ಲಾಹೋರ್: ಭದ್ರತಾ ಭೀತಿಯಿಂದ ನ್ಯೂಜಿಲ್ಯಾಂಡ್, ಇಂಗ್ಲೆಂಡ್ ತಂಡಗಳು ಇತ್ತೀಚೆಗಷ್ಟೇ ಪಾಕಿಸ್ಥಾನ ಕ್ರಿಕೆಟ್ ಪ್ರವಾಸದಿಂದ ಹಿಂದೆ ಸರಿದಿದ್ದವು. ಪಾಕಿಸ್ಥಾನ ಈ ಆಘಾತದಲ್ಲಿರುವಾಗಲೇ ಆಸ್ಟ್ರೇಲಿಯ ಕ್ರಿಕೆಟ್ ತಂಡ ತನ್ನ ಪಾಕ್ ಪ್ರವಾಸದ ಸುಳಿವು ನೀಡಿದೆ.
ಮುಂದಿನ ವರ್ಷ ಪೂರ್ಣ ಪ್ರಮಾಣದ ಪ್ರವಾಸಕ್ಕೆ ತೆರಳುವುದು ಖಚಿತವಾಗಿದೆ.
ಇದು ಪಾಕ್ ಕ್ರಿಕೆಟ್ ಪಾಲಿಗೆ ಅತ್ಯಂತ ಮಹತ್ವದ ಸುದ್ದಿಯಾಗಿದೆ. 24 ವರ್ಷಗಳ ಅನಂತರ ಆಸ್ಟ್ರೇಲಿಯ ತಂಡ ಪಾಕ್‌ಗೆ ಹೊರಟಿದೆ ಎನ್ನುವುದನ್ನು ಇಲ್ಲಿ ಗಮನಿಸಬೇಕು. ಆಸ್ಟ್ರೇಲಿಯ ಕೊನೆಯ ಸಲ 1998ರಲ್ಲಿ ಪಾಕಿಸ್ಥಾನಕ್ಕೆ ತೆರಳಿತ್ತು.
ಮುಂದಿನ ವರ್ಷ ಮಾರ್ಚ್‌ನಲ್ಲಿ ಆಸ್ಟ್ರೇಲಿಯ ಪ್ರವಾಸ ಆರಂಭವಾಗಲಿದೆ. ಮಾ. 3ರಿಂದ ಮಾ. 25ರ ನಡುವೆ 3 ಟೆಸ್ಟ್ ಪಂದ್ಯಗಳನ್ನು ಆಡಲಾಗುವುದು. 4 ಸೀಮಿತ ಓವರ್‌ಗಳ ಪಂದ್ಯವೂ ನಡೆಯಲಿದೆ.
ಇದನ್ನೂ ಓದಿ:ಐಸಿಸಿ ಟಿ-20 ವಿಶ್ವಕಪ್: ಕ್ಯಾಪ್ಟನ್ ಕೊಹ್ಲಿಗೆ ಗೆಲುವಿನ ವಿದಾಯ