ಅಡಿಲೇಡ್: ಡೇ ನೈಟ್ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಕುಸಿತ ಮೊದಲ್ಗೊಂಡಿದೆ. ಆಸ್ಟ್ರೇಲಿಯದ 511ಕ್ಕೆ (7 ವಿಕೆಟಿಗೆ ಡಿಕ್ಲೇರ್) ಉತ್ತರವಾಗಿ ದ್ವಿತೀಯ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 102 ರನ್ ಮಾಡಿದೆ.
ಆಸ್ಟ್ರೇಲಿಯ 3ಕ್ಕೆ 330 ರನ್ ಗಳಿಸಿದಲ್ಲಿಂದ ದಿನದಾಟ ಮುಂದುವರಿಸಿತ್ತು. 120 ರನ್ ಮಾಡಿ ಆಡುತ್ತಿದ್ದ ಮಾರ್ನಸ್ ಲಬುಶೇನ್ 163 ರನ್ ಬಾರಿಸಿದರು (305 ಎಸೆತ, 14 ಬೌಂಡರಿ). 114ರಲ್ಲಿದ್ದ ಟ್ರ್ಯಾವಿಸ್ ಹೆಡ್ 175 ರನ್ ಮಾಡಿ ರನೌಟಾದರು (219 ಎಸೆತ, 20 ಬೌಂಡರಿ). ಆಸೀಸ್ ಸರದಿಯ ಈ ಬೃಹತ್ ಮೊತ್ತದಲ್ಲಿ ಒಂದೂ ಸಿಕ್ಸರ್ ಇರಲಿಲ್ಲವೆಂಬುದು ವಿಶೇಷ.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯ-7 ವಿಕೆಟಿಗೆ 511 ಡಿಕ್ಲೇರ್ (ಹೆಡ್ 175, ಲಬುಶೇನ್ 163, ಖ್ವಾಜಾ 62, ಡೇವನ್ ಥಾಮಸ್ 53ಕ್ಕೆ 2, ಅಲ್ಜಾರಿ ಜೋಸೆಫ್ 107ಕ್ಕೆ 2). ವೆಸ್ಟ್ ಇಂಡೀಸ್-4 ವಿಕೆಟಿಗೆ 102 (ತೇಜ್‌ನಾರಾಯಣ್ ಚಂದರ್‌ಪಾಲ್ ಬ್ಯಾಟಿಂಗ್ 47, ನೇಸರ್ 20ಕ್ಕೆ 2).