Advertisement

WTC title ; ಆಸ್ಟ್ರೇಲಿಯ ರಣತಂತ್ರ: ಭಾರತಕ್ಕೆ ಬೃಹತ್ ಗುರಿ ನೀಡಿ ಶಾಕ್

07:43 PM Jun 10, 2023 | Team Udayavani |

ಲಂಡನ್: ಇಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಸ್ಟ್ರೇಲಿಯ ಶನಿವಾರ ನಾಲ್ಕನೇ ದಿನದ ಆಟದಲ್ಲಿ 8 ವಿಕೆಟ್ ನಷ್ಟಕ್ಕೆ 270 ರನ್ ಗಳಿಸಿ ಎರಡನೇ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದು,ಭಾರತಕ್ಕೆ 444 ರನ್‌ಗಳ ಬೃಹತ್ ಗುರಿಯನ್ನು ನೀಡಿದೆ.

Advertisement

ಬೃಹತ್ ಗುರಿ ಬೆನ್ನಟ್ಟಿದ ಭಾರತ ಎರಡನೇ ಇನ್ನಿಂಗ್ಸ್ ನಲ್ಲಿ 41 ರನ್ ಆಗುವಷ್ಟರಲ್ಲಿ ಶುಭ್ ಮನ್ ಗಿಲ್ ಅವರ ಮೊದಲ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿದೆ.

ಆಸ್ಟ್ರೇಲಿಯ ಮೊದಲ ಇನಿಂಗ್ಸ್‌ನಲ್ಲಿ 173 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿತ್ತು. ಶನಿವಾರ 4 ವಿಕೆಟ್‌ಗೆ 123 ರನ್‌ಗಳಿಂದ ಆಟ ಪುನರಾರಂಭಿಸಿ 147 ರನ್‌ಗಳನ್ನು ಸೇರಿಸಿ ನಾಯಕ ಪ್ಯಾಟ್ ಕಮಿನ್ಸ್ ನಾಲ್ಕನೇ ದಿನದ ಊಟದ ನಂತರದ ಅವಧಿಯ ಒಂದು ಗಂಟೆಯಲ್ಲಿ ಇನ್ನಿಂಗ್ಸ್ ಅನ್ನು ಡಿಕ್ಲೇರ್ ಮಾಡಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಅಜೇಯ 66 ರನ್ ಗಳಿಸಿದ ಅಲೆಕ್ಸ್ ಕ್ಯಾರಿ ಆಸ್ಟ್ರೇಲಿಯದ ಪರ ಗರಿಷ್ಠ ಸ್ಕೋರರ್ ಆಗಿದ್ದರು.

ಮೊಹಮ್ಮದ್ ಶಮಿ (2/39), ರವೀಂದ್ರ ಜಡೇಜಾ (3/58), ಉಮೇಶ್ ಯಾದವ್ (2/54) ಮತ್ತು ನಾಲ್ಕನೇ ದಿನದಂದು ಭಾರತದ ನಾಲ್ಕು ವಿಕೆಟ್‌ಗಳನ್ನು ಪಡೆದರು.

ಅಗ್ರ ಕ್ರಮಾಂಕ ಕುಸಿದ ನಂತರ ಅಜಿಂಕ್ಯ ರಹಾನೆ (89) ಮತ್ತು ಶಾರ್ದೂಲ್ ಠಾಕೂರ್ (51) ಮೊದಲ ಇನ್ನಿಂಗ್ಸ್‌ನಲ್ಲಿ ಭಾರತವನ್ನು 296 ರನ್‌ಗಳಿಗೆ ಮುನ್ನಡೆಸಿದ್ದರು.

Advertisement

ಸಂಕ್ಷಿಪ್ತ ಸ್ಕೋರ್ 

ಆಸ್ಟ್ರೇಲಿಯ: 469 ಮತ್ತು 84.3 ಓವರ್‌ಗಳಲ್ಲಿ 8 ವಿಕೆಟ್‌ಗೆ 270 ಡಿಕ್ಲೇರ್ಡ್ (ಅಲೆಕ್ಸ್ ಕ್ಯಾರಿ ಔಟಾಗದೆ 66, ಸ್ಟಾರ್ಕ್ 41, ರವೀಂದ್ರ ಜಡೇಜಾ 3/58).
ಭಾರತ ಮೊದಲ ಇನಿಂಗ್ಸ್: 296

Advertisement

Udayavani is now on Telegram. Click here to join our channel and stay updated with the latest news.

Next