಣದಿಂದ ಈ ಋತುವಿನಲ್ಲಿ ನಾನು ಹೆಚ್ಚಿನ ಪಂದ್ಯಗಳನ್ನು ಕಳೆದುಕೊಂಡಿದ್ದೇನೆ. ನಾನು ಆಸ್ಟ್ರೇಲಿಯಾಕ್ಕಾಗಿ ಆಡಿದ್ದೇನೆಂದು ಹೇಳಿಕೊಳ್ಳಲು ನಾನು ತುಂಬಾ ಹೆಮ್ಮೆಪಡುತ್ತೇನೆ” ಎಂದು ನೆವಿಲ್ ಹೇಳಿದರು.

ಇದನ್ನೂ ಓದಿ:ರಿಯಾಲಿಟಿ ಶೋನಿಂದ ಮಕ್ಕಳಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ಸ್ವಪ್ರಜ್ಞೆಯ ಅಪಾಯ: ಪಲ್ಲವಿ

2015ರ ಆ್ಯಶಸ್ ಸರಣಿಯಲ್ಲಿ ಪೀಟರ್ ನೆವಿಲ್ ಆಸೀಸ್ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದರು. 17 ಟೆಸ್ಟ್ ಪಂದ್ಯವಾಡರುವ ನೆವಿಲ್ 468 ರನ್ ಗಳಿಸಿದ್ದಾರೆ. 2016ರ ನವೆಂಬರ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನೆವಿಲ್ ಕೊನೆಯ ಬಾರಿ ಆಸೀಸ್ ಟೆಸ್ಟ್ ತಂಡದಲ್ಲಿ ಕಾಣಿಸಿಕೊಂಡಿದ್ದರು. ಒಂಬತ್ತು ಟಿ20 ಪಂದ್ಯವಾಡಿರುವ ನೆವಿಲ್ ಗೆ ಏಕದಿನ ಪಂದ್ಯವಾಡುವ ಅವಕಾಶ ಸಿಕ್ಕಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next